CrimeDistricts

ಕಲಬುರಗಿಯಲ್ಲಿ ಸಿಡಿಲು ಬಡಿದು ಮನೆಗೆ ಬೆಂಕಿ!; ಮುಂದೇನಾಯ್ತು..?

ಕಲಬುರಗಿ; ರಾಜ್ಯದ ಬಹುತೇಕ ಕಡೆ ಮಳೆಯಾಗುತ್ತಿದೆ.. ಇದರ ನಡುವೆ ಹಲವು ಅವಾಂತರಗಳು ಕೂಡಾ ನಡೆಯುತ್ತಿವೆ.. ಅದೇ ರೀತಿ ಕಲಬುರಗಿಯಲ್ಲಿ ಸಿಡಿಲು ಬಡಿದು ಅವಾಂತರ ಸೃಷ್ಟಿಯಾಗಿದೆ.. ಕಲಬುರಗಿ ತಾಲ್ಲೂಕಿನ ಹೊನ್ನಕಿರಣಗಿ ಗ್ರಾಮದಲ್ಲಿ ಸಿಡಿಲಿನಿಂದಾಗಿ ಮನೆಯೊಂದಕ್ಕೆ ಬೆಂಕಿ ತಲುಗಿ ಆತಂಕಕ್ಕೆ ಕಾರಣವಾಗಿತ್ತು..

ಹೊನ್ನಕಿರಣಗಿ ಗ್ರಾಮದ ರಾಜ್‌ಕುಮಾರ್‌ ನಿಂಗಯ್ಯ ಕೋಣಿನ್‌ ಎಂಬುವವರ ಮನೆಗೆ ಸಿಡಿಲಿನಿಂದಾಗಿ ಬೆಂಕಿ ಬಿದ್ದಿದೆ.. ಇಡೀ ಮನೆ ಸುಟ್ಟುಹೋಗಿದೆ.. ಇದರಿಂದಾಗಿ ಲಕ್ಷಾಂತರ ರೂಪಾಯಿ ನಷ್ಟವಾಗಿದೆ.. ಇತರ ಮನೆಗಳಿಗೂ ಬೆಂಕಿ ಹರಡುವ ಅಪಾಯವಿತ್ತು.. ಆದ್ರೆ ಅದನ್ನು ತಡೆಯಲಾಗಿದೆ..

ಮನೆಯಲ್ಲಿದ್ದವರನ್ನು ರಕ್ಷಣೆ ಮಾಡಲಾಗಿದ್ದು, ಅವರು ಸೇಫಾಗಿದ್ದಾರೆ.. ಆದ್ರೆ ಮನೆಯಲ್ಲಿ ಎಲ್ಲಾ ವಸ್ತುಗಳೂ ಬೆಂಕಿಗೆ ಆಹುತಿಯಾಗಿವೆ.. ಫರಹತಾಬಾದ್ ಪೊಲೀಸ್ ಠಾಣಾ ವ್ಯಾಪ್ತಿ ಈ ಘಟನೆ ನಡೆದಿದ್ದು, ಸಮಯಕ್ಕೆ ಸರಿಯಾಗಿ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದೆ..

 

Share Post