Politics

ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಆ ಮೂವರ ಬಗ್ಗೆಯೇ ಕೋಪ; ಯಾರು ಆ ಮೂವರು..?

ಬೆಂಗಳೂರು; ಸಿಎಂ ಸಿದ್ದರಾಮಯ್ಯ ಅವರು ಬಿಜೆಪಿ ಹಾಗೂ ಜೆಡಿಎಸ್‌ನ ಮೂವರು ನಾಯಕರ ವಿರುದ್ಧ ಹೆಚ್ಚು ಆಕ್ರೋಶ ಹೊರಹಾಕಿದ್ದಾರೆ.. ಗುರುವಾರ ರಾತ್ರಿ ನಡೆದ ಸಿಎಲ್‌ಪಿ ಸಭೆಯಲ್ಲಿ ಮಾತನಾಡಿರುವ ಸಿಎಂ ಸಿದ್ದರಾಮಯ್ಯ ನನ್ನ ವಿರುದ್ಧ ಮೂವರು ನಾಯಕರು ಷಡ್ಯಂತ್ರ ನಡೆಸುತ್ತಿದ್ದಾರೆ.. ಕೇಂದ್ರ ಸಚಿವರಾದ ಕುಮಾರಸ್ವಾಮಿ, ಪ್ರಹ್ಲಾದ್‌ ಜೋಷಿ ಹಾಗೂ ಬಿ.ಎಲ್‌.ಸಂತೋಷ್‌ ನನ್ನ ತೇಜೋವಧೆ ಮಾಡುವ ಪ್ರಯತ್ನ ಮಾಡುತ್ತಿದ್ದು, ಅವರು ಹೇಳುತ್ತಿರುವುದೆಲ್ಲಾ ಸುಳ್ಳು ಎಂದು ಸಿದ್ದರಾಮಯ್ಯ ಖಾರವಾಗಿ ಹೇಳಿದ್ದಾರೆ ಎಂದು ತಿಳಿದುಬಂದಿದೆ..

ಇದನ್ನೂ ಓದಿ; ಸಚಿವರ ವಿರುದ್ಧ ಸಿಡಿದೆದ್ದ ಕೆಲ ಕಾಂಗ್ರೆಸ್‌ ಶಾಸಕರು!; ಸಿಎಲ್‌ಪಿ ಸಭೆಯಲ್ಲಿ ನಡೆದಿದ್ದೇನು..?

ಮುಡಾದಲ್ಲಿ ನನ್ನ ಕುಟುಂಬಕ್ಕೆ ಹಂಚಿಕೆಯಾದ ಸೈಟ್‌ಗಳಲ್ಲಿ ಯಾವುದೇ ಅಕ್ರಮ ನಡೆದಿಲ್ಲ.. ಕಾನೂನು ಪ್ರಕಾರವೇ ಎಲ್ಲವೂ ನಡೆದಿದೆ.. ಆದರೂ ಕೂಡಾ ನನ್ನ ವಿರುದ್ಧ ವಿನಾಕಾರಣ ಸುಳ್ಳು ಕತೆ ಸೃಷ್ಟಿ ಮಾಡಲಾಗಿದೆ.. ಈ ಮೂವರು ನಾಯಕರು ತೇಜೋವಧೆ ಮಾಡುತ್ತಿದ್ದಾರೆ.. ವಾಲ್ಮೀಕಿ ನಿಗಮದ ಪ್ರಕರಣದಲ್ಲೂ ಸರ್ಕಾರದಿಂದ ಯಾವುದೇ ತಪ್ಪಾಗಿಲ್ಲ.. ಆದರೂ ಕೂಡಾ ಈ ಎರಡು ವಿಚಾರಗಳನ್ನಿಟ್ಟುಕೊಂಡು ವಿಪಕ್ಷಗಳು ಸರ್ಕಾರಕ್ಕೆ ಹಾನಿ ಮಾಡಲು ಹೊರಟಿವೆ.. ಶಾಸಕರು ಯಾವುದೇ ಅನುಮಾನ ಪಡದೇ, ಸದನದಲ್ಲಿ ಒಂದಾಗಿ ಉತ್ತರ ನೀಡೋಣ ಎಂದು ಸಿಎಂ ಹೇಳಿದ್ದಾರೆ ಎನ್ನಲಾಗಿದೆ..

ಇದನ್ನೂ ಓದಿ; ಬೆಲ್ಲ ಚರ್ಮದ ಕಾಂತಿ ಹೆಚ್ಚಿಸುತ್ತೆ..!; ಯೌವನವಾಗಿರಲು ಬೆಲ್ಲವೇ ಮದ್ದು!

ಇನ್ನು ಸದನದಲ್ಲಿ ಕಾಂಗ್ರೆಸ್‌ನ ಎಲ್ಲಾ ಸಚಿವರು ಹಾಗೂ ಶಾಸಕರು ಹಾಜರಿರಬೇಕು, ನೇರಾನೇರ ಬಿಜೆಪಿಗೆ ಠಕ್ಕರ್‌ ಕೊಡಬೇಕು. ಬಿಜೆಪಿಯವರು ಹೇಳಿದ್ದನ್ನು ನಾವು ಕೇಳಿಕೊಂಡು ಕೂರೋದಕ್ಕೆ ಆಗೋದಿಲ್ಲ ಅಂತಾನೂ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ ಎಂದು ತಿಳಿದುಬಂದಿದೆ..

Share Post