CrimePolitics

ಕೋರ್ಟ್‌ ಕಣ್ತಪ್ಪಿಸಿದರಾ ಸಿದ್ದರಾಮಯ್ಯ..?; ಏನಿದು ಸಿಎಂ ವಿರುದ್ಧದ ಗಂಭೀರ ಆರೋಪ..?

ಮೈಸೂರು; ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ನಿನ್ನೆಯಷ್ಟೇ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಬರೆದಿರುವ ಪತ್ರವನ್ನು ತಿದ್ದಲಾಗಿದೆ.. ಅದರಲ್ಲಿ ಒಂದು ಸಾಲಿಗೆ ವೈಟ್ನರ್‌ ಹಚ್ಚಲಾಗಿದೆ ಎಂದು ಆರೋಪಿಸಲಾಗಿತ್ತು.. ಆದ್ರೆ ಇದೀಗ ಸಿದ್ದರಾಮಯ್ಯ ವಿರುದ್ಧ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದೆ.. ಹೈಕೋರ್ಟ್‌ನಲ್ಲಿ ಸಲ್ಲಿಸಿರುವ ರಿಟ್‌ ಅರ್ಜಿಯಲ್ಲಿ ಸಿಎಂ ಪತ್ನಿ ಪಾರ್ವತಿಯವರು ಬರೆದಿರುವ ಪತ್ರದ ಮೊದಲ ಪುಟ ಮಾತ್ರ ಲಗತ್ತಿಸಲಾಗಿದೆ.. ವೈಟ್ನರ್‌ನಲ್ಲಿ ಅಳಿಸಲಾದ ಎರಡನೇ ಪುಟ ಲಗತ್ತಿಸಿಲ್ಲ ಅಂತ ಮೈಸೂರಿನ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಅವರು ಆರೋಪ ಮಾಡಿದ್ದಾರೆ..

ಇದನ್ನೂ ಓದಿ; ಭದ್ರಾವತಿ ಶಾಸಕ ಸಂಗಮೇಶ್‌ ಪುತ್ರನ ಕೊಲೆಗೆ ಜೈಲಿಂದಲೇ ಸ್ಕೆಚ್‌!

ಮೈಸೂರಿನಲ್ಲಿ ಮಾತನಾಡಿರುವ ಅವರು, ರಾಜ್ಯಪಾಲರ ಪ್ರಾಸಿಕ್ಯೂಷನ್‌ ಅನುಮತಿಗೆ ತಡೆ ಕೋರಿ ಸಿದ್ದರಾಮಯ್ಯ ಅವರು ಹೈಕೋರ್ಟ್‌ಗೆ ರಿಟ್‌ ಅರ್ಜಿ ಸಲ್ಲಿಸಿದ್ದಾರೆ.. ಇದು 713 ಪುಟಗಳನ್ನು ಒಳಗೊಂಡಿದ್ದು, ಇದರಲ್ಲಿ 531ನೇ ಪುಟವಾಗಿ ಪಾರ್ವತಿಯವರು ಮುಡಾಗೆ ಬರೆದಿರುವ ಪತ್ರ ಲಗತ್ತಿಸಲಾಗಿದೆ.. 532ನೇ ಪುಟದಲ್ಲಿ ಪತ್ರದ ಎರಡನೇ ಪುಟ ಇರಬೇಕಿತ್ತು.. ಆದ್ರೆ ಅಲ್ಲಿ ಆ ಪುಟವನ್ನು ಲಗತ್ತಿಸಿಲ್ಲ.. ಬದಲಾಗಿ 532ನೇ ಪುಟದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ನಡಾವಳಿ ಪತ್ರ ಇದೆ. ವೈಟ್ನರ್ ಹಾಕಿ ಅಳಿಸಿರುವ ಕಾರಣಕ್ಕಾಗಿ ಎರಡನೇ ಪುಟ ಬಿಟ್ಟು ಕೇವಲ ಒಂದು ಪುಟ ಮಾತ್ರ ಕೋರ್ಟ್‌ಗೆ ಕೊಟ್ಟಿದ್ದಾರೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ; ನಾಳೆ ದೆಹಲಿಗೆ ಸಿಎಂ ಸಿದ್ದರಾಮಯ್ಯ!; ರಾಷ್ಟ್ರಪತಿ ಭೇಟಿಯಾಗ್ತಾರಾ..?

Share Post