LifestyleNational

ಹಾವಿನ ಬಾಯಲ್ಲಿ ನಾಲಗೆ ಇಟ್ಟ ಯುವಕ!; ಮುಂದೇನಾಯ್ತು..?

ನವದೆಹಲಿ; ಸಾಮಾಜಿಕ ಜಾಲತಾಣಗಳಿಂದಾಗಿ ಜನರು ಹೇಗೇಗೋ ಆಡೋದಕ್ಕೆ ಶುರು ಮಾಡಿದ್ದಾರೆ.. ಜನರ ಗಮನ ಸೆಳೆಯೋದಕ್ಕೆ ದುಸ್ಸಾಹಸಗಳನ್ನೇ ಮಾಡುತ್ತಿದ್ದಾರೆ.. ಜೀವಕ್ಕೆ ಅಪಾಯ ಕೂಡಾ ತಂದೊಡ್ಡುಕೊಳ್ಳುತ್ತಿದ್ದಾರೆ.. ಇಲ್ಲೊಬ್ಬ ಇದೇ ರೀತಿಯ ಸಾಹಸ ಮಾಡಿದ್ದಾನೆ.. ಯುವಕನೊಬ್ಬ ತನ್ನ ನಾಲಿಗೆಯನ್ನು ನೇರವಾಗಿ ಹಾವಿನ ಬಾಯಿಗೆ ಇಟ್ಟಿದ್ದಾನೆ..

ಇದನ್ನೂ ಓದಿ; ಪೊದೆಯಲ್ಲಿ ಸಿಕ್ಕ ಸೂಟ್‌ಕೇಸ್‌ನಲೇನಿತ್ತು..?; ಆ ಮಹಿಳೆ ಮಾಡಿದ್ದಾದ್ರೂ ಏನು..?

ಜೀವಂತ ಹಾವನ್ನು ಹಿಡಿದಿರುವ ಯುವಕ ಅದರೊಂದಿಗೆ ಸರಸ ಆಡೋದಕ್ಕೆ ಹೋಗಿದ್ದಾನೆ.. ಅದೂ ಯಾವ ಹಂತಕ್ಕೆ ಅಂದ್ರೆ ಆತ ತನ್ನ ನಾಲಗೆಯನ್ನು ಹಾವಿನ ಬಾಯೊಳಗೆ ಇಡುತ್ತಾರೆ.. ವಿಚಿತ್ರ ಏನು ಅಂದ್ರೆ ಆ ಹಾವು ಆತನನ್ನು ಕಚ್ಚೋದಿಲ್ಲ.. ಕಚ್ಚಿದ್ದರೆ ಇಷ್ಟೊತ್ತಿಗಾಗಲೇ ಆತ ಪರಲೋಕ ಸೇರಬೇಕಾಗಿತ್ತು..

ಇದನ್ನೂ ಓದಿ; ವರ ಇಲ್ಲದೆ ನಡೆಯಿತು ಮದುವೆ!; ಹನಿಮೂನ್‌ಗೆ ಹೋಗಿದ್ದು ಕೂಡಾ ಒಬ್ಬಳೇ!

ಹಾವನ್ನು ಒಂದು ಕೈಯಲ್ಲಿ ಹಿಡಿದುಕೊಳ್ಳುವ ಯುವಕ ಅದು ಬಾಯಿ ತೆರೆದಿದ್ದರೆ ಅಲ್ಲಿಗೆ ತನ್ನ ನಾಲಗೆಯನ್ನು ತೆಗೆದುಕೊಂಡು ಹೋಗುತ್ತಾನೆ.. ಆಗ ಹಾವು ಆ ನಾಲಗೆಯನ್ನು ಹಿಡಿಯುತ್ತದೆ.. ಆದ್ರೆ ಕಚ್ಚೋದಿಲ್ಲ.. ನಾಲಗೆಯನ್ನು ಹಿಡಿದು ಹಾಗೆಯೇ ಬಿಡುತ್ತದೆ.. ಹೀಗೆ ಯುವಕ ಹಾವಿನೊಂದಿಗೆ ಸರಸವಾಡಿದ್ದು, ಅದರ ವಿಡಿಯೋ ಈಗ ಎಲ್ಲೆಡೆ ವೈರಲ್‌ ಆಗುತ್ತಿದೆ.. ಅಂಗಾರ ಶೋಜಿ ಎಂಬಾತ ತನ್ನ ಇನ್ಸ್ಟಾಗ್ರಾಂನಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾನೆ.. ಈತ ಆಗಾಗ ಹೀಗೆ ಹಾವುಗಳೊಂದಿಗೆ ಆಟವಾಡುವ ವಿಡಿಯೋಗಳನ್ನು ಸಾಕಷ್ಟು ಬಾರಿ ಹಂಚಿಕೊಂಡಿದ್ದಾನೆ..

ಇದನ್ನೂ ಓದಿ; ಹೆಣ್ಣುಮಕ್ಕಳ ಮದುವೆ ವಯಸ್ಸು 21 ವರ್ಷಕ್ಕೆ ಏರಿಕೆ!

Share Post