BengaluruCrime

ಮದುವೆಯಾಗ್ತೀನೆಂದು ಕ್ಯಾಬ್‌ ಡ್ರೈವರ್‌ ಮೋಸ; ಮಹಿಳೆಯಿಂದ ದೂರು!

ಬೆಂಗಳೂರು; ಕುಡುಕ ಗಂಡನನ್ನು ತೊರೆದು ಬದುಕು ಕಟ್ಟಿಕೊಳ್ಳುತ್ತಿದ್ದ ಮಹಿಳೆಯೊಬ್ಬರನ್ನು ಕಾರು ಚಾಲಕನೊಬ್ಬ ನಂಬಿಸಿ, ಆಕೆಯನ್ನು ಬಳಸಿಕೊಂಡು ಮೋಸ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.. ಗಂಡನಿಂದ ದೂರವಾಗಿದ್ದ ವಿವಾಹಿತ ಮಹಿಳೆಗೆ ಬಾಳು ಕೊಡುತ್ತೇನೆಂದು ಹೇಳಿ ಕ್ಯಾಬ್‌ ಚಾಲಕ ಪ್ರಜ್ವಲ್‌ ಮೋಸ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.. ಈ ಸಂಬಂಧ ಸಂತ್ರಸ್ತ ಮಹಿಳೆ ಬೆಂಗಳೂರಿನ ಕೆಂಗೇರಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾಳೆ..

ಇದನ್ನೂ ಓದಿ; ವರಲಕ್ಷ್ಮೀ ವ್ರತದ ಪೂಜಾ ಸಮಯ ಏನು..?; ವ್ರತದ ವಿಧಾನ ಹೇಗೆ..?

ಗಂಡ ದಿನವೂ ಕುಡಿದು ಬರುತ್ತಿದ್ದರಿಂದ ಇಬ್ಬರು ಮಕ್ಕಳೊಂದಿಗೆ ಆಕೆ ತವರು ಮನೆ ಸೇರಿದ್ದಳು.. ಅನಂತರ ವರ್ಷದ ಹಿಂದೆ ಬೆಂಗಳೂರಿಗೆ ಬಂದು ಸ್ನೇಹಿತೆಯರ ಕೊಠಡಿಯಲ್ಲಿದ್ದು, ಬದುಕು ಕಟ್ಟಿಕೊಳ್ಳುತ್ತಿದ್ದಳು.. ಇದೇ ವೇಳೆ ಬೇಜಾರು ಕಳೆಯಲೆಂದು ಸಾಮಾಜಿಕ ಜಾಲತಾಣದಲ್ಲಿ ರೀಲ್‌ ಮಾಡಿ ಹಾಕುತ್ತಿದ್ದಳು.. ಅದಕ್ಕೆ ಕ್ಯಾಬ್‌ ಚಾಲಕ ಲೈಕ್‌, ಕಮೆಂಟ್‌ ಮಾಡುತ್ತಿದ್ದ ಎನ್ನಲಾಗಿದೆ.. ಇದಕ್ಕೆ ಮಹಿಳೆ ಕೂಡಾ ಪ್ರತಿಕ್ರಿಯೆ ನೀಡುತ್ತಿದ್ದಳು.. ಈ ಮೂಲಕ ಇಬ್ಬರ ಪರಿಚಯ ಗಾಢವಾಗಿ ಪ್ರೀತಿಗೆ ತಿರುಗಿದೆ.. ಇಬ್ಬರೂ ಪರಸ್ಪರ ಪ್ರೀತಿಸಲಾರಂಭಿಸಿದ್ದು, ಚಾಲಕ ಪ್ರಜ್ವಲ್‌ ಮದುವೆಯಾಗುತ್ತೇನೆಂದು ಆಕೆಗೆ ಮಾತು ಕೊಟ್ಟಿದ್ದನಂತೆ.. ಆಕೆಯ ಜೊತೆಗೇ ವಾಸವಿದ್ದನಂತೆ.. ಆದ್ರೆ ಕೆಲ ದಿನಗಳ ಬಳಿಕ ಬೋರಾದಳು ಅಂತ ಬಿಟ್ಟುಹೋಗಿದ್ದಾನೆ ಎಂದು ಆರೋಪಿಸಲಾಗಿದೆ..

ಇದನ್ನೂ ಓದಿ; ಹೆಚ್ಚು ಪ್ಯಾರಾಸಿಟಮಾಲ್‌ ಸೇವಿಸಿದರೆ ಲಿವರ್‌ ಡ್ಯಾಮೇಜ್‌!

Share Post