LifestyleNational

4 ಬಾರಿ ಪ್ರೀತಿಯ ಬಲೆಗೆ ಬಿದ್ದರೂ ಅವಿವಾಹಿತರಾಗೇ ಉಳಿದ ರತನ್‌ ಟಾಟಾ!

ಮುಂಬೈ; ಅಡುಗೆ ಮನೆಯಲ್ಲಿ ಬಳಸುವ ಉಪ್ಪಿನಿಂದ ಹಿಡಿದು ತಂತ್ರಜ್ಞಾನ ಕ್ಷೇತ್ರದವರೆಗೂ ಎಲ್ಲರದಲ್ಲೂ ಯಶಸ್ಸು ಗಳಿಸಿದ್ದ ರತನ್‌ ಟಾಟಾ ಅವರು ಪ್ರೀತಿಯಲ್ಲಿ ಮಾತ್ರ ಯಶಸ್ಸು ಗಳಿಸಲಿಲ್ಲ.. ಅವರು ಓದುತ್ತಿರುವಾಗ ಅಮೆರಿಕದಲ್ಲಿ ಯುವತಿಯೊಬ್ಬಳನ್ನು ಪ್ರೀತಿ ಮಾಡಿದ್ದರು.. ಆಕೆಯನ್ನೇ ಮದುವೆಯಾಗಲು ನಿರ್ಧರಿಸಿದ್ದರು.. ಆದ್ರೆ ಅವರು ಭಾರತಕ್ಕೆ ಬಂದಿದ್ದಾಗ ಭಾರತ ಹಾಗೂ ಚೀನಾ ಯುದ್ಧವಾಗಿತ್ತು.. ಹೀಗಾಗಿ ಯುವತಿಯ ಮನೆಯವರು ಆಕೆಯನ್ನು ಭಾರತಕ್ಕೆ ಕಳುಹಿಸಿಕೊಡಲು ನಿರಾಕರಿಸಿದರು.. ಇದರಿಂದ ಅವರ ಮದುವೆ ಮುರಿದುಬಿತ್ತು.. ಅನಂತರವೂ ಮೂವರ ಜೊತೆ ರತನ್‌ ಟಾಟಾಗೆ ಪ್ರೀತಿ ಚಿಗುರಿತ್ತು.. ಆದ್ರೆ ಬೇರೆ ಬೇರೆ ಕಾರಣಗಳಿಗಾಗಿ ಅವರ ಸಂಬಂಧ ಮದುವೆವರೆಗೂ ಹೋಗಲಿಲ್ಲ..
ಸಂದರ್ಶನವೊಂದರಲ್ಲಿ ರತನ್‌ ಟಾಟಾ ಅವರು ತನ್ನ ಪ್ರೇಮ ಪ್ರಕರಣಗಳ ಬಗ್ಗೆ ಹೇಳಿಕೊಂಡಿದ್ದರು.. ನಾನು ನಾಲ್ಕು ಬಾರಿ ಪ್ರೀತಿಯಲ್ಲಿ ಬಿದ್ದಿದ್ದೆ.. ಆದ್ರೆ ನಾಲ್ಕೂ ಕೂಡಾ ವಿಫಲವಾದವು.. ಮದುವೆವರೆಗೂ ಅವು ಮುಂದುವರೆಯಲೇ ಇಲ್ಲ. ಹೀಗಾಗಿ ನಂತರದ ದಿನಗಳಲ್ಲಿ ಮದುವೆ ಬಗ್ಗೆ ಯೋಚನೆಯನ್ನೇ ಮಾಡೋದಕ್ಕೆ ಹೋಗಲಿಲ್ಲ ಎಂದು ರತನ್‌ ಟಾಟಾ ಹೇಳಿಕೊಂಡಿದ್ದಾರೆ.. ಪ್ರೀತಿ ಪ್ರೇಮದ ವಿಚಾರ ಬಿಟ್ಟು ಟಾಟಾ ಕಂಪನಿಯ ಹೆಸರಿನಲ್ಲಿ ಉದ್ಯಮಗಳನ್ನು ಸ್ಥಾಪಿಸುವುದು, ಅವುಗಳನ್ನು ಬೆಳೆಸುವುದು, ಸಮಾಜಸೇವೆ ಮಾಡುವುದು, ದಾನ ಧರ್ಮಗಳನ್ನು ಮಾಡುವುದರಲ್ಲೇ ಅವರು ಕಾಲಕಳೆದರು..

Share Post