BengaluruCrime

ಸ್ಮಶಾನದಲ್ಲಿ ಬೆಳೆದು ನಿಂತ ಗಾಂಜಾ ಗಿಡಗಳು!

ಬೆಂಗಳೂರು; ಮನೆ, ಅಪಾರ್ಟ್‌ಮೆಂಟ್‌ಗಳಲ್ಲಿ ಗಾಂಜಾ ಬೆಳೆಸಿ ಸಿಕ್ಕಿಬಿದ್ದವರನ್ನು ನೋಡಿದ್ದೇವೆ.. ಇದೀಗ ಬೆಂಗಳೂರಿನಲ್ಲಿ ಹೊಸದೊಂದು ಟ್ರೆಂಡ್‌ ಶುರುವಾಗಿದೆ.. ಗಾಂಜಾ ಪ್ರಿಯರು, ಡ್ರಗ್‌ ಪೆಡ್ಲರ್‌ಗಳು ಸ್ಮಶಾನಗಳನ್ನೇ ಬಂಡವಾಳ ಮಾಡಿಕೊಂಡು ಅಲ್ಲಿ ಗಾಂಜಾ ಬೆಳೆಸೋದಕ್ಕೆ ಶುರು ಮಾಡಿದ್ದಾರೆ.. ಸ್ಥಳಕ್ಕೆ ಹೋಗಿ ನೋಡಿದ ಪೊಲೀಸರಿಗೆ ಸ್ಮಶಾನದ ತುಂಬೆಲ್ಲಾ ಬೆಳೆದು ನಿಂತಿರೋ ಗಾಂಜಾ ಗಿಡಗಳನ್ನು ನೋಡಿ ತಲೆತಿರುಗಿದೆ..

ಇದನ್ನೂ ಓದಿ; ಗಂಡನ ಎರಡನೇ ಮದುವೆಯಲ್ಲಿ ಮೊದಲ ಹೆಂಡತಿಯ ರಂಪಾಟ!

ಯಲಹಂಕ ಬಳಿಯ ಅಟ್ಟೂರು ಲೇಔಟ್‌ನಲ್ಲಿ ಸ್ಮಶಾನದ ತುಂಬೆಲ್ಲಾ ಗಾಂಜಾ ಗಿಡಗಳು ಬೆಳೆದಿವೆ.. ಸ್ಮಶಾನವಾದರೆ ಯಾರೋ ನೋಡೋದಿಲ್ಲ.. ಯಾರಿಗೂ ಗೊತ್ತಾಗೋದಿಲ್ಲ ಎಂದು ಅರಿತ ಗಾಂಜಾ ಪ್ರಿಯರು ಇಲ್ಲಿ ಗಾಂಜಾ ಬೀಜಗಳನ್ನು ಹಾಕಿ ಬೆಳೆಸಿರೋದು ಸ್ಪಷ್ಟವಾಗಿ ಪೊಲೀಸರಿಗೆ ಕಂಡಿದೆ.. ಇಲ್ಲಾದರೆ ಪೊಲೀಸರಿಗೆ ಗೊತ್ತಾದರೂ ಯಾರ ಮೇಲೆ ಕ್ರಮ ಕೈಗೊಳ್ಳಲು ಸಾಧ್ಯ ಎಂದು ಈ ರೀತಿ ಪ್ಲ್ಯಾನ್‌ ಮಾಡಿದ್ದಾರೆ.. ಇದೀಗ ಪೊಲೀಸರು, ಸ್ಮಶಾನಕ್ಕೆ ಯಾರ್ಯಾರು ಹೆಚ್ಚಾಗಿ ಬರುತ್ತಿದ್ದರು..? ಅವರ ಹಿನ್ನೆಲೆ ಏನು..? ಇತ್ಯಾದಿಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ..

ಇದನ್ನೂ ಓದಿ; 20ರ ಮಾಯಾಂಗನೆಗೆ ಲಕ್ಷ ಲಕ್ಷ ಕಾಣಿಕೆ ಕೊಟ್ಟು ಮೋಸಹೋದ 60ರ ಅರ್ಚಕ..!

ಅನುಮಾನ ಇದ್ದವರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸುವ ಪ್ರಕ್ರಿಯೆ ಕೂಡಾ ಶುರುವಾಗಿದೆ.. ಇನ್ನು ಬೆಂಗೂರಿನಲ್ಲಿರುವ ಇತರೆ ಸ್ಮಶಾನಗಳಲ್ಲಿ ಕೂಡಾ ಪರಿಶೀಲನೆ ನಡೆಸಲು ಪೊಲೀಸರು ಮುಂದಾಗಿದ್ದಾರೆ..

Share Post