CrimeDistricts

ಶಾಲೆಯಲ್ಲೇ ನೇಣಿಗೆ ಶರಣಾದ 8ನೇ ತರಗತಿ ವಿದ್ಯಾರ್ಥಿ..!

ಚಿತ್ರದುರ್ಗ; ಶಾಲಾ ಕೊಠಡಿಯಲ್ಲೇ ಎಂಟನೇ ತರಗತಿ ವಿದ್ಯಾರ್ಥಿಯೊಬ್ಬ ನೇಣಿಗೆ ಶರಣಾಗಿದ್ದಾನೆ.. ಚಿತ್ರದುರ್ಗ ಜಿಲ್ಲೆ ಹಿರಿಯೂರು ಬಳಿಯ ಉಡುವಳ್ಳಿಯ ನವೋದಯ ಶಾಲೆಯಲ್ಲಿ ಈ ಘಟನೆ ನಡೆದಿದೆ..

8ನೇ ತರಗತಿ ವಿದ್ಯಾರ್ಥಿ ಪ್ರೇಮ ಸಾಗರ(13) ಎಂಬಾತನೇ ಆತ್ಮಹತ್ಯೆ ಮಾಡಿಕೊಂಡವನು. ಈತ ಹೊಳಲ್ಕೆರೆ ತಾಲ್ಲೂಕಿನ ಕೆಂಗುಂಟೆ ಗ್ರಾಮದವನಾಗಿದ್ದು, ನವೋದಯ ವಸತಿ ಶಾಲೆಯಲ್ಲಿ ಎಂಟನೇ ತರಗತಿ ಓದುತ್ತಿದ್ದ. ಹಿರಿಯ ವಿದ್ಯಾರ್ಥಿಗಳು ಯಾವಾಗಲೂ ರೇಗಿಸುತ್ತಿದ್ದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ..
ಪ್ರೇಮ ಸಾಗರ ಮೃತದೇಹವನ್ನು ತಾಲ್ಲೂಕು ಆಸ್ಪತ್ರೆಗೆ ರವಾನಿಸಲಾಗಿದ್ದು, ಮರಣೋತ್ತರ ಪರೀಕ್ಷೆ ನಡೆಸಿ ಪೋಷಕರಿಗೆ ಹಸ್ತಾಂತರ ಮಾಡಲಾಗಿದೆ. ಸ್ಥಳಕ್ಕೆ ಹಿರಿಯೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 

Share Post