CrimeHealthNational

ರೀಲ್ಸ್‌ ಮಾಡುವಾಗ ದುರಂತ; 300 ಅಡಿ ಫಾಲ್ಸ್‌ಗೆ ಬಿದ್ದು ಯುವತಿ ಸಾವು!

ರಾಯಗಡ; ಮೊಬೈಲ್‌ ಹಾಗೂ ಸಾಮಾಜಿಕ ಜಾಲತಾಣಗಳು ಜಾಸ್ತಿಯಾದ ಮೇಲೆ ಪ್ರಪಂಚವೇ ಒಂದು ಹುಚ್ಚರ ಸಂತೆಯಾಗಿದೆ… ಮೊಬೈಲ್‌ ಇತ್ತು ಅಂದ್ರೆ ಅಕ್ಕಪಕ್ಕ ಯಾರಿದ್ದಾರೆ..? ಏನು ನಡೀತಿದೆ ಅನ್ನೋದೂ ಗೊತ್ತಾಗೋದಿಲ್ಲ.. ಆ ಮಟ್ಟಿಗೆ ಮೈಮರೆತಿರುತ್ತಾರೆ.. ಅದ್ರಲ್ಲೂ ಈ ರೀಲ್ಸ್‌ ಹುಚ್ಚರು ಪ್ರಾಣವನ್ನೂ ಲೆಕ್ಕ ಮಾಡೋದಿಲ್ಲ.. ಹೀಗೆ ರೀಲ್ಸ್‌ ಮಾಡಲು ಹೋಗು ಪ್ರಾಣ ಕಳೆದುಕೊಂಡವರು ಲೆಕ್ಕಕ್ಕೇ ಇಲ್ಲ.. ಆ ಸಾಲಿಗೆ ಇನ್ನೊಬ್ಬರು ರೀಲ್ಸ್‌ ಸ್ಟಾರ್‌ ಸೇರಿದ್ದಾರೆ.. ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಹೆಸರು ಮಾಡಿದ್ದ ಮುಂಬೈನ ಯುವತಿಯೊಬ್ಬಳು, ರೀಲ್ಸ್‌ ಮಾಡುವ ಜಾರಿ ಫಾಲ್ಸ್‌ನಲ್ಲಿ ಬಿದ್ದು ಸಾವನ್ನಪ್ಪಿದ್ದಾಳೆ..

ಇದನ್ನೂ ಓದಿ; ಪ್ರೇಯಸಿಗಾಗಿ ಪತ್ನಿ, ಇಬ್ಬರು ಮಕ್ಕಳನ್ನು ಕೊಂದ ಫಿಸಿಯೋಥೆರಪಿಸ್ಟ್‌!

ಮುಂಬೈ ಮೂಲದ 26 ವರ್ಷದ ಅನ್ವಿ ಕಾಮ್ದಾರ್‌ ಎಂಬಾಕೆಯೇ ಸಾವನ್ನಪ್ಪಿದ ಯುವತಿಯಾಗಿದ್ದಾಳೆ.. ಈಗೆ ರಾಯಗಡದ ಕುಂಭೆ ಜಲಪಾತ ನೋಡಲು ಹೋಗಿದ್ದರು.. ಜುಲೈ 16ರಂದು ಈಕೆ ತನ್ನ 7 ಜನ ಸ್ನೇಹಿತೆಯರೊಂದಿಗೆ ಕುಂಭೆ ಜಲಪಾತ ನೋಡಲು ಹೋಗಿದ್ದಳು.. ಈ ವೇಳೆ ರೀಲ್ಸ್‌ ಮಾಡುವಾಗ ಆಯತಪ್ಪಿ 300 ಅಡಿ ಆಳಕ್ಕೆ ಬಿದ್ದಿದ್ದಾಳೆ.. ಇದರಿಂದಾಗಿ ಆಕೆ ಗಂಭೀರವಾಗಿ ಗಾಯಗೊಂಡಿದ್ದಳು.. ಇನ್ನು ಇದೇ ವೇಳೆ ವಿಪರೀತ ಮಳೆ ಬರುತ್ತಿದ್ದರಿಂದ ರಕ್ಷಣಾ ಕಾರ್ಯಾಚರಣೆ ಕಷ್ಟವಾಯಿತು. ಸುಮಾರು ಆರು ಗಂಟೆಗಳ ಕಾರ್ಯಾಚರಣೆಯ ನಂತರ, ಅನ್ವಿಳನ್ನು ಮೇಲಕ್ಕೆ ತರಲಾಯಿತು..

ಇದನ್ನೂ ಓದಿ; ಕೆಂಪು ಬದಲು ಮರೂನ್‌ ಲಿಪ್‌ಸ್ಟಿಕ್‌ ತಂದ ಗಂಡ; ಡಿವೋರ್ಸ್‌ ಕೇಳಿದ ಪತ್ನಿ!

ಕೂಡಲೇ ಆಕೆಯನ್ನು ಆಸ್ಪತ್ರೆಗೆ ಸೇರಿಸಲಾಯಿತು.. ಆದ್ರೆ ತೀವ್ರ ರಕ್ತಸ್ರಾವ ಆಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೇ ಆಕೆ ಸಾವನ್ನಪ್ಪಿದ್ದಾಳೆ ಎಂದು ತಿಳಿದುಬಂದಿದೆ..

Share Post