ಸ್ವಂತ ಮಗಳನ್ನೇ ವೇಶ್ಯಾವಾಟಿಕೆಗೆ ತಳ್ಳಲು ಯತ್ನಿಸಿದ ತಾಯಿ!
ಚೆನ್ನೈ; ನೆರೆಮನೆಯವರಿಂದ ಪಡೆದಿದ್ದ ಸಾಲ ತೀರಿಸಲಾಗದೇ ಮಹಿಳೆಯೊಬ್ಬರು ತನ್ನ ಮಗಳನ್ನು ವೇಶ್ಯಾವಾಟಿಕೆಗೆ ತಳ್ಳಲು ಯತ್ನಿಸಿರುವ ಘಟನೆ ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ ನಡೆದಿದೆ. ತಾಯಿ ನೆರೆ ಮನೆಯವರಿಂದ 40 ಸಾವಿರ ರೂಪಾಯಿ ಸಾಲ ಪಡೆದಿದ್ದರು.. ಅದನ್ನು ತೀರಿಸೋದಕ್ಕೆ ಆಗುತ್ತಿರಲಿಲ್ಲ.. ಹೀಗಾಗಿ, ತನ್ನನ್ನು ವೇಶ್ಯಾವಾಟಿಕೆಯಲ್ಲಿ ತೊಡಗುವಂತೆ ಒತ್ತಾಯಿಸುತ್ತಿದ್ದಾಳೆ ಎಂದು ತಾಯಿಯ ವಿರುದ್ಧವೇ 16 ವರ್ಷದ ಬಾಲಕಿ ದೂರು ಕೊಟ್ಟಿದ್ದಾಳೆ..
ಇದನ್ನೂ ಓದಿ; ಮದರಸಾದಲ್ಲಿ ಪೆನ್ನಿಗಾಗಿ ಜಗಳ!; 12 ವರ್ಷದ ವಿದ್ಯಾರ್ಥಿಯ ಕೊಲೆ!
ಶಾಲೆಗೆ ಹೋಗುತ್ತಿದ್ದ ಮಗಳನ್ನು ತಾಯಿ ಶಾಲೆ ಬಿಡಿಸಿದ್ದಾಳೆ.. ಸಾಲ ಕೊಟ್ಟವರ ಮನೆಯಲ್ಲಿ ಮಗಳನ್ನು ಕೆಲಸಕ್ಕೆ ನೇಮಿಸಿದ್ದಾಳೆ.. ಅವರು ಲೈಂಗಿಕ ಕೆಲಸದಲ್ಲಿ ತೊಡಗುವಂತೆ ಒತ್ತಾಯಿಸಿದ್ದಾರಂತೆ.. ಇದರಿಂದ ಬೇಸತ್ತ ಮಗಳ ಬಂದು ತಾಯಿಗೆ ವಿಷಯ ತಿಳಿಸಿದ್ದಾಳೆ.. ಆಗ ತಾಯಿ ನೀನು ಅಲ್ಲಿಗೇ ಹೋಗಿ ಅವರು ಹೇಳಿದಂತೆ ಮಾಡು ಎಂದು ಬಲವಂತ ಮಾಡಿದ್ದಾಳೆ ಎಂದು ತಾಯಿಯ ವಿರುದ್ಧವೇ ಬಾಲಕಿ ಆರೋಪ ಮಾಡಿದ್ದಾಳೆ..
ಇದನ್ನೂ ಓದಿ; ಪೋಸ್ಟಾಫೀಸ್ ಆರ್‌ಡಿ; ತಿಂಗಳಿಗೆ 5 ಸಾವಿರ ಹೂಡಿಕೆ, ಕೈಗೆ ಬರೋದು 8 ಲಕ್ಷ ರೂಪಾಯಿ!
ಮಾಹಿತಿ ಪ್ರಕಾರ ಬಾಲಕಿ ತಾಯಿ ಲೇವಾದೇವಿ ಮಾಡುವ ಮುತ್ತುಲಕ್ಷ್ಮೀ ಎಂಬುವವರ ಬಳಿ ಸಾಲ ಪಡೆದಿದ್ದರು.. ಆದ್ರೆ ಅದನ್ನು ತೀರಿಸೋದಕ್ಕೆ ಆಗಿಲ್ಲ.. ಹೀಗಾಗಿ ಮಗಳನ್ನು ಅವರ ಮನೆಯಲ್ಲಿ ಮನೆಗೆಲಸಕ್ಕೆ ಸೇರಿಸಿದ್ದಳು.. ಈ ವೇಳೆ ಆ ಮನೆಯವರು ಲೈಂಗಿಕ ಚಟುವಟಿಕೆಯಲ್ಲಿ ತೊಡಗುವಂತೆ ಬಲವಂತ ಮಾಡಿದ್ದು, ಬಾಲಕಿಯ ತಾಯಿಯೂ ಕೂಡಾ ಅದನ್ನೇ ಹೇಳುತ್ತಿದ್ದಾಳಂತೆ. ಹೀಗಾಗಿ ಆ ಬಾಲಕಿ ಮನೆ ಬಿಟ್ಟುಹೋಗಿದ್ದಾಳೆ ಎಂದು ತಿಳಿದುಬಂದಿದೆ..