CrimeDistricts

ದೊಡ್ಡಬಳ್ಳಾಪುರದಲ್ಲಿ ರೈಲಿಗೆ ಸಿಲುಕಿ ದಂಪತಿ ದಾರುಣ ಸಾವು!; ಆಕಸ್ಮಿಕವಾ..?, ಆತ್ಮಹತ್ಯೆಯಾ..?

ಚಿಕ್ಕಬಳ್ಳಾಪುರ; ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕಿನ ಮಾಕಳಿದುರ್ಗ ಬಳಿ ರೈತ ದಂಪತಿ ರೈಲಿಗೆ ಸಿಲುಕಿ ಸಾವನ್ನಪ್ಪಿದ್ದಾರೆ.. ಜಮೀನು ಕೆಲಸಕ್ಕೆ ತೆರಳುವಾಗ ರೈಲು ಹಳಿ ದಾಟಬೇಕಿತ್ತು.. ಈ ವೇಳೆ ರೈಲು ಬಂದಿದ್ದು, ಇಬ್ಬರೂ ರೈಲಿಗೆ ಸಿಲುಕಿ ಸಾವನ್ನಪ್ಪಿದ್ದಾರೆ..

ಇದನ್ನೂ ಓದಿ; ಸ್ವಂತ ಮಗಳ ಖಾಸಗಿ ವಿಡಿಯೋ ವೈರಲ್‌ ಮಾಡಿದ ತಂದೆ!; ಫಿನಾಯಿಲ್‌ ಕುಡಿದ ತಾಯಿ!

ನಾಯಕರಂಡಹಳ್ಳಿ ಗ್ರಾಮದ ಚಂದ್ರ ನಾಯ್ಕ ಹಾಗೂ ಜಯಾಭಾಯಿ ಎಂಬುವವರೇ ಸಾವನ್ನಪ್ಪಿದವರು.. ಇಂದು ಬೆಳಗ್ಗೆ ಅವರು ಹೊಲದಲ್ಲಿ ಕೆಲಸ ಮಾಡಲು ಹೋಗುತ್ತಿದ್ದರು.. ಈ ವೇಳೆ ಮಾಕಳಿದುರ್ಗದ ಬಳಿ ರೈಲು ಹಳಿ ದಾಟುವಾಟ ರೈಲು ಡಿಕ್ಕಿ ಹೊಡೆದು ಈ ದುರಂತ ನಡೆದಿದೆ..

ಇದನ್ನೂ ಓದಿ; ಟ್ರ್ಯಾಕ್ಟರ್‌ನಿಂದ ಗುದ್ದಿಸಿ ಮಹಿಳೆಯ ದಾರುಣ ಹತ್ಯೆ!; ಅಡ್ಡ ಬಂದವನಿಗೆ ಮಚ್ಚಿನಿಂದ ಹಲ್ಲೆ!

ದಂಪತಿ ಇಬ್ಬರೂ ಸಾವನ್ನಪ್ಪಿದ್ದು, ಇದು ಆಕಸ್ಮಿಕ ಸಾವೋ ಅಥವಾ ಆತ್ಮಹತ್ಯೆಯೋ ಇನ್ನೂ ಗೊತ್ತಾಗಿಲ್ಲ.. ದೊಡ್ಡಬಳ್ಳಾಪುರ ರೈಲ್ವೆ ಪೊಲೀಸರು ಈ ಬಗ್ಗೆ ಪರಿಶೀಲನೆ ಮಾಡುತ್ತಿದ್ದಾರೆ..

Share Post