CrimeNational

ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಹೆಸರಲ್ಲೇ ವಂಚನೆ!

ನವದೆಹಲಿ; ಫೇಸ್‌ಬುಕ್‌ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣದಲ್ಲಿ ನಕಲಿ ಖಾತೆಗಳನ್ನು ತೆರೆದು ಹಣ ಕೇಳುವ ಪರಿಪಾಠ ಇತ್ತೀಚೆಗೆ ಜಾಸ್ತಿಯಾಗಿದೆ.. ಈ ಬಗ್ಗೆ ಜನ ಸಾಕಷ್ಟು ಎಚ್ಚೆತ್ತುಕೊಂಡಿದ್ದರೂ ಇದು ಈಗಲೂ ಮುಂದುವರೆದಿದ್ದು, ಕೆಲವರು ಮೋಸ ಕೂಡಾ ಹೋಗುತ್ತಿದ್ದಾರೆ.. ಇದೇ ರೀತಿ ದುಷ್ಕರ್ಮಿಯೊಬ್ಬ ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಅವರ ಹೆಸರಲ್ಲೇ ನಕಲಿ ಖಾತೆ ಸೃಷ್ಟಿ ಮಾಡಿ ಹಣ ಕೇಳಿದ್ದಾರೆ.. ದೇಶದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಹೆಸರನ್ನೇ ಆತ ದುರ್ಬಳಕೆ ಮಾಡಿಕೊಳ್ಳಲು ಹೋಗಿದ್ದಾನೆ.. ಅದೂ ಕೂಡಾ 500 ರೂಪಾಯಿಗಾಗಿ..

ಇದನ್ನೂ ಓದಿ; ಹಾವಿನ ಬಾಯಲ್ಲಿ ನಾಲಗೆ ಇಟ್ಟ ಯುವಕ!; ಮುಂದೇನಾಯ್ತು..?

ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಹೆಸರಲ್ಲಿ ಫೇಸ್‌ ಬುಕ್‌ ಖಾತೆ ಶುರು ಮಾಡಿದ ದುಷ್ಕರ್ಮಿ, ವ್ಯಕ್ತಿಯೊಬ್ಬರಿಗೆ ಮೆಸೆಂಜರ್‌ನಲ್ಲಿ ಮೆಸೇಜ್‌ ಮಾಡಿದ್ದಾನೆ.. ನಾನು ಮೀಟಿಂಗ್‌ ಒಂದಕ್ಕೆ ಅರ್ಜೆಂಟ್‌ ಹೋಗಬೇಕಿದೆ.. ಕ್ಯಾಬ್‌ಗಾಗಿ 500 ರೂಪಾಯಿ ಬೇಕಾಗಿದೆ.. ಈಗ ಕಳುಹಿಸಿದರೆ ನಾನು ಕೋರ್ಟ್‌ಗೆ ಹೋದ ತಕ್ಷಣ ಹಿಂತಿರುಗಿಸುತ್ತೇನೆ ಎಂದು ದುಷ್ಕರ್ಮಿ ಕೇಳಿದ್ದಾನೆ.. ಇದರ ಸ್ಕ್ರೀನ್‌ ಶಾಟ್‌ ಈಗ ಎಲ್ಲೆಡೆ ವೈರಲ್‌ ಆಗುತ್ತಿದೆ..

ಇದನ್ನೂ ಓದಿ; ವರ ಇಲ್ಲದೆ ನಡೆಯಿತು ಮದುವೆ!; ಹನಿಮೂನ್‌ಗೆ ಹೋಗಿದ್ದು ಕೂಡಾ ಒಬ್ಬಳೇ!

ಈ ಸಂಬಂಧ ನ್ಯಾಯಮೂರ್ತಿ ಚಂದ್ರಚೂಡ್‌ ಸೂಚನೆ ಮೇರೆಗೆ ಆಗಸ್ಟ್‌ 27ರಂದು ಸೈಬರ್‌ ಕ್ರೈಂ ಸೆಲ್‌ನಲ್ಲಿ ದೂರು ದಾಖಲು ಮಾಡಲಾಗಿದೆ.. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ..

Share Post