Crime

ಯೂಟ್ಯೂಬರ್‌ ವಿಕಾಸ್‌ ಪಾಠಕ್‌ ಬಂಧನ

ಮುಂಬೈ : ತಮ್ಮ ಡೈಲಾಗ್‌ಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು  ಗಮನ ಸೆಳೆದಿರುವ ರುಕೋ ಜರಾ, ಸಬರ್‌ ಕರೋ, ಹಿಂದೂಸ್ಥಾನಿ ಭಾವು ಖ್ಯಾತಿಯ ಪಾಠಕ್‌  ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

ಮಹಾರಾಷ್ಟ್ರ ಶಿಕ್ಷಣ ಸಚಿವೆ ವರ್ಷಾ ಗಾಯಕ್‌ವಾಡ್‌ ಅವರ ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಲು ಕುಮ್ಮಕ್ಕು ನೀಡಿದ್ದಾರೆ ಎಂಬ ಆರೋಪದ ಮೇಲೆ ಬಂಧಿಸಲಾಗಿದೆ.

ಮಹಾರಾಷ್ಟ್ರಾದಲ್ಲಿ ಮೂರನೇ ಅಲೆ ಇದ್ದರೂ ಸುರಕ್ಷತಾ ಕ್ರಮ ಅನುಸರಿಸಿ ಆಫ್‌ಲೈನ್‌ ಪರೀಕ್ಷೆಗಳನ್ನು  ನಡೆಸಲು ಸಚಿವೆ ವರ್ಷ ಆದೇಶಿಸಿದ್ದರು. ಇದರ ವಿರುದ್ಧ ಹಾಗೂ ಕೊರೊನಾದಿಂದ ವಿದ್ಯಾರ್ಥಿಗಳ ವಿದ್ಯಾಭ್ಯಾಸ ಸರಿಯಾಗಿಲ್ಲ ಎಂದು ವಿಕಾಸ್‌ ಪಾಠಕ್‌ ಅವರು ವರ್ಷಾ ಅವರ ಮನೆ ಮುಂದೆ ಪ್ರತಿಭಟನೆ ನಡೆಸಿ ಎಂದು ಕರೆ ಕೊಟ್ಟಿದ್ದರು.

ಅದರಂತೆಯೇ  10 ಮತ್ತು 12ನೇ ತರಗತಿ ವಿದ್ಯಾರ್ಥಿಗಳು ಸಚಿವೆ ವರ್ಷಾ ಅವರ ಮನೆ ಮುಂದೆ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಗಲಾಟೆ ಕೂಡ ಆಗಿತ್ತು. ಇದರಿಂದ ವಿಕಾಸ್‌ ಪಾಠಕ್‌ ಅವರನ್ನು ಬಂಧಿಸಲಾಗಿದೆ

Share Post