ಗ್ರಂಥಪಾಲಕರ ವೇತನ ತಾರತಮ್ಯ ವಿಚಾರ; ಆದೇಶ ಪಾಲಿಸದ ಸರ್ಕಾರಕ್ಕೆ 5 ಲಕ್ಷ ರೂ. ದಂಡ!
ಬೆಂಗಳೂರು; ವೇತನದಲ್ಲಿ ಸಹಾಯಕ ಗ್ರಂಥಪಾಲಕರಿಗೆ ತಾರತಮ್ಯ ಮಾಡಲಾಗಿದೆ ಎಂದು ಆರೋಪಿಸಿ ಕೋರ್ಟ್ ಮೆಟ್ಟಿಲೇರಲಾಗಿತ್ತು. ಈ ಸಂಬಂಧ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ವೇತನ ತಾರತಮ್ಯ ಸರಿಪಡಿಸುವಂತೆ ಸೂಚಿಸಿತ್ತು. ಆದ್ರೆ ಸರ್ಕಾರ ಈ ಆದೇಶಕ್ಕೆ ಮನ್ನಣೆ ಕೊಟ್ಟಿರಲಿಲ್ಲ. ಹೀಗಾಗಿ ಕೋರ್ಟ್ ಆದೇಶ ಪಾಲಿಸದ ಸರ್ಕಾರಕ್ಕೆ ಹೈಕೋರ್ಟ್ ಚಾಟಿ ಬೀಸಿದೆ. ಜೊತೆಗೆ 5 ಲಕ್ಷ ರೂಪಾಯಿ ದಂಡ ಕೂಡಾ ವಿಧಿಸಿದೆ.
ಈ ಸಂಬಂಧ ವಿ.ಎ.ನಾಗಮಣಿ ಎಂಬುವವರು ಹೈಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಕೇಸ್ ದಾಖಲಿಸಿದ್ದರು ವಿಚಾರಣೆ ನಡೆಸಿದ ಕೋರ್ಟ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಕೋರ್ಟ್ ಆದೇಶಗಳನ್ನು ಪಾಲಿಸದೇ ತಮಾಷೆ ನೋಡುತ್ತಿದ್ದೀರಾ? ಎಂದು ಪ್ರಶ್ನೆ ಮಾಡಿದೆ.
ಕೋರ್ಟ್‌ಗೆ ಬರುವುದು ಜನರಿಗೆ ಸಂತಸದ ವಿಚಾರವಲ್ಲ. ಪಾರ್ಕ್‌ಗಳಿಗೆ ಹೋಗಿ ಜನರನ್ನು ಕೇಳಿನೋಡಿ ಕೋರ್ಟ್ ಹಾಗೂ ಸರ್ಕಾರದ ಬಗ್ಗೆ ಜನರು ಏನು ಹೇಳುತ್ತಾರೆ ಕೇಳಿ ಎಂದು ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಅಲ್ಲದೆ ಮೂರು ವಾರಗಳಲ್ಲಿ ಆದೇಶ ಪಾಲನೆ ಮಾಡುವಂತೆಯೂ ಸೂಚನೆ ಕೊಡಲಾಗಿದೆ.