Politics

ಮೊದಲ ಬಾರಿಗೆ ಆಯ್ಕೆಯಾದ ಕಾಂಗ್ರೆಸ್‌ ಶಾಸಕರ ಗುಪ್ತ್‌ ಗುಪ್ತ್‌ ಮೀಟಿಂಗ್‌!

ಬೆಂಗಳೂರು; ಕಾಂಗ್ರೆಸ್‌ನಲ್ಲಿ ಆಂತರಿಕ ಕಚ್ಚಾಟ ಇದ್ದೇ ಇದೆ.. ಒಂದು ಗುಂಪಿಗೆ ಡಿ.ಕೆ.ಶಿವಕುಮಾರ್‌ ಅವರನ್ನು ಸಿಎಂ ಮಾಡಬೇಕು ಎಂದು ಆಸೆ ಇದೆ.. ಇನ್ನೊಂದು ಗುಂಪಿಗೆ ಡಿ.ಕೆ.ಶಿವಕುಮಾರ್‌ ಅವರನ್ನು ಏನಾದರೂ ಮಾಡಿ ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಬೇಕೆಂಬ ಬಯಕೆ.. ಇತ್ತೀಚೆಗೆ ಇದು ತಾರಕಕ್ಕೇರಿತ್ತು.. ಆದ್ರೆ ಹೈಕಮಾಂಡ್‌ ಇದಕ್ಕೆಲ್ಲಾ ಬ್ರೇಕ್‌ ಹಾಕಿದೆ.. ಈ ನಡುವೆಯೇ ಇದೇ ಮೊದಲ ಬಾರಿಗೆ ಆಯ್ಕೆಯಾದ ಕಾಂಗ್ರೆಸ್‌ ಶಾಸಕರು ಸರ್ಕಾರದ ಕಾರ್ಯವೈಖರಿ ಬಗ್ಗೆ ಅಸಮಾಧಾನ ಹೊಂದಿದ್ದಾರೆ.. ಅಂತಹ ಶಾಸಕರಿಗೆ ಖಾಸಗಿ ಹೋಟೆಲ್‌ನಲ್ಲಿ ಡಿನ್ನರ್‌ ಪಾರ್ಟಿ ಕೊಡಿಸಲಾಗಿದೆ..

ಇದನ್ನೂ ಓದಿ; 7ನೇ ವೇತನ ಆಯೋಗ ಶಿಫಾರಸು ಜಾರಿ; ಕಲಾಪದಲ್ಲಿ ಸಿಎಂ ಸಿದ್ದರಾಮಯ್ಯ ಘೋಷಣೆ

ಸರ್ಕಾರದ ಬಗ್ಗೆ ಅಸಮಾಧಾನ ಹೊಂದಿರುವ ಕಾಂಗ್ರೆಸ್‌ ಶಾಸಕರಿಗೆ ಡಿ.ಕೆ.ಶಿವಕುಮಾರ್‌ ಅವರ ಆಪ್ತ ಶಾಸಕ, ಮಂಡ್ಯದ ಗಣಿಗ ರವಿಕುಮಾರ್‌ ಪಾರ್ಟಿ ಕೊಡಿಸಿದ್ದದಾರೆ.. ಪಾರ್ಟಿ ನೆಪದಲ್ಲಿ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ತಡೆ ರಾತ್ರಿವರೆಗೂ ಬಿಸಿಬಿಸಿ ಚರ್ಚೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.. ಸರ್ಕಾರದೊಳಗಿನ ಕೆಲ ತೀರ್ಮಾನಗಳಿಂದ ಹೊಸ ಶಾಸಕರಿಗೆ ಬೇಸರವಾಗಿದೆ ಎಂದು ಹೇಳಲಾಗುತ್ತಿದೆ.. ಪಾರ್ಟಿ ವೇಳೆ ಅಸಮಾಧಾನಿತ ಶಾಸಕರು ತಮ್ಮ ನೋವು ತೋಡಿಕೊಂಡಿದ್ದಾರೆ ಎನ್ನಲಾಗಿದೆ..

ಇದನ್ನೂ ಓದಿ; ಪಂಚೆ ಧರಿಸಿ ಬಂದ ರೈತನಿಗೆ ನೋ ಎಂಟ್ರಿ!; ಜಿಟಿ ಮಾಲ್‌ ಸಿಬ್ಬಂದಿ ದರ್ಪ!

ಒಂದು ವರ್ಷ ಕಳೆದರೂ ಕ್ಷೇತ್ರಗಳಿಗೆ ಅನುದಾನ ಸಿಕ್ಕಿಲ್ಲ, ವರ್ಗಾವಣೆ ವಿಚಾರದಲ್ಲೂ ನಮ್ಮನ್ನು ಕಡೆಗಣಿಸಲಾಗುತ್ತಿದೆ. ಇದರಿಂದಾಗಿ ನಾವು ಶಾಸಕರಾಗಿವುದೇ ವೇಸ್ಟ್‌ ಏನಿಸುತ್ತಿದೆ ಎಂದು ಅಸಮಾಧಾನ ತೋಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.. ಗುರುವಾರ ಸಿಎಂ ಸಿದ್ದರಾಮಯ್ಯ ಅವರು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ.. ಇದಕ್ಕೂ ಮುನ್ನ ಶಾಸಕರು ಡಿನ್ನರ್‌ ಪಾರ್ಟಿ ಹೆಸರಲ್ಲಿ ಮೀಟಿಂಗ್‌ ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ..

Share Post