BusinessLifestyle

ಚಿನ್ನದ ಅಸಲೀತನ ಪರೀಕ್ಷೆ ಮಾಡೋದು ಹೇಗೆ..?; ಯಾವುದು ಅಸಲಿ, ಯಾವುದು ನಕಲಿ?

ಬೆಂಗಳೂರು; ಚಿನ್ನದ ಬೆಲೆಗಳು ಗಗನಕ್ಕೇರುತ್ತಿವೆ.. ಆದರೂ ಕೂಡಾ ಜನರಿಗೆ ಚಿನ್ನದ ಮೇಲಿನ ವ್ಯಾಮೋಹ ಕಡಿಮೆಯಾಗೋದಿಲ್ಲ.. ಚಿನ್ನ ಉಳಿತಾಯ ಕೂಡಾ ಹೌದು, ಚಿನ್ನ ಪ್ರತಿಷ್ಠೆ ಕೂಡಾ ಹೌದು.. ಹಾಗಾದ್ರೆ ಈ ಬೆಲೆಬಾಳುವ ಲೋಹ ಚಿನ್ನದಲ್ಲಿ ಮೋಸ ಆಗೋದಿಲ್ಲವೇ..? ಚಿನ್ನ ಅಸಲಿಯೋ, ನಕಲಿಯೋ ಎಂದು ಕಂಡು ಹಿಡಿಯವುದು ಹೇಗೆ..? ವಂಚನೆಯಿಂದ ತಪ್ಪಿಸಿಕೊಳ್ಳುವುದು ಹೇಗೆ..? ನೋಡೋಣ..

ಇದನ್ನೂ ಓದಿ; ಮುಡಾ ವಿಚಾರದಲ್ಲಿ ರಾಹುಲ್‌ ಗಾಂಧಿ ಮೌನವಾಗಿರುವುದೇಕೆ..?

ಹಾಲ್‌ ಮಾರ್ಕ್‌ ಪರೀಕ್ಷಿಸಿ;
ಚಿನ್ನಾಭರಣ ಖರೀದಿಸುವಾಗ ಅದರ ಮೇಲೆ ಬಿಐಎಸ್ ಹಾಲ್ ಮಾರ್ಕ್ ಇದೆಯೇ ಎಂಬುದನ್ನು ಮೊದಲು ಪರಿಶೀಲನೆ ಮಾಡಬೇಕು.. ಇದು ಚಿನ್ನದ ಶುದ್ಧತೆಯನ್ನು ತಿಳಿಸುತ್ತದೆ.. ಕೇಂದ್ರ ಸರ್ಕಾವು 2021 ರಿಂದ ಚಿನ್ನದ ಮೇಲೆ ಹಾಲ್‌ಮಾರ್ಕ್ ಚಿಹ್ನೆಯನ್ನು ಕಡ್ಡಾಯ ಮಾಡಿದೆ.. ಚಿನ್ನದ ಶುದ್ಧತೆಯನ್ನು ಪರೀಕ್ಷೆ ಮಾಡಿಯೇ ಈ ಚಿಹ್ನೆ ಹಾಕಲಾಗುತ್ತದೆ.. ಹೀಗಾಗಿ ಹಾಲ್‌ ಮಾರ್ಕ್‌ ಚಿಹ್ನೆ ಇದ್ದರೆ ಅದು ಶುದ್ಧ ಚಿನ್ನ ಎಂದು ಪರಿಗಣಿಸಬಹುದು.. ಹಾಗಾಗಿ ಪ್ರತಿಯೊಬ್ಬರೂ ಬಿಐಎಸ್ ಹಾಲ್ ಮಾರ್ಕ್ ಇರುವ ಆಭರಣಗಳನ್ನು ಮಾತ್ರ ಖರೀದಿ ಮಾಡುವುದು ಒಳ್ಳೆಯದು..
ಅಯಸ್ಕಾಂತದಿಂದ ಪರೀಕ್ಷೆ ಮಾಡಿ;
ಚಿನ್ನದ ಶುದ್ಧತೆಯನ್ನು ಪರೀಕ್ಷೆ ಮಾಡುವಾಗ ಅಯಸ್ಕಾಂತವನ್ನು ಕೂಡಾ ಉಪಯೋಗಿಸಬೇಕಾಗುತ್ತದೆ.. ಯಾಕಂದ್ರೆ ಒಮ್ಮೊಮ್ಮೆ ಕೆಲವು ವ್ಯಾಪಾರಿಗಳು ಚಿನ್ನದ ಒಳಭಾಗದಲ್ಲಿ ಕಬ್ಬಿಣ ಹಾಕಿರುತ್ತಾರೆ.. ಹೀಗಾಗಿ ಆಭರಣದ ಬಳಿ ಅಯಸ್ಕಾಂತ ಇಟ್ಟಾಗ, ಅದರಲ್ಲಿ ಕಬ್ಬಿಣ ಇದ್ದರೆ ಅದು ಆಕರ್ಷಿಸುತ್ತದೆ..  ಮ್ಯಾಗ್ನೆಟ್ ನಿಜವಾದ ಚಿನ್ನವನ್ನು ಯಾವುದೇ ಕಾರಣಕ್ಕೂ ಆಕರ್ಷಿಸುವುದಿಲ್ಲ..

ಇದನ್ನೂ ಓದಿ; ಅಸಭ್ಯವಾಗಿ ವರ್ತಿಸಿದ ವೈದ್ಯನಿಗೆ ಹಿಗ್ಗಾಮುಗ್ಗಾ ಗೂಸಾ!

ಮೂರು ರೀತಿಯಲ್ಲಿ ಚಿನ್ನದ ಪರೀಕ್ಷೆ;
ಚಿನ್ನ ಅಸಲಿದ್ದೋ, ಅಲ್ಲವೋ ಎಂದು ತಿಳಿಯಲು ಮೂರು ರೀತಿಯ ಪರೀಕ್ಷೆಗಳನ್ನು ಮಾಡಬಹುದು.. ಒಂದು ಆಮ್ಲ ಪರೀಕ್ಷೆ, ಎರಡನೆಯದು ಎಲೆಕ್ಟ್ರಾನಿಕ್ ಚಿನ್ನದ ಪರೀಕ್ಷೆ, ಮೂರನೆಯದು ನಿಖರ ಗುರುತ್ವಾಕರ್ಷಣೆ ಪರೀಕ್ಷೆ.. ಆಮ್ಲ ಪರೀಕ್ಷೆಯಲ್ಲಿ ನೈಟ್ರಿಕ್ ಆಮ್ಲವನ್ನು ಬಳಸಲಾಗುತ್ತದೆ. ಇದು ಲೋಹದ ಶುದ್ಧತೆ ಪತ್ತೆ ಮಾಡುತ್ತದೆ.. ಶುದ್ಧತೆಯನ್ನು ನಿರ್ಧರಿಸಲು ಎಲೆಕ್ಟ್ರಾನಿಕ್ ಪರೀಕ್ಷೆಯನ್ನು ಬಳಸಲಾಗುತ್ತದೆ. ಚಿನ್ನದ ಸಾಂದ್ರತೆಯನ್ನು ಅಳೆಯಲು ಗ್ರಾವಿಮೆಟ್ರಿಕ್ ಪರೀಕ್ಷೆಯನ್ನು ಬಳಸಲಾಗುತ್ತದೆ.

ಇದನ್ನೂ ಓದಿ; ಆಗಸ್ಟ್‌ 29ರತ್ತ ಎಲ್ಲರ ಚಿತ್ತ!; ಏನಾಗುತ್ತೆ ಮುಡಾ ಕೇಸ್‌..?

ಗಾತ್ರ, ತೂಕ;
ಇದು ಚಿನ್ನದ ಗುಣಮಟ್ಟದ ಪರೀಕ್ಷೆ. ಕೋಸ್ಟಾ ತಜ್ಞರು ಇದನ್ನು ಗುರುತಿಸುತ್ತಾರೆ. ಅವರು ಚಿನ್ನದ ತೂಕವನ್ನು ಅಸಲಿ ಅಥವಾ ನಕಲಿಯೋ ಎಂದು ಗುರುತಿಸುತ್ತಾರೆ. ಆದರೆ, ಇದನ್ನೆಲ್ಲ ಮನೆಯಲ್ಲಿಯೇ ಮಾಡುವುದಕ್ಕೆ ಸಾಧ್ಯವಿಲ್ಲ.. ತಜ್ಞರು ಮಾತ್ರ ಇದನ್ನು ಮಾಡಬೇಕು. ಕೆಲವು ರೀತಿಯ ರಾಸಾಯನಿಕಗಳು ಸಂಪೂರ್ಣವಾಗಿ ನಮಗೆ ಗೊತ್ತಾಗುವುದಿಲ್ಲ.. ಹೀಗಾಗಿ ನಾವೇ ಮನೆಯಲ್ಲಿ ಪರೀಕ್ಷೆ ಮಾಡಲು ಹೋದರೆ ಅವುಗಳಿಂದ ಹಾನಿಯಾಗುವ ಸಂಭವವಿದೆ.. ಆದ್ದರಿಂದ, ತಜ್ಞರ ಮೇಲ್ವಿಚಾರಣೆಯಲ್ಲಿ ಮಾತ್ರ ಇದನ್ನು ಮಾಡಬೇಕಾಗುತ್ತದೆ..

 

Share Post