ಮಕ್ಕಳು ನನ್ನವಲ್ಲ ಇಂದ ಗಂಡ; ಕತ್ತು ಸೀಳಿ ಕೊಲೆ ಮಾಡಿದ ಪತ್ನಿ
ಕಾಶ್ಮೀರ; ಮಕ್ಕಳ ಅಪ್ಪ ನಾನಲ್ಲ ಎಂದು ಗಂಡ ಹೇಳಿದ್ದರಿಂದ ಮನ ನೊಂದ ತಾಯಿ ತನ್ನ ಅವಳಿ ಶಿಶುಗಳ ಕತ್ತು ಸೀಳಿ ಕೊಲೆ ಮಾಡಿರುವ ದಾರುಣ ಘಟನೆ ನಡೆದಿದೆ.. ಜಮ್ಮು ಕಾಶ್ಮೀರದ ಪೂಂಚ್ ನಲ್ಲಿ ಈ ದುರ್ಘಟನೆ ನಡೆದಿದೆ.
ಶಿಶುಗಳನ್ನು ಹೊಲದ ಬಳಿಗೆ ತೆಗೆದುಕೊಂಡು ಹೋಗಿದ್ದ ಮಹಿಳೆ ಅಲ್ಲಿಯೇ ಅವುಗನ್ನು ಸಾಯಿಸಿದ್ದಾಳೆ.. ಮಹಿಳೆಯ ಗಂಡ ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಿದ್ದ. ಕೆಲ ತಿಂಗಳ ಹಿಂದಷ್ಟೇ ಊರಿಗೆ ಬಂದಿದ್ದ.. ಇದೇ ವೇಳೆ ಮಹಿಳೆ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾಳೆ.. ಇದರಿಂದಾಗಿ ಗಂಡ ಅನುಮಾನ ವ್ಯಕ್ತಪಡಿಸಿದ್ದಾನೆ.. ಅಕ್ರಮ ಸಂಬಂಧದಿಂದ ಮಕ್ಕಳಾಗಿವೆ ಎಂದಿದ್ದಾನೆ. ಪೊಲೀಸರಿಗೂ ದೂರು ಕೊಟ್ಟಿದ್ದಾನೆ. ಇದರಿಂದ ನೊಂದ ಮಹಿಳೆ ಮಕ್ಕಳನ್ನು ಕೊಂದಿದ್ದಾಳೆ.