InternationalLifestyle

ಅಪಘಾತದಲ್ಲಿ ಮೃತಪಟ್ಟ ಗೆಳೆಯನ ಜೊತೆ ಪ್ರೇತ ಮದುವೆಗೆ ಸಿದ್ಧಳಾದ ಯುವತಿ!

ತೈವಾನ್‌;  ಕಾರು ಅಪಘಾತದಲ್ಲಿ ಸಾವನ್ನಪ್ಪಿದ ಪ್ರಿಯಕರನ ಜೊತೆ ಪ್ರೇತ ಮದುವೆಯಾಗಲು ತೈವಾನ್‌ ಯುವತಿಯೊಬ್ಬಳು ಸಿದ್ಧತೆ ನಡೆಸಿದ್ದಾಳೆ.. ಯು ಎಂಬ ಉಪನಾಮವಿರುವ ಯುವತಿ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದಳು.. ಆದ್ರೆ ಆತ ತೈವಾನ್‌ ಹೆದ್ದಾರಿಯಲ್ಲಿ ನಡೆದ ಸರಣಿ ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ.. ಜುಲೈ 15ರಂದು ಅಪಘಾತ ನಡೆದಿದೆ.. ಅಪಘಾತದ ವೇಳೆ ಕಾರಿನಲ್ಲಿ ಈ ಯುವತಿ ಕೂಡಾ ಇದ್ದಳು ಎಂದು ತಿಳಿದುಬಂದಿದೆ..

ಇದನ್ನೂ ಓದಿ; ಬಿಜೆಪಿ ಮೇಯರ್‌ ವಿರುದ್ಧ ಅತ್ಯಾಚಾರ ದೂರು ದಾಖಲಿಸಿದ ಮಹಿಳೆ!

ಪ್ರಿಯಕರನ ಸಾವನ್ನು ಕಣ್ಣಾರೆ ಕಂಡಿರುವ ಯುವತಿಗೆ ಆತನನ್ನು ಮರೆಯಲು ಆಗುತ್ತಿಲ್ಲ.. ಜೊತೆಗೆ ಪ್ರಿಯಕರನ ಸಾವಿನಿಂದ ಆತನ ತಂದೆ-ತಾಯಿ ಕೂಡಾ ಅನಾಥರಾಗಿದ್ದಾರೆ.. ಹಿರಿಯ ವಯಸ್ಸಿನ ಅವರನ್ನು ನೋಡಿಕೊಳ್ಳಲು ಯಾರೂ ಇಲ್ಲ.. ಇದನ್ನೆಲ್ಲಾ ಅರಿತ ಯುವತಿ ತನ್ನ ಪ್ರಿಯಕರನ ಜೊತೆ  ಪ್ರೇತ ಮದುವೆಯಾಗಿ, ಪ್ರಿಯಕರನ ತಂದೆ-ತಾಯಿಗಳನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಹೊರಲು ಆಕೆ ನಿರ್ಧರಿಸಿದ್ದಾಳೆ.. ಅದ್ದೂರಿನ ಪ್ರಿಯಕರನ ಜೊತೆ ಪ್ರೇತ ಮದುವೆಯಾಗೋದಕ್ಕೆ ಆಕೆ ನಿರ್ಧಾರ ಮಾಡಿದ್ದಾಳೆ..

ಇದನ್ನೂ ಓದಿ; ಸಮಾಧಿ ಮೇಲಿದೆ ಕ್ಯೂಆರ್‌ ಕೋಡ್‌!; ಸ್ಕ್ಯಾನ್‌ ಮಾಡಿ ನೋಡಿ…!

ಚೀನಾದಲ್ಲಿ ಇಂತಹ ಪ್ರೇತ ಮದುವೆಗಳು ನಡೆಯುತ್ತವೆ.. ಸುಮಾರು 3 ಸಾವಿರ ವರ್ಷಗಳಿಂದಲೂ ಈ ಸಂಪ್ರದಾಯವಿದೆ.. ಇದೀಗ ತೈವಾನ್‌ ಯುವತಿ ಇಂತಹ ಪ್ರೇತ ಮದುವೆಯಾಗುವ ತೀರ್ಮಾನ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾಳೆ..

 

Share Post