CrimeNational

ನಕಲಿ NCC ಕ್ಯಾಂಪ್‌; ಬಾಲಕಿ ಮೇಲೆ 8 ಜನರಿಂದ ಲೈಂಗಿಕ ದೌರ್ಜನ್ಯ!

ಚೆನ್ನೈ(Tamilnadu); ನಕಲಿ NCC ಕ್ಯಾಂಪ್‌ ಆಯೋಜನೆ ಮಾಡಿ, 13 ವರ್ಷ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ತಮಿಳುನಾಡಿನಲ್ಲಿ ಬೆಳಕಿಗೆ ಬಂದಿದೆ.. ರಾಜಕೀಯ ಪಕ್ಷವೊಂದರ ಸ್ಥಳೀಯ ಮುಖಂಡ ಹಾಗೂ ಇತರ ಏಳು ಮಂದಿ ಈ ಕೃತ್ಯದಲ್ಲಿ ಭಾಗಿಯಾಗಿದ್ದು, ಅವರನ್ನು ಬಂಧಿಸಲಾಗಿದೆ.. ವಿಚಾರಣೆ ವೇಳೆ ಇತರ ನಾಲ್ವರ ಬಾಲಕಿಯರಿಗೂ ಕಿರುಕುಳ ನೀಡಿದ್ದಾರೆ ಎಂದು ಗೊತ್ತಾಗಿದೆ..

ಇದನ್ನೂ ಓದಿ; ಯುವಕನಿಗೆ ಲಿಂಗಪರಿವರ್ತನೆ ಮಾಡಿ ಭಿಕ್ಷಾಟನೆಗೆ ದೂಡಿದ ಮಂಗಳಮುಖಿಯರು!

ಕೃಷ್ಣಗಿರಿ ಜಿಲ್ಲೆಯ ಖಾಸಗಿ ಶಾಲೆಯೊಂದಕ್ಕೆ ಆಗಮಿಸಿದ್ದ ನಾಮ್‌ ತಮಿಳರ್‌ ಕಚ್ಚಿ ಪಾರ್ಟಿಯ ಜಿಲ್ಲಾ ಕಾರ್ಯದರ್ಶಿ ಶಿವರಾಮನ್‌, ಪ್ರಾಂಶುಪಾಲರ ಜೊತೆ ಎನ್‌ಸಿಸಿ ಕ್ಯಾಂಪ್‌ ಆಯೋಜನೆ ಬಗ್ಗೆ ಮಾತನಾಡಿದ್ದರು.. ರಾಜಕಾರಣಿಯ ಹಿನ್ನೆಲೆ ಬಗ್ಗೆ ಸರಿಯಾಗಿ ಗೊತ್ತಿರದ ಪ್ರಾಂಶುಪಾಲರು ಕ್ಯಾಂಪ್‌ಗೆ ಅನುಮತಿ ನೀಡಿದ್ದರು.. ಆಗಸ್ಟ್‌ 5ರಿಂದ 9ರವರೆಗೆ ಈ ಕ್ಯಾಂಪ್‌ ಆಯೋಜನೆ ಮಾಡಲಾಗಿತ್ತು.. ಇದರಲ್ಲಿ 17 ಬಾಲಕಿಯರು ಸೇರಿ 42 ಮಂದಿ ಪಾಲ್ಗೊಂಡಿದ್ದರು..

ಇದನ್ನೂ ಓದಿ; ಮೋದಿಗೆ 75 ವರ್ಷವಾಗ್ತಿದೆ; ಬದಲಾಗ್ತಾರಾ ಪ್ರಧಾನಿ..?

ಶಿಬಿರದಲ್ಲಿ ರಾತ್ರಿ ವೇಳೆ ಉಳಿದುಕೊಳ್ಳಲು ಗಂಡು ಮಕ್ಕಳಿಗೆ ಕೆಳ ಮಹಡಿಯಲ್ಲಿ, ಹೆಣ್ಣು ಮಕ್ಕಳಿಗೆ ಮೇಲ್ಮಹಡಿಯಲ್ಲಿ ವ್ಯವಸ್ಥೆ ಮಾಡಲಾಗಿತ್ತು.. ಇದೇ ವೇಳೆಯಲ್ಲಿ 13 ವರ್ಷದ ಬಾಲಕಿ ಮೇಲೆ ರಾಜಕಾರಣಿ ಶಿವರಾಮನ್‌ ಎಂಬಾತ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.. ಶಿಬಿರ ಮುಗಿದ ಮೇಲೆ ಪ್ರಾಂಶುಪಾಲರಿಗೆ ವಿದ್ಯಾರ್ಥಿನಿ ದೂರು ನೀಡಿದ್ದರಿಂದ ಪ್ರಕರಣ ಬೆಳಕಿಗೆ ಬಂದಿದೆ.. ಶಿವರಾಮನ್‌ ಹಾಗೂ ಆತನ ಸಹಚರರು ಇನ್ನೂ ನಾಲ್ವರು ವಿದ್ಯಾರ್ಥಿನಿಯರಿಗೆ ಕಿರುಕುಳ ಕೊಟ್ಟಿದ್ದಾರೆ ಎಂದು ವಿಚಾರಣೆ ವೇಳೆ ಗೊತ್ತಾಗಿದೆ..
ಇದೇ ಗುಂಪು ಇತರೆ ಮೂರು ಶಾಲೆಗಳಲ್ಲಿ ಇದೇ ರೀತಿ ಎನ್‌ಸಿಸಿ ಕ್ಯಾಂಪ್‌ಗಳನ್ನು ಆಯೋಜಿಸಿತ್ತು ಎಂದು ಹೇಳಲಾಗುತ್ತಿದೆ.. ಹೀಗಾಗಿ ಅಲ್ಲಿ ಏನು ನಡೆದಿತ್ತು..? ಎಂಬುದರ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ..

ಇದನ್ನೂ ಓದಿ; ಬೆತ್ತಲೆಯಾಗಿ ಬಂದ ಮಹಿಳೆಯಿಂದ ಯುವಕನ ಮೇಲೆ ಲೈಂಗಿಕ ದೌರ್ಜನ್ಯ!

Share Post