Uncategorized

40 ವರ್ಷಕ್ಕೇ ನಿವೃತ್ತಿಯಾಗಿ..!; ಕೂತು ತಿನ್ನಿ!

ಬೆಂಗಳೂರು; ಭಾರತ ಸೇರಿದಂತೆ ಹಲವು ದೇಶಗಳಲ್ಲಿ ನಿವೃತ್ತಿ ವಯಸ್ಸನ್ನು 55 ರಿಂದ 60 ವರ್ಷ ಮಧ್ಯೆ ನಿಗದಿ ಮಾಡಲಾಗಿದೆ. ಭಾರತದಲ್ಲಿ ಸರ್ಕಾರಿ ಇಲಾಖೆಗಳಲ್ಲಿ 60 ವರ್ಷಕ್ಕೆ ಕಡ್ಡಾಯವಾಗಿ ನಿವೃತ್ತಿಯಾಗಬೇಕಿದೆ. ಅಂದಹಾಗೆ 60 ವರ್ಷ ಅಂದ್ರೆ, ನಮ್ಮ ಜೀವನದ ಬಹುತೇಕ ಸಮಯ ಕೆಲಸದಲ್ಲೇ ಕಳೆದುಬಿಟ್ಟಿರುತ್ತೇವೆ. ಹೀಗಾಗಿ ದಶಕಗಳ ಹಿಂದೆಯೇ ಅಮೆರಿಕದಂತಹ ದೇಶಗಳಲ್ಲಿ Early Retirement Plan ಅನ್ನು ಜನರು ಅಳವಡಿಸಿಕೊಳ್ಳಲು ಆರಂಭಿಸಿದ್ದರು. ಇದನ್ನು ಫೈನಾನ್ಷಿಯಲ್‌ ಇಂಡಿಪೆಂಡೆನ್ಸ್‌ ಅಂಡ್‌ ರಿಟೈರ್ಡ್‌ ಅರ್ಲಿ (FIRE) ಎಂದು ಕರೆಯುತ್ತಾರೆ.
ಏನಿದು Financial Indipendance And Retaired early ಸಿದ್ಧಾಂತ..?
ಅಂದರೆ ಕಡಿಮೆ ವಯಸ್ಸಿನಲ್ಲಿ ಸ್ವಾವಲಂಬನೆ ಗಳಿಸಿ, ಬಹುಬೇಗ ಉದ್ಯೋಗ ತೊರೆದು ಆರಾಮದ ಜೀವನ ಮಾಡುವುದು ಎಂದರ್ಥ. ಆದಾಯಕ್ಕಾಗಿ ಉದ್ಯೋಗದ ಮೇಲೆ ಆಧಾರಪಡದೇ ಕೇವಲ ತಾವು ಉಳಿತಾಯ ಮಾಡಿದ ಹಣ, ಆಸ್ತಿಯ ಮುಖಾಂತರ ಪ್ರತಿ ತಿಂಗಳೂ ಆದಾಯ ಗಳಿಸುತ್ತಾ ಸುಖವಾಗಿ ಜೀವನ ಮಾಡುವ ಸಿದ್ಧಾಂತವೇ FIRE ಸಿದ್ಧಾಂತ.
ಅಮೆರಿಕದಂತಹ ಮುಂದುವರೆದ ದೇಶಗಳಲ್ಲಿ ಬಹುತೇಕ 40-45 ವರ್ಷಗಳಲ್ಲೇ ಆರ್ಥಿಕ ಸ್ವಾವಲಂಬನೆ ಸಾಧಿಸಿಬಿಡುತ್ತಾರೆ. ಅನಂತರ ಸಂಪಾದಿಸಿದ ಹಣದಲ್ಲಿ ಸುಖವಾಗಿ ಕಾಲ ಕಳೆಯುತ್ತಾರೆ. ಅಂದರೆ ಅವರಿಗೆ 40-45 ವರ್ಷದ ನಂತರ ದುಡಿಯುವುದು ಅವಶ್ಯಕತೆ ಇರುವುದಿಲ್ಲ. ಬದಲಾಗಿ ಅವರು ಬೇರೆ ಬೇರೆ ಪ್ರದೇಶಗಳನ್ನು ಸುತ್ತಾಡುತ್ತಾ, ಇಷ್ಟವಾದುದನ್ನು ತಿನ್ನುತ್ತಾ ಆರಾಮಾಗಿ ಕಾಲಕಳೆದುಬಿಡುತ್ತಾರೆ.
ಗಳಿಸಿದ್ದರಲ್ಲಿ ಹೆಚ್ಚಿನ ಭಾಗ ಉಳಿತಾಯ ಮಾಡುವುದು
ಈ FIRE ಸಿದ್ಧಾಂತ ಪ್ರಮುಖ ಭಾಗವೇ ನಾವು ದುಡಿಯುವಾಗ ಹೆಚ್ಚಿನ ಹಣವನ್ನು ಉಳಿತಾಯ ಮಾಡುವುದು. ಆ ಹಣವನ್ನು ಸರಿಯಾಗ ಮಾರ್ಗದಲ್ಲಿ ಹೂಡಿಕೆ ಮಾಡಿ ಆದಾಯ ಮತ್ತಷ್ಟು ಹೆಚ್ಚುವಂತೆ ಮಾಡುವುದು. ಹಾಗೆ ಮಾಡುವುದರಿಂದ ನಾವು ಚಿಕ್ಕ ವಯಸ್ಸಿನಲ್ಲಿರುವಾಗಲೇ ಹೆಚ್ಚಿನ ಹಣವನ್ನ, ಆಸ್ತಿಯನ್ನ ಗಳಿಸುತ್ತೇವೆ. ಇದರಿಂದಾಗಿ ಚಿಕ್ಕ ವಯಸ್ಸಿನಲ್ಲಿಯೇ ಉದ್ಯೋಗದಿಂದ ನಿವೃತ್ತಿ ಹೊಂದಿ, ಸುಂದರವಾಗಿ ಜೀವನವನ್ನು ನಡೆಬಹುದು.
ಈ FIRE ಸಿದ್ಧಾಂತ ಶುರುವಾಗಿದ್ದಾದರೂ ಹೇಗೆ..?
1980 ಹಾಗೂ 2000ನೇ ಇಸ್ವಿ ನಡುವೆ ಹುಟ್ಟಿದ ಮಿಲಿಯನೇರ್ಸ್‌ ಈ FIRE ಸಿದ್ಧಾಂತಕ್ಕೆ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಜಾಕಬ್‌ ಎಂಬುವವರು ಈ ಬಗ್ಗೆ ಒಂದು ಪುಸ್ತಕ ಬರೆದಿದ್ದರು. ಅದರ ಹೆಸರು Early Retairement Extreem. ಈ ಪುಸ್ತಕದಲ್ಲಿ FIRE ಸಿದ್ಧಾಂತ ಅದರಿಂದ ಆಗುವಂತಹ ಅನುಕೂಲಗಳ ಬಗ್ಗೆ ಹೇಳಿದ್ದಾರೆ. ಈ ಪುಸ್ತಕ ಮಾರುಕಟ್ಟೆಗೆ ಬಂದ ಮೇಲೆ ಈ ಬಗ್ಗೆ ಯೋಚಿಸುವವರ ಹಾಗೂ ಇದನ್ನು ಅನುಸರಿಸುವವರ ಸಂಖ್ಯೆ ತುಂಬಾನೇ ಹೆಚ್ಚಾಗಿದೆ.
ಇನ್ನು ವಿಕಿ ರಾಬಿನ್‌ ಕೂಡಾ ಒಂದು ಪುಸ್ತಕ ಬರೆದಿದ್ದಾರೆ. ಅದರ ಹೆಸರು Your Money your life. ಈ ಪುಸ್ತಕದಲ್ಲಿ ಕೂಡಾ FIRE ಸಿದ್ಧಾಂತದಿಂದ ಆಗುವ ಅನುಕೂಲಗಳನ್ನು ತುಂಬಾ ಚೆನ್ನಾಗಿ ಹೇಳಿದ್ದಾರೆ.

Share Post