BengaluruPolitics

ಚನ್ನಪಟ್ಟಣದಲ್ಲಿ ಜೆಡಿಎಸ್ ಅಭ್ಯರ್ಥಿಯೇ ಸ್ಪರ್ಧೆ; ಯಡಿಯೂರಪ್ಪ

ಚನ್ನಪಟ್ಟಣ; ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಚನ್ನಪ್ಪಟ್ಟಣದಲ್ಲಿ ಜೆಡಿಎಸ್ ಅಭ್ಯರ್ಥಿಯೇ ನಿಲ್ಲೋದು ಎಂದು ಸ್ಪೋಟಕ ಹೇಳಿಕೆ ನೀಡಿದ್ದಾರೆ. ಇದು ಸಿಪಿವೈಗೆ ಆತಂಕ ಹುಟ್ಟಿಸಿದೆ.

ಧವಳಗಿರಿ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿ ಯಡಿಯೂರಪ್ಪ ಅವರು, ಚನ್ನಪಟ್ಟಣದಲ್ಲಿ ಜೆಡಿಸ್‌ನವ್ರು ಯಾರಿಗೆ ಬೇಕೋ ಅವರ ಹೆಸರನ್ನು ಘೋಷಣೆ ಮಾಡಿಕೊಳ್ತಾರೆ. ಈಗಾಗಲೇ ಅಮಿತ್ ಷಾ ಅವರೂ ಚನ್ನಪಟ್ಟಣದಲ್ಲಿ ಜೆಡಿಎಸ್ ನವ್ರು ಘೋಷಣೆ ಮಾಡ್ತಾರೆ ಎಂದು ಹೇಳಿದ್ದಾರೆ. ಚನ್ನಪಟ್ಟಣ ಜೆಡಿಎಸ್‌ನವರ ಕ್ಷೇತ್ರ, ಅವರಿಗೆ ಯಾರು ಬೇಕೋ ಅವರ ಹೆಸರು ಘೋಷಣೆ ಮಾಡ್ತಾರೆ ಎಂದು ಟಿಕೆಟ್ ಜಗ್ಗಾಟಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.

ಬಿಜೆಪಿಯಿಂದ ಎರಡು ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಿಸಲಾಗಿದೆ, ಚನ್ನಪಟ್ಟಣದಲ್ಲಿ ಜೆಡಿಎಸ್ ನವವರು ಅನೌನ್ಸ್ ಮಾಡಿಕೊಳ್ಳಬಹುದು ಅಂತ ಅಮಿತ್ ಷಾ ಹೇಳಿದ್ದಾರೆ. ಹೀಗಾಗಿ ಚನ್ನಪಟ್ಟಣದಲ್ಲಿ ಜೆಡಿಎಸ ನವರೇ ಘೋಷಣೆ ಮಾಡ್ತಾರೆ. ಎರಡೂ ಪಕ್ಷಗಳೂ ಸೇರಿ ಮೂರೂ ಕ್ಷೇತ್ರ ಗೆಲ್ಲೋದಿಕ್ಕೆ ನಿರ್ಧಾರ ಆಗಿದೆ. ಸಿಪಿ ಯೋಗೀಶ್ವರ್ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡ್ತಾರೆ. ಅಂತಿಮವಾಗಿ ಹೈಕಮಾಂಡ್ ಏನು ಹೇಳುತ್ತೋ ಅದರಂತೆ ಆಗಲಿದೆ. ಜೆಡಿಎಸ್ ಚಿನ್ಹೆಯಡಿ ಬಿಜೆಪಿಯವರು ನಿಲ್ಲುವ ಯೋಚನೆ ಇಲ್ಲ ಎಂದು ಹೇಳಿದ್ದಾರೆ.

Share Post