ಆಂಧ್ರದ ಮದನಪಲ್ಲಿಯಲ್ಲಿ ಯುವಕನ ಮೇಲೆ ಗುಂಡಿನ ದಾಳಿ!
ಮದನಪಲ್ಲಿ; ಆಂಧ್ರಪ್ರದೇಶದ ಮದನಪಲ್ಲಿಯಲ್ಲಿ ಯುವಕನೊಬ್ಬನ ಮೇಲೆ ಗುಂಡಿನ ದಾಳಿ ನಡೆಸಲಾಗಿದ್ದು, ತೀವ್ರವಾಗಿ ಗಾಯಗೊಂಡಿರುವ ಯುವಕನನ್ನು ಮದನಪಲ್ಲಿಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ..
ಇದನ್ನೂ ಓದಿ; ಹೆದ್ದಾರಿಗಳಲ್ಲಿ ಇನ್ಮುಂದೆ ಟೋಲ್ ಪ್ಲಾಜಾಗಳೇ ಇರೋದಿಲ್ಲ; ಹಾಗಂತ….!
ಅನ್ನಮಯ್ಯ ಜಿಲ್ಲೆಯ ಮದನಪಲ್ಲಿ ಬಳಿ ಈ ಕೃತ್ಯ ಎಸಗಲಾಗಿದೆ.. ವಲಸಪಲ್ಲಿ ವಾಸಿ ರೆಡ್ಡಿ ಪ್ರವೀಣ್ ಮೇಲೆ ಕಂಟ್ರಿ ಪಿಸ್ತೂಲ್ನಿಂದ ದಾಳಿ ಮಾಡಲಾಗಿದೆ.. ರೆಡ್ಡಿ ಪ್ರವೀಣ್ ಬಾವ ದಿವಾಕರ್ ಎಂಬಾತನಿಂದಲೇ ಈ ಕೃತ್ಯ ಎಸಗಲಾಗಿದೆ. ಘಟನೆಯಲ್ಲಿ ರೆಡ್ಡಿ ಪ್ರವೀಣ್ಗೆ ತೀವ್ರ ಗಾಯವಾಗಿದ್ದು, ಮದನಪಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಇದನ್ನೂ ಓದಿ; ವೃದ್ದೆಯ ದೇಹವನ್ನು ತುಂಡು ತುಂಡು ಮಾಡಿ ನದಿಗೆ ಎಸೆದ ದುರುಳರು!
ರೆಡ್ಡಿ ಪ್ರವೀಣ್ ಅವರ ಬಾವ ಬೇರೊಬ್ಬ ವ್ಯಕ್ತಿಯೊಂದಿಗೆ ಜಗಳ ಮಾಡಿಕೊಂಡಿದ್ದರು.. ಈ ಹಿನ್ನೆಲೆಯಲ್ಲಿ ರೆಡ್ಡಿ ಪ್ರವೀಣ್ ತನ್ನ ಬಾವನಿಗೆ ಬುದ್ಧಿ ಹೇಳಲು ಹೋಗಿದ್ದಾರೆ.. ಇದರಿಂದ ಕುಪಿತಗೊಂಡ ಬಾವ ದಿವಾಕರ್, ನನಗೇ ಬುದ್ಧಿ ಹೇಳುತ್ತೀಯಾ ಎಂದು ಕಂಟ್ರಿ ಪಿಸ್ತೂಲ್ ಹಿಡಿದು ದಾಳಿ ಮಾಡಿದ್ದಾನೆ ಎಂದು ತಿಳಿದುಬಂದಿದೆ.. ಪೊಲೀಸರು ಆರೋಪಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ..
ಇದನ್ನೂ ಓದಿ; ಮಲಗಿದ್ದ ಮಹಿಳೆಯ ಕೂದಲಲ್ಲಿ ಹರಿದಾಡಿದ ಹಾವು!