CrimeNational

ಮೆಟ್ರೋದಲ್ಲಿ ಪರ್ಸ್‌ ಕದಿಯುತ್ತಿದ್ದವನಿಗೆ ಬಿತ್ತು ಧರ್ಮದೇಟು!

ನವದೆಹಲಿ; ಬಸ್‌, ಬಸ್‌ ಸ್ಟ್ರಾಂಡ್‌ ಸೇರಿ ಜನ ಸಂದಣಿ ಹೆಚ್ಚಿರುವ ಜಾಗಗಳಲ್ಲಿ ಕದಿಯುವವರು ಹೆಚ್ಚಿರುತ್ತಾರೆ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ. ಸ್ವಲ್ಪ ಯಾಮಾರಿದರೂ ಪಿಕ್‌ಪಾಕೆಟ್‌ ಮಾಡಿಬಿಡುತ್ತಾರೆ.. ಆದ್ರೆ ಮೆಟ್ರೋ ರೈಲುಗಳಲ್ಲಿ ಎಲ್ಲಾ ಕಡೆ ಸಿಸಿಟಿವಿ ಕ್ಯಾಮರಾಗಳಿರುತ್ತವೆ.. ಹೀಗಾಗಿ ಯಾರೂ ಕೂಡಾ ಇಂತಹ ಸ್ಥಳದಲ್ಲಿ ಕದಿಯುವ ಪ್ರಯತ್ನ ಮಾಡೋದಿಲ್ಲ.. ಕದ್ದರೂ ಸಿಕ್ಕಿಬೀಳುತ್ತಾರೆ.. ಹೀಗಿದ್ದರೂ ವ್ಯಕ್ತಿಯೊಬ್ಬ ಪರ್ಸ್‌ ಒಂದನ್ನು ಎಗರಿಸಲು ಹೋಗಿ ಸಿಕ್ಕಿಬಿದ್ದಿದ್ದಾನೆ.. ಸಾರ್ವಜನಿಕರು ಆತನಿಗೆ ಚೆನ್ನಾಗಿ ಗೂಸಾ ಕೊಟ್ಟು ಪೊಲೀಸರಿಗೆ ಒಪ್ಪಿಸಿದ್ದಾರೆ..

ದೆಹಲಿಯ ಕಾಶ್ಮೀರಿ ಗೇಟ್ ಮೆಟ್ರೋ ನಿಲ್ದಾಣದಲ್ಲಿ ಇಂತಹದ್ದೊಂದು ಘಟನೆ ನಡೆದಿದೆ.. ಪ್ರಯಾಣಿಕನ ಸೋಗಿನಲ್ಲಿ ಬಂದಿದ್ದ ಕಳ್ಳ, ಮಹಿಳೆಯೊಬ್ಬರು ಪರ್ಸ್‌ ಕದಿಯಲು ಯತ್ನಿಸಿದ್ದಾನೆ.. ಈ ವೇಳೆ ಇತರ ಪ್ರಯಾಣಿಕರು ನೋಡಿದ್ದು, ಆತನನ್ನು ಹಿಡಿದು ಚೆನ್ನಾಗಿ ಥಳಿಸಿದ್ದಾರೆ.. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ವೈರಲ್‌ ಆಗುತ್ತಿದೆ..

 

Share Post