CrimeNational

ವಿಪರೀತ ಖರ್ಚು ಮಾಡಿಸುತ್ತಿದ್ದ ಪತ್ನಿಯನ್ನು ಕೊಲೆ ಮಾಡಿದ ಪತಿ!

ಗ್ವಾಲಿಯರ್(Madhyapradesh); ಪತ್ನಿಯ ಐಶಾರಾಮಿ ಜೀವನ ಶೈಲಿ, ಸಂಪಾದನೆಗಿಂತ ಹೆಚ್ಚು ಖರ್ಚು ಮಾಡುತ್ತಿದ್ದ ಪತ್ನಿಯಿಂದ ಬೇಸತ್ತ ಗಂಡನೊಬ್ಬ ಆಕೆಯನ್ನು ಕೊಲೆ ಮಾಡಿ, ಅಪಘಾತದಲ್ಲಿ ಸಾವನ್ನಪ್ಪಿದ್ದಾಳೆ ಎಂದು ನಂಬಿಸಿದ್ದ ಘಟನೆ ನಡೆದಿದೆ.. ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಈ ಘಟನೆ ನಡೆದಿದ್ದು, ಹೇಮಂತ್‌ ಶರ್ಮಾ ಎಂಬಾತ ತನ್ನ ಪತ್ನಿ ದುರ್ಗಾವತಿಯನ್ನು ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ..

ಇದನ್ನೂ ಓದಿ; ಚೇಳು ಕಚ್ಚಿದರೂ ಭಯದಿಂದ ಹೇಳಲಿಲ್ಲ; ಸಾವನ್ನಪ್ಪಿದ ಬಾಲಕ!

2021ರಲ್ಲಿ ಹೇಮಂತ್‌ ಶರ್ಮಾ ಹಾಗೂ ದುರ್ಗಾವತಿ ಬೇರೆ ಬೇರೆ ವ್ಯಕ್ತಿಗಳನ್ನು ಮದುವೆಯಾಗಿದ್ದರು.. ಆದ್ರೆ ಈ ಇಬ್ಬರೂ ವಿವಾಹೇತರ ಸಂಬಂಧ ಹೊಂದಿದ್ದರು.. ಆದ್ರೆ 2022ರಲ್ಲಿ ಇಬ್ಬರೂ ತಮ್ಮ ತಮ್ಮ ಸಂಗಾತಿಗಳಿಗೆ ವಿಚ್ಛೇದನ ನೀಡಿದ್ದರು.. ನಂತರ 2023ರಲ್ಲಿ ಹೇಮಂತ್‌ ಶರ್ಮಾ ಹಾಗೂ ದುರ್ಗಾವತಿ ಕಾನೂನುಬದ್ಧವಾಗಿ ವಿವಾಹವಾಗಿದ್ದರು.. ಆದ್ರೆ ಅಷ್ಟರಲ್ಲಾಗಲೇ ದುರ್ಗಾವತಿ ಐಶಾರಾಮಿ ಜೀವನಕ್ಕೆ ಒಗ್ಗಿಕೊಂಡಿದ್ದಳು.. ವಿಪರೀತ ಹಣ ಖರ್ಚು ಮಾಡುತ್ತಿದ್ದಳು.. ಹೇಮಂತ್‌ ಶರ್ಮಾ ಸಂಪಾದನೆಗೂ ಮೀರಿದ ಖರ್ಚದು.. ಇದರಿಂದಾಗಿ ಹೇಮಂತ್‌ ಸಾಲ ಮಾಡಿ ಸಂಸಾರ ನಡೆಸಬೇಕಾದ ಅನಿವಾರ್ಯತೆ ಎದುರಾಯಿತು..

ಇದನ್ನೂ ಓದಿ; ಬರೀ 6 ಸಾವಿರಕ್ಕೆ ಹೆಣ್ಣು ಮಗುವನ್ನು ಮಾರಿದ ಮಹಾತಾಯಿ!

ಇದರಿಂದ ಸಾಕಷ್ಟು ನೊಂದಿದ್ದ ಹೇಮಂತ್‌ ಶರ್ಮಾ ತನ್ನ ಪತ್ನಿಯನ್ನು ಕೊಲೆ ಮಾಡಲು ಪ್ಲ್ಯಾನ್‌ ಮಾಡಿದ್ದಾನೆ.. ಸ್ನೇಹಿತ ಹಾಗೂ ಇನ್ನೊಬ್ಬ ವ್ಯಕ್ತಿಯ ನೆರವಿನೊಂದಿಗೆ ಆ ಕೆಲಸ ಮಾಡಿ ಮುಗಿಸಿದ್ದಾನೆ.. ಪತ್ನಿಯ ಕೊಲೆಗೆ ಹೇಮಂತ್‌ 2.5 ಲಕ್ಷ ರೂಪಾಯಿಗೆ ಸುಪಾರಿ ನೀಡಿದ್ದ ಎಂದು ತಿಳಿದುಬಂದಿದೆ.. ಆಗಸ್ಟ್‌ 13 ಪತ್ನಿ ದುರ್ಗಾವತಿ, ಆಕೆಯ ಸಹೋದರ ಸಂದೇಶ್‌ ಜೊತೆ ಹೇಮಂತ್‌ ಶರ್ಮಾ ದೇವಸ್ಥಾನಕ್ಕೆ ಹೋಗಿದ್ದರು.. ವಾಪಸ್‌ ಬರುವಾಗ ಹೇಮಂತ್‌ ಶರ್ಮಾ ಹೇಳಿದಂತೆ ದುರ್ಗಾವತಿ ಹಾಗೂ ಆಕೆಯ ಸಹೋದರ ಸಂದೇಶ್‌ ಇದ್ದ ಬೈಕ್‌ಗೆ ಕಾರಿನಿಂದ ಡಿಕ್ಕಿ ಹೊಡೆಸಲಾಗಿತ್ತು.. ಇದರಲ್ಲಿ ಗಂಭಿರವಾಗಿ ಗಾಯಗೊಂಡಿದ್ದ ದುರ್ಗಾವತಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಳು.. ಆಕೆಯ ಸಹೋದರ ಸಂದೇಶ್‌ಗೆ ಗಾಯಗಳಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ..

ಇದನ್ನೂ ಓದಿ; ಬೆಟ್ಟಿಂಗ್‌ ಆಡಿ ಲಾಸ್‌ ಆಗಿದ್ದೀರಾ..?; ಬದುಕು ಗೆಲ್ಲೋದಕ್ಕೆ ಇದ್ದೇಇದೆ ದಾರಿ…

ಪೊಲೀಸರು ಮೊದಲಿಗೆ ಇದು ಹಿಟ್‌ ಅಂಡ್‌ ರನ್‌ ಕೇಸ್‌ ಎಂದೇ ಎಲ್ಲರೂ ಭಾವಿಸಿದ್ದರು.. ಆದ್ರೆ ತನಿಖೆ ಶುರುವಾದ ಹತ್ತು ದಿನಗಳ ಬಳಿಕ ಅಸಲಿ ವಿಷಯ ಗೊತ್ತಾಗಿದೆ.. ಪೊಲೀಸರು ಅನುಮಾನದಿಂದ ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ ಮಾಡಿದಾಗ, ಪ್ಲ್ಯಾನ್‌ ಮಾಡಿಯೇ ಅಪಘಾತ ಮಾಡಿರುವುದು ಗೊತ್ತಾಗಿದೆ.. ಕಾರೊಂದು ಬೈಕ್‌ ನ್ನು ಹಿಂಬಾಲಿಸುತ್ತಿರುವುದು, ಬೇಕಂತಲೇ ಡಿಕ್ಕಿ ಹೊಡೆದಿದ್ದು, ಸಿಸಿಟಿವಿಯಲ್ಲಿ ದಾಖಲಾಗಿದೆ.. ಕೂಡಲೇ ಎಚ್ಚೆತ್ತ ಪೊಲೀಸರು, ಪತಿ ಹೇಮಂತ್‌ನನ್ನು ವಿಚಾರಣೆಗೊಳಪಡಿಸಿದಾಗ ನಿಜ ಏನು ಅನ್ನೋದು ಗೊತ್ತಾಗಿದೆ..

Share Post