CrimeDistricts

ಭಾರಿ ಮಳೆಗೆ ಮನೆ ಕುಸಿತ; ಮಹಿಳೆ, ಅವಳಿ ಮಕ್ಕಳು ದುರ್ಮರಣ!

ಹಾವೇರಿ; ಕರ್ನಾಟಕದ ಬಹುತೇಕ ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದೆ.. ಮಳೆಯಿಂದಾಗಿ ನೂರಾರು ಕುಟುಂಬಗಳು ಬೀದಿಪಾಲಾಗಿವೆ.. ಪ್ರವಾಹದಿಂದಾಗಿ ಎಷ್ಟೋ ಹಳ್ಳಿಗಳು ಜಲಾವೃತವಾಗಿವೆ.. ಗುಡ್ಡಗಳು ಕುಸಿಯುತ್ತಿವೆ.. ಮನೆಗಳು ಕುಸಿದು ಬೀಳುತ್ತಿವೆ.. ಇದರಿಂದಾಗಿ ಸಾವುನೋವುಗಳು ಹೆಚ್ಚಾಗುತ್ತಿವೆ.. ಈ ಮಳೆಯ ಅವಾಂತರದಿಂದ ಹಾವೇರಿ ಜಿಲ್ಲೆಯಲ್ಲಿ ಮನೆಯೊಂದು ಕುಸಿದುಬಿದ್ದು, ಮಹಿಳೆ ಹಾಗೂ ಅವಳಿ ಮಕ್ಕಳು ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ; ಹಳಿ ತಪ್ಪಿದ ದಿಬ್ರುಗಢ ಎಕ್ಸ್‌ಪ್ರೆಸ್‌ ರೈಲು 15 ಬೋಗಿ; ಇಬ್ಬರ ದುರ್ಮರಣ!

ಹಾವೇರಿ ಜಿಲ್ಲೆಯ ಸವಣೂರು ಬಳಿಯ ಮಾದಾಪುರದಲ್ಲಿ ಈ ಘಟನೆ ನಡೆದಿದ್ದು, 30 ವರ್ಷದ ಚನ್ನಮ್ಮ ಎಂಬಾಕೆ ಸಾವನ್ನಪ್ಪಿದ್ದಾರೆ. ಜೊತೆಗೆ ಅನನ್ಯಾ ಹಾಗೂ ಅಮೂಲ್ಯ ಎಂಬ ಒಂದೂವರೆ ವರ್ಷದ ಅವಳಿ ಮಕ್ಕಳು ಕೂಡಾ ಅವಶೇಷಗಳಡಿ ಸಿಲುಕಿ ಸಾವನ್ನಪ್ಪಿದ್ದಾರೆ..

ಇದನ್ನೂ ಓದಿ; ಈ ಐದು ರಾಶಿಯವರಿಗೆ ಮಹಾಶಕ್ತಿ ಯೋಗ..!; ಇದು ಬಯಸಿದಷ್ಟು ಗಳಿಸೋ ಸಮಯ!

ಕಳೆದ ರಾತ್ರಿ ಭಾರೀ ಮಳೆಯಾಗಿದ್ದು, ಮಳೆಗೆ ಗೋಡೆಗಳು ನೆನೆದಿದ್ದರಿಂದ ಗೋಡೆ ಕುಸಿದಿದೆ.. ಕಲ್ಲಿನ ಮನೆಯಾದ್ದರಿಂದ ಮೈಮೇಲೆ ಕಲ್ಲುಗಳು ಬಿದ್ದು, ಮೂವರು ಸಾವನ್ನಪ್ಪಿದ್ದಾರೆ.. ಮನೆಯಲ್ಲಿ ಆರು ಮಂದಿ ಇದ್ದರು.. ಇದರಲ್ಲಿ ಹರಕೂನಿ, ಸುನಿತಾ ಹಾಗೂ ಯಲ್ಲವ್ವ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದಾರೆ.. ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ..

Share Post