7ನೇ ತರಗತಿ ಬಾಲಕಿ ಗ್ಯಾಸ್ ಡೆಲಿವರಿ ಬಾಯ್ ಮನೆಯಲ್ಲಿ ಅನುಮಾನಾಸ್ಪದ ಸಾವು!
ಗುಂಟೂರು(ಅಂಧ್ರಪ್ರದೇಶ); ಅನಾರೋಗ್ಯ ಎಂದು ಹೇಳಿ ಶಾಲೆಯಿಂದ ಹೊರಬಂದ ಏಳನೇ ತರಗತಿ ಬಾಲಕಿಯೊಬ್ಬಳು ಗ್ಯಾಸ್ ಡೆಲಿವರಿ ಬಾಯ್ ಮನೆಯಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾಳೆ.. ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಚೇಬ್ರೋಲು ಬಳಿಯ ಕೊತ್ತರೆಡ್ಡಿಪಾಲೇನಿಯಲ್ಲಿ ಈ ದುರ್ಘಟನೆ ನಡೆದಿದೆ.. ಆಕೆ ಯಾಕೆ ಗ್ಯಾಸ್ ಡೆಲಿವರಿ ಬಾಯ್ ಮನೆಗೆ ಹೋದಳು..?, ಅಲ್ಲೇನು ನಡೆಯಿತು..? ಎಂಬುದರ ಬಗ್ಗೆ ಅನೇಕ ಅನುಮಾನಗಳು ಹುಟ್ಟಿಕೊಂಡಿವೆ.
ಇದನ್ನೂ ಓದಿ; ಹೆಂಡತಿಯ ಈ ಮೂರು ಅಭ್ಯಾಸಗಳು ಗಂಡನಿಗೆ ಇಷ್ಟವಾಗೋದಿಲ್ಲವಂತೆ..!
ಅದೇ ಗ್ರಾಮದ 13 ವರ್ಷದ ಶೈಲಜಾ ಎಂಬು ಬಾಲಕಿಯೇ ಸಾವನ್ನಪ್ಪಿದವಳಾಗಿದ್ದಾಳೆ.. ಈಕೆ ಕೊತ್ತರೆಡ್ಡಿಪಾಲೆಂನ ಸರ್ಕಾರಿ ಶಾಲೆಯಲ್ಲಿ ಏಳನೇ ತರಗತಿ ಓದುತ್ತಿದ್ದು, ನಿನ್ನೆ ಹುಷಾರಿಲ್ಲ ಎಂದು ಹೇಳಿಲ್ಲ ಬೇಗನೆ ಶಾಲೆಯಿಂದ ಹೊರಟಿದ್ದಾಳೆ.. ಆದ್ರೆ ಸಂಜೆಯಾದರೂ ಆಕೆಗೆ ಮನೆಗೆ ಬಂದಿಲ್ಲ.. ಇದರಿಂದಾಗಿ ಪೋಷಕರು ಆತಂಕಗೊಂಡು ಹುಡುಕಾಟ ನಡೆಸಿದ್ದಾರೆ.. ಈ ವೇಳೆ ಗ್ಯಾಸ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುವ ನಾಗರಾಜು ಎಂಬುವವರ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ.
ಇದನ್ನೂ ಓದಿ; ಡ್ರಗ್ಸ್ ಕೇಸ್ನಲ್ಲಿ ನಟಿ ರಕುಲ್ ಪ್ರೀತ್ಸಿಂಗ್ ಸಹೋದರ ಅರೆಸ್ಟ್!
ಶೈಲಜಾ ಕತ್ತಿನ ಮೇಲೆ ಗಾಯಗಳಾಗಿದ್ದು, ಅತ್ಯಾಚಾರ ನಡೆಸಿ ಕೊಲೆ ಮಾಡಿರಬಹುದು ಎಂದು ಶಂಕೆ ವ್ಯಕ್ತಪಡಿಸಲಾಗಿದೆ.. ಇನ್ನು ಗ್ಯಾಸ್ ಡೆಲಿವರಿ ಬಾಯ್ ನಾಗರಾಜು ತಲೆಮರೆಸಿಕೊಂಡಿದ್ದಾನೆ.. ಆತನೇ ಶೈಲಜಾಳನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿದ್ದಾನೆ ಎಂದು ಶಂಕಿಸಲಾಗಿದೆ.. ಆರೋಪಿಗಾಗಿ ಹುಡುಕಾಟ ನಡೆಸಲಾಗುತ್ತಿದೆ..