ನೇಪಾಳದಲ್ಲಿ ಹೆಲಿಕಾಪ್ಟರ್ ಪತನ; ನಾಲ್ವರ ದುರ್ಮರಣ!
ಕಠ್ಮಂಡು; ಹೆಲಿಕಾಪ್ಟರ್ ಪತನಗೊಂಡು ನಾಲ್ವರು ಸಾವನ್ನಪ್ಪಿರುವ ಘಟನೆ ನೇಪಾಳದಲ್ಲಿ ನಡೆದಿದೆ.. ಇಲ್ಲಿನ ನುವಾಕೋಟ್ ಬಳಿಯ ಶಿವಪುರ ಸಮೀಪದಲ್ಲಿ ಈ ಘಟನೆ ನಡೆದಿದೆ.. ಏರ್ ಡೈನಾಸ್ಟಿ ಹೆಲಿಕಾಪ್ಟರ್ ಕಠ್ಮಂಡುವಿನಿಂದ ಸೈಫ್ರುಬೆನ್ಸಿ ಕಡೆಗೆ ಹೋಗುತ್ತಿತ್ತು.. ಈ ವೇಳೆ ಅವರು ನಿಯಂತ್ರಣ ಕಳೆದುಕೊಂಡು ಪತನವಾಗಿದೆ..
ಇದನ್ನೂ ಓದಿ; ನಿಂತಲ್ಲೇ ಅಲ್ಲಾಡುತ್ತಿದ್ದ ಕಾರು!; ಉಡುಪಿಯಲ್ಲಿ ಇದೆಂಥಾ ಅನಾಚಾರ..?
ಟೇಕಾಫ್ ಆದಾಗ ಪೈಲಟ್ ಹಾಗೂ ನಾಲ್ವರು ಚೀನಾ ಪ್ರಜೆಗಳಿದ್ದರು.. ಚೀನಾದ ಪ್ರಜೆಗಳು ರಾಸುವಾಗೆ ತೆರಳಬೇಕಿತ್ತು ಎಂದು ತಿಳಿದುಬಂದಿದೆ.. ಅರಣ್ಯ ಪ್ರದೇಶದಲ್ಲಿ ಹೆಲಿಕಾಪ್ಟರ್ ಸಂಪರ್ಕ ಕಳೆದುಕೊಂಡು ನೆಲಕ್ಕಪ್ಪಳಿಸಿದೆ. ಹೆಲಿಕಾಪ್ಟರ್ನಲ್ಲಿದ್ದ ಐವರ ಪೈಕಿ ಒಬ್ಬರು ಬದುಕುಳಿದಿರುವ ಸಾದ್ಯತೆ ಇದೆ ಎನ್ನಲಾಗಿದೆ..
ಇದನ್ನೂ ಓದಿ; ಟಿಪ್ಪರ್ ಲಾರಿ ಡಿಕ್ಕಿ; ಗರ್ಭಿಣಿ ಹೊಟ್ಟೆಯಿಂದ ಹೊರಬಂದ ಮಗು!