ಈ ಮೂರು ವಿಷಯಗಳು ಮನುಷ್ಯನನ್ನು ಎಂದಿಗೂ ಉದ್ಧಾರ ಮಾಡಲ್ಲ
ಯಾವುದೇ ಮನುಷ್ಯ ಉದ್ದಾರ ಆಗಬೇಕಾದರೆ ಆತನ ಹವ್ಯಾಸಗಳು, ಮಾಡುವ ಕೆಲ್ಸಗಳು ಮುಖ್ಯವಾಗುತ್ತವೆ.. ವಿದುರ ನೀತಿಯ ಪ್ರಕಾರ, ಮನುಷ್ಯನಿಗೆ ಕೆಳಗಿನ ಮೂರು ಹವ್ಯಾಸಗಳು ಇರಬಾರದು.. ಈ ಮೂರನ್ನು ಕೈಬಿಟ್ಟರೆ ಮನುಷ್ಯ ಉದ್ಧಾರ ಆಗುತ್ತಾನೆ..
ಸೋಮಾರಿತನ ಇದ್ದವರು ಎಂದಿಗೂ ಉದ್ಧಾರ ಆಗಲ್ಲ;
ಮನುಷ್ಯ ಉದ್ಧಾರ ಆಗಬೇಕಾದರೆ ಆತ ಆಕ್ಟಿವ್ ಆಗಿರಬೇಕು. ಯಾವಾಗ ಮನುಷ್ಯ ಸೋಮಾರಿ ಆಗ್ತಾನೋ ಆಗ ಯಾವ ಕೆಲಸಗಳು ಆಗೋದಿಲ್ಲ.. ಸೋಮಾರಿ ಯಾವತ್ತೂ ಉದ್ಧಾರ ಆಗೋದಿಲ್ಲ ಅಂತ ವಿದುರ ನೀತಿ ಹೇಳುತ್ತೆ.. ಎಷ್ಟೇ ಶ್ರೀಮಂತಿಕೆ ಇದ್ದರೂ ಸೋಮಾರಿತನದಿಂದ ಎಲ್ಲ ಆಸ್ತಿಯೂ ಖಾಲಿಯಾಗುತ್ತದೆ..
ಅತಿಯಾದ ನಿರೀಕ್ಷೆ ಇದ್ದವರೂ ಉದ್ಧಾರ ಆಗಲ್ಲ;
ನಾನು ಯಾವುದೇ ಕೆಲಸವನ್ನು ಇನ್ನೊಬ್ಬರನ್ನು ನಂಬಿಕೊಂಡು ಮಾಡಬಾರದು.. ಬೇರೆಯವರು ಮಾಡುತ್ತಾರೆ ಎಂದು ನಿರೀಕ್ಷೆ ಇಟ್ಟುಕೊಂಡರೆ ನಾವು ಎಂದಿಗೂ ಉದ್ದಾರ ಆಗಲ್ಲ.. ನಮ್ಮನ್ನ ನಾವು ನಂಬಬೇಕು. ಬೇರೆ ಯಾರನ್ನೋ ನಂಬಿಕೊಂಡು ಯಾವುದೇ ಕೆಲಸಕ್ಕೆ ಕೈ ಹಾಕಬಾರದು..
ದೇವರ ಮೇಲೆ ಅತಿಯಾದ ನಂಬಿಕೆ ಇರಬಾರದು;
ತುಂಬಾ ಜನ ದೇವರ ಮೇಲೆ ಭಾರ ಹಾಕಿರುತ್ತಾರೆ.. ಆದ್ರೆ ಕೆಲಸವನ್ನೇ ಮಾಡದೇ ದೇವರೇ ಎಲ್ಲ ನೋಡಿಕೊಳ್ಳುತ್ತಾನೆ. ದೇವರೇ ಕಾಪಾಡುತ್ತಾನೆ. ಹುಟ್ಟಿಸಿದ ದೇವರು ಉಪವಾಸ ಕುರಿಸ್ತಾನಾ ಎಂದು ಹೇಳಿಕೊಂಡು ಕೂರಬಾರದು. ಹೀಗಾಗಿ ಯಾರೇ ಉದ್ಧಾರ ಆಗಬೇಕಾದರೂ ನಾವು ಮೊದ್ಲು ಪ್ರಯತ್ನ ಮಾಡಬೇಕು, ಜೊತೆಗೆ ದೇವರ ಕೃಪೆ ಕೊರಬೇಕು. ಅದೂ ಬಿಟ್ಟು ದೇವರ ಬಗ್ಗೆ ಅತಿಯಾದ ನಂಬಿಕೆ ಇಡಬಾರದು. ದೇವರು ಬಂದು ನಿಮ್ಮ ಮಾಡಿಕೊಡೋದಕ್ಕೆ ಆಗೋದಿಲ್ಲ..