CrimeNational

ಆಗ್ರಾ-ಲಕ್ನೋ ಎಕ್ಸ್‌ಪ್ರೆಸ್‌ ವೇನಲ್ಲಿ ಭೀಕರ ಅಪಘಾತ; 7 ಮಂದಿ ದುರ್ಮರಣ!

ಲಕ್ನೋ; ಉತ್ತರ ಪ್ರದೇಶದ ಬಳಿ ಕಳೆದ ರಾತ್ರಿ ಭೀಕರ ಅಪಘಾತ ನಡೆದಿದೆ.. ರಾಂಗ್‌ ರೂಟ್‌ನಲ್ಲಿ ಬಂದ ಕಾರೊಂದು ಬಸ್‌ಗೆ ಡಿಕ್ಕಿ ಹೊಡೆದಿದ್ದರಿಂದ 7 ಮಂದಿ ಸಾವನ್ನಪ್ಪಿದ್ದಾರೆ.. 45 ಪ್ರಯಾಣಿಕರು ಗಾಯಗೊಂಡಿದ್ದು, ಹಲವರ ಸ್ಥಿತಿ ಗಂಭಿರವಾಗಿದೆ..

ಇದನ್ನೂ ಓದಿ; ಪತ್ನಿಯ ಕತ್ತು ಕುಯ್ದು ಕತ್ತಿ ಹಿಡಿದು ನರ್ತನೆ ಮಾಡಿದ ಪಾಪಿ ಪತಿ!

ಆಗ್ರಾ-ಲಕ್ನೋ ಎಕ್ಸ್‌ಪ್ರೆಸ್‌ ವೇನಲ್ಲಿ ಈ ದುರಂತ ನಡೆದಿದೆ ಎಂದು ತಿಳಿದಬಂದಿದೆ.. ಅಪಘಾತದ ನಂತರ ಎಕ್ಸ್‌ಪ್ರೆಸ್‌ವೇನಿಂದ ಕೆಳಗೆ ಬಿದ್ದಿದೆ.. ಕಾರಿನಲ್ಲಿದ್ದ ಮೂವರು ಹಾಗೂ ಬಸ್‌ನಲ್ಲಿ ಮೂವರು ಸಾವನ್ನಪ್ಪಿದ್ದಾರೆ.. ಬಸ್‌ ಲಕ್ನೋದಿಂದ ಆಗ್ರಾಗೆ ತೆರಳುತ್ತಿತ್ತು ಎಂದು ತಿಳಿದುಬಂದಿದೆ..

ಇದನ್ನೂ ಓದಿ; ಬ್ಯಾಂಕ್‌ ಕಳುವಿಗೆ ಯತ್ನಿಸಿ ವಿಫಲವಾದ ಮಹಿಳೆ!

 

Share Post