ಸಿಸಿಬಿ ಇನ್ಸ್ಪೆಕ್ಟರ್ ತಿಮ್ಮೇಗೌಡ ಆತ್ಮಹತ್ಯೆ!; ಅಮಾನತಾಗಿದ್ದರಿಂದ ಖಿನ್ನತೆ!
ಬೆಂಗಳೂರು; ಅಮಾನತಾಗಿದ್ದರಿಂದ ಖಿನ್ನತೆಗೆ ಜಾರಿದ್ದ ಪೊಲೀಸ್ ಇನ್ಸ್ಪೆಕ್ಟರ್ ಒಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.. ಸದ್ಯ ಸಿಸಿಬಿ ಇನ್ಸ್ಪೆಕ್ಟರ್ ಆಗಿದ್ದ ತಿಮ್ಮೇಗೌಡ ಅವರೇ ಆತ್ಮಹತ್ಯೆಗೆ ಶರಣಾದವರು.. ಇವರು ರಾಮನಗರದ ಕಗ್ಗಲೀಪುರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ..
ಇದನ್ನೂ ಓದಿ; ಮದರಸಾದಲ್ಲಿ ಪೆನ್ನಿಗಾಗಿ ಜಗಳ!; 12 ವರ್ಷದ ವಿದ್ಯಾರ್ಥಿಯ ಕೊಲೆ!
ಕಳೆದ ವರ್ಷ ಆನೇಕಲ್ನಲ್ಲಿ ಪಟಾಕಿ ದುರಂತ ನಡೆದಿತ್ತು.. ಆಗ ಇಲ್ಲಿ ಇನ್ಸ್ಪೆಕ್ಟರ್ ಆಗಿದ್ದ ತಿಮ್ಮೇಗೌಡ ಅವರು ಪಟಾಕಿ ಅಂಗಡಿಗೆ ಅನುಮತಿ ನೀಡಿದ್ದರು ಎಂಬ ಆರೋಪ ಕೇಳಿಬಂದಿತ್ತು.. ಈ ಹಿನ್ನೆಲೆಯಲ್ಲಿ ಅವರನ್ನು ಅಮಾನತು ಮಾಡಲಾಗಿತ್ತು.. ನಂತರ ನಡೆದ ಇಲಾಖಾ ವಿಚಾರಣೆ ವೇಳೆ ಅವರಿಗೆ ಕ್ಲೀನ್ ಚಿಟ್ ಸಿಕ್ಕಿತ್ತು.. ಹೀಗಿದ್ದರೂ ಅವರು ತೀವ್ರ ಖಿನ್ನತೆಗೆ ಒಳಗಾಗಿದ್ದರು ಎಂದು ಹೇಳಲಾಗುತ್ತಿದೆ. ತೀವ್ರ ಮಾನಸಿಕ ಒತ್ತಡ ಅನುಭವಿಸಿದ್ದ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.. 2003ರ ಬ್ಯಾಚ್ನಲ್ಲಿ ತಿಮ್ಮೇಗೌಡ ಅವರು ಇಲಾಖೆಗೆ ಸೇರಿದ್ದರು..
ಇದನ್ನೂ ಓದಿ;ಪೋಸ್ಟಾಫೀಸ್ ಆರ್ಡಿ; ತಿಂಗಳಿಗೆ 5 ಸಾವಿರ ಹೂಡಿಕೆ, ಕೈಗೆ ಬರೋದು 8 ಲಕ್ಷ ರೂಪಾಯಿ!
ಪ್ರಕರಣದಲ್ಲಿ ಕ್ಲೀನ್ ಚಿಟ್ ಸಿಕ್ಕಿದ ನಂತರ ಸಿಸಿಬಿಯಲ್ಲಿ ಇನ್ಸ್ಪೆಕ್ಟರ್ ಆಗಿದ್ದರು.. ಆದರೂ ಕೂಡಾ ಅವರು ಖಿನ್ನತೆಯಲ್ಲಿದ್ದರು ಎಂದು ತಿಳಿದುಬಂದಿದೆ.. ತಿಮ್ಮೇಗೌಡ ಅವರ ಸಾವಿಗೆ ಇಲಾಖೆಯ ಹಿರಿಯ ಅಧಿಕಾರಿಗಳೇ ಕಾರಣ ಎಂದು ಕುಟುಂಬಸ್ಥರು ಆರೋಪ ಮಾಡುತ್ತಿದ್ದಾರೆ.