ಮಲಯಾಳಂನತ್ತ ತುಪ್ಪದ ಬೆಡಗಿ
ಬೆಂಗಳೂರು: ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅವರು ಈಗ ಮತ್ತೊಮ್ಮೆ ಮಲಯಾಳಂ ಚಿತ್ರರಂಗಕ್ಕೆ ತೆರಳಿದ್ದಾರೆ.ಹೊಸ ಸಿನಿಮಾದಲ್ಲಿ ರಾಗಿಣಿ ಮಿಂಚಲಿದ್ದಾರೆ. ಆ ಚಿತ್ರ ಕನ್ನಡ ಮತ್ತು ಮಲಯಾಳಂ ಎರಡೂ ಭಾಷೆಯಲ್ಲಿ ತೆರೆಕಾಣಲಿದೆ. ಈ ಸಿನಿಮಾಕ್ಕೆ ಮಲಯಾಳಂನಲ್ಲಿ ಶೈಲಾ ಎಂಬ ಹೆಸರನ್ನು ತಾತ್ಕಾಲಿಕವಾಗಿ ಇಡಲಾಗಿದೆ. ಕನ್ನಡದ ಶೀರ್ಷಿಕೆ ಇನ್ನೂ ಅಂತಿಮವಾಗಿಲ್ಲ. ಕೇರಳದಲ್ಲಿನ ೨೦೦ ವರ್ಷ ಹಳೆಯ ಟೀ ಎಸ್ಟೇಟ್‌ನಲ್ಲಿ ಚಿತ್ರೀಕರಣ ನಡೆಯಲಿದೆ. ಸಸ್ಪೆನ್ಸ್ ಥ್ರಿಲ್ಲರ್ ಒಳಗೊಂಡ ಸಿನಿಮಾವಾಗಿದೆ.ಇದರಲ್ಲಿ ರಾಗಿಣಿ ಬೋಲ್ಡ್ ಆಗಿ ವಿಧವೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬಾಲು ನಾರಾಯಣ್ ನಿರ್ದೇಶನದ ಚಿತ್ರಕ್ಕೆ ದೃಶ್ಯಂ ಖ್ಯಾತಿಯ ಅನಿಲ್ ಜಾನ್ಸನ್ ಸಂಗೀತವಿದೆ.