LifestyleNational

ಹೆಣ್ಣುಮಕ್ಕಳ ಮದುವೆ ವಯಸ್ಸು 21 ವರ್ಷಕ್ಕೆ ಏರಿಕೆ!

ಹಿಮಾಚಲ; ಮದುವೆಯಾಗಲು ಗಂಡಿಗೆ ಕನಿಷ್ಠ 21 ವರ್ಷ ಹಾಗೂ ಹೆಣ್ಣಿಗೆ ಕನಿಷ್ಠ 18 ವರ್ಷ ವಯಸ್ಸಿರಬೇಕು.. ಆದ್ರೆ ಈ ಕಾನೂನು ಈಗ ಬದಲಾಗುತ್ತಿದೆ.. ಇನ್ಮೇಲೆ ಹೆಣ್ಣು ಮದುವೆಯಾಗಲು ಕನಿಷ್ಟ 21 ವರ್ಷ ವಯಸ್ಸಾಗಿರಬೇಕು ಎಂದು ಕಾನೂನು ಮಾಡಲಾಗಿದೆ.. ಹಿಮಾಚಲ ವಿಧಾನಸಭೆಯಲ್ಲಿ ಇಂತಹದ್ದೊಂದು ಮಸೂದೆಗೆ ಸರ್ವಾನುಮತದ ಒಪ್ಪಿಗೆ ಸಿಕ್ಕಿದೆ.. ಹಿಮಾಚಲ ಪ್ರದೇಶ ಬಾಲ್ಯ ವಿವಾಹ ನಿಷೇಧ ಮಸೂದೆ-2024ಗೆ ವಿಧಾನಸಭೆ ಗ್ರೀನ್‌ ಸಿಗ್ನಲ್‌ ಕೊಟ್ಟಿದ್ದು, ರಾಜ್ಯಪಾಲರು ಅಂಕಿತ ಹಾಕಿದರೆ ಆ ರಾಜ್ಯದಲ್ಲಿ ಹೊಸ ಕಾನೂನು ಜಾರಿಗೆ ಬರಲಿದೆ..

ಇದನ್ನೂ ಓದಿ; ಪೊದೆಯಲ್ಲಿ ಸಿಕ್ಕ ಸೂಟ್‌ಕೇಸ್‌ನಲೇನಿತ್ತು..?; ಆ ಮಹಿಳೆ ಮಾಡಿದ್ದಾದ್ರೂ ಏನು..?

ಹೆಣ್ಣು ಮಕ್ಕಳಿಗೆ 18 ವರ್ಷಕ್ಕೆಲ್ಲಾ ಸ್ವಂತ ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಬಂದಿರೋದಿಲ್ಲ.. ಜೊತೆಗೆ ಈಗ ಲಿಂಗ ಸಮಾನತೆ ಒದಗಿಸುವುದು ಅಗತ್ಯ.. ಈ ಹಿನ್ನೆಲೆಯಲ್ಲಿ ಹಿಮಾಚಲ ಪ್ರದೇಶ ಸರ್ಕಾರ ಈ ತೀರ್ಮಾನ ಕೈಗೊಂಡಿದೆ.. ರಾಜ್ಯಪಾಲರು ಅಂಕಿತ ಹಾಕಿದರೆ, ಹಿಮಾಚಲ ಪ್ರದೇಶದಲ್ಲಿ ಹೆಣ್ಣು ಮಕ್ಕಳ ಮದುವೆ ವಯಸ್ಸು 21ಕ್ಕೇರಲಿದೆ.. ಕನಿಷ್ಟ 21 ವರ್ಷ ವಯಸ್ಸಾದ ಹೆಣ್ಣು ಮಕ್ಕಳು ಮಾತ್ರ ಮದುವೆಯಾಗಲು ಅರ್ಹರಾಗುತ್ತಾರೆ.. ಒಂದು ವೇಳೆ ಹಿಮಾಚಲದಲ್ಲಿ ಈ ಕಾನೂನು ಜಾರಿಯಾದರೆ ಇತರೆ ರಾಜ್ಯಗಳಲ್ಲೂ ಈ ಬಗ್ಗೆ ಯೋಚನೆ ಮಾಡುವ ಸಾಧ್ಯತೆ ಇದೆ..

ಇದನ್ನೂ ಓದಿ; ದರ್ಶನ್‌ ಬಳ್ಳಾರಿ ಜೈಲಿಗೆ, ಪವಿತ್ರಾ ಗೌಡ ಎಲ್ಲಿಗೆ..?

Share Post