ತುಂಗಭದ್ರಾ ಡ್ಯಾಮ್ ಪ್ರಕರಣ; 60 ಟಿಎಂಸಿ ನೀರು ಹೊರಹೋದರಷ್ಟೇ ರಿಪೇರಿ!
ವಿಜಯನಗರ; ತುಂಗಭದ್ರಾ ಜಲಾಶಯದ 19ನೇ ಗೇಟ್ ಲಿಂಕ್ ಕಳಚಿರುವುದರಿಂದ ನೀರಿಹ ಹೊರಹರಿವು ಮುಂದುವರೆದಿದೆ.. ಪ್ರತಿನಿತ್ಯ ನದಿಗೆ 9 ಟಿಎಂಸಿ ನೀರು ನದಿಗೆ ಬಿಡಲಾಗುತ್ತಿದೆ.. ಒಟ್ಟು 60 ಟಿಎಂಸಿ ನೀರು ಹೊರಹೋದರೆ ಮಾತ್ರ ರಿಪೇರಿ ಮಾಡೋದಕ್ಕೆ ಸಾಧ್ಯ.. ಇದಕ್ಕೆ 9 ದಿನ ಕಾಯಲೇಬೇಕಾಗುತ್ತದೆ.. ಅಲ್ಲಿಯ ತನಕ ನದಿ ಪಾತ್ರದ ಜನಕ್ಕೆ ಆತಂಕ ಇದ್ದೇ ಇದೆ..
ಇದನ್ನೂ ಓದಿ; ಕಾಫಿ ಶಾಪ್ ಟಾಯ್ಲೆಟ್‌ನಲ್ಲಿ ಕ್ಯಾಮರಾ!; ಆರೋಪಿ ಯಾರು ಗೊತ್ತಾ..?
ತಜ್ಞರ ಪ್ರಕಾರ ಡ್ಯಾಮ್ ತುಂಬಿರುವುದರಿಂದ ಈ ಅಲ್ಲಿಗೆ ಹೋಗೋದಕ್ಕೆ ಆಗೋದಿಲ್ಲ.. ರಿಪೇರಿ ಕೂಡಾ ಸಾಧ್ಯವಿಲ್ಲ.. 60 ಟಿಎಂಸಿ ನೀರು ಖಾಲಿಯಾದ ಮೇಲೆಯೇ ರಿಪೇರಿ ಮಾಡೋದಕ್ಕೆ ಆಗೋದು.. ಇದಕ್ಕೆ ಕನಿಷ್ಠ ಎಂದರೂ ಐದು ಕಾಯಬೇಕು ಎಂದು ತಜ್ಞರು ಹೇಳುತ್ತಿದ್ದಾರೆ..
ಇದನ್ನೂ ಓದಿ; ರಾಜ್ಯದ ಯಾವ ಜಲಾಶಯದಲ್ಲಿ ಎಷ್ಟು ನೀರಿದೆ..?; Full Deatails
ಗೇಟ್ ರಿಪೇರಿ ಹಿನ್ನೆಲೆಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಸ್ಥಳಕ್ಕೆ ಭೇಟಿ ನೀಡಿದ್ದರು.. ಈ ವೇಳೆ ತಜ್ಞರು ಜೊತೆ ಮಾತುಕತೆ ನಡೆಸಿದರು.. ಜನರ ಸುರಕ್ಷತೆ ಬಗ್ಗೆಯೂ ಮಾಹಿತಿ ಪಡೆದುಕೊಂಡು. ಇನ್ನು ಡ್ಯಾಮ್ ಸುತ್ತಮುತ್ತ 2 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಯಾರೂ ಓಡಾಡದಂತೆ ನಿಷೇಧಾಜ್ಞೆ ಹೇರಲಾಗಿದೆ.. ಅಧಿಕಾರಿಗಳು ಬಿಟ್ಟರೆ ರಾಜಕಾರಣಿಗಳು ಕೂಡಾ ಬಂದು ನೋಡುವಂತಿಲ್ಲ ಎಂದು ಅದೇಶ ಹೊರಡಿಸಲಾಗಿದೆ..