ಶಾಲೆಯಿಂದ ಕಾಲೇಜುವರೆಗೆ ಒಟ್ಟಿಗೆ ಓದಿದರು!; ಪ್ರೀತಿಸಿ ಮದುವೆಯಾದ ಇಬ್ಬರೂ ಸತ್ತಿದ್ದು ಯಾಕೆ..?
ಲಖನೌ; ಪ್ರಾಥಮಿಕ ಶಾಲೆಯಿಂದ ಕಾಲೇಜಿನವರೆಗೂ ಸಹಪಾಠಿಗಳಾಗಿ ಓದಿ, ಪ್ರೀತಿ ಮಾಡಿ ಮದುವೆಯಾಗಿದ್ದ ದಂಪತಿ ಬೇರೆ ಬೇರೆ ಸ್ಥಳಗಳಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.. ವಾರಾಣಸಿಯ ಸೋಮನಾಥದಲ್ಲಿನ ಹೋಮ್ ಸ್ಟೇನಲ್ಲಿ ಹರೀಶ್ ಬಾಗೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.. ಇದನ್ನು ತಿಳಿದ ಪತ್ನಿ ಸಂಚಿತಾ ಶ್ರೀವಾಸ್ತವ್ ಅವರು ಗೋರಖ್‌ಪುರದಲ್ಲಿ ತನ್ನ ಮನೆಯ ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ..
ಹರೀಶ್ ಹಾಗೂ ಸಂಚಿತಾ ಅವರು ಪ್ರಾಥಮಿಕ ಶಾಲೆಯಿಂದ ಕಾಲೇಜಿನವರೆಗೂ ಜೊತೆಯಲ್ಲೇ ಓದಿದ್ದರು.. ಇಬ್ಬರೂ ಉತ್ತಮ ಸ್ನೇಹಿತರಾಗಿದ್ದರು.. ಕಾಲೇಜಿಗೆ ಬಂದಾಗ ಇಬ್ಬರೂ ಪ್ರೀತಿಸಿ ಮದುವೆಯಾಗಿದ್ದರು.. ಮದುವೆಯ ಬಳಿಕ ಇಬ್ಬರೂ ಮುಂಬೈಗೆ ಶಿಫ್ಟ್ ಆಗಿದ್ದರು.. ಎಂಬಿಎ ಮಾಡಿದ್ದ ಹರೀಶ್ ಖಾಸಗಿ ಬ್ಯಾಂಕ್‌ನಲ್ಲಿ ಕೆಲಸ ಮಾಡಿದ್ದರು.. ಆದ್ರೆ ನಂತರ ಉತ್ತಮ ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿದ್ದರು.. ಆದ್ರೆ ಎಷ್ಟು ಹುಡುಕಿದರೂ ಕೆಲಸ ಸಿಕ್ಕಿರಲಿಲ್ಲ.. ಇದರಿಂದ ಹರೀಶ್ ಬೇಸತ್ತಿದ್ದರು..
ದಂಪತಿ ಇಬ್ಬರೂ ಗೋರಖ್‌ಪುರಕ್ಕೆ ಬಂದಿದ್ದರು.. ಅಲ್ಲಿಂದ ತನ್ನ ಸ್ವಂತೂರಿಗೆ ಹೋಗಿಬರುತ್ತೇನೆ ಎಂದು ಹರೀಶ್ ಹೋಗಿದ್ದಾರೆ.. ಆದ್ರೆ ಮನೆಗೆ ಹೋಗದೇ ವಾರಾಣಸಿಗೆ ಹೋಗಿದ್ದಾರೆ.. ಅಲ್ಲಿ ಹೋಮ್ ಸ್ಟೇ ನಲ್ಲಿ ರೂಮ್ ಬುಕ್ ಮಾಡಿದ್ದಾರೆ.. ಅಲ್ಲಯೇ ಅವರು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.. ಇದನ್ನು ತಿಳಿಯುತ್ತಿದ್ದಂತೆ ಪತ್ನಿ ಸಂಚಿತಾ ಕೂಡಾ ಮನೆಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ..