ಕಳ್ಳತನಕ್ಕೆ ಹೋಗಿ ಬೆಡ್ ರೂಮ್ ದೃಶ್ಯ ಚಿತ್ರೀಕರಿಸಿದ; ನಂತರ ಏನಾಯ್ತು?
ಛತ್ತಿಸ್ ಗಢ; ಕಳ್ಳತನ ಮಾಡಲು ಬಂದಿದ್ದ ಕಳ್ಳನೊಬ್ಬ ಮನೆಯೊಂದರಲ್ಲಿನ ಎಸಿ ಕೆಳಗೆ ಮಲಗಿಬಿಟ್ಟಿದ್ದ ಘಟನೆ ಇತ್ತೀಚೆಗೆ ನಡೆದಿತ್ತು. ಇದೀಗ ಛತ್ತೀಸ್ಗಢದಲ್ಲಿ ಮನೆಗೆ ನುಗ್ಗಿದ ಕಳ್ಳನೊಬ್ಬ ಬೆಡ್ ರೂಮ್ ನಲ್ಲಿ ನೋಡಬಾರದ ಸ್ಥಿತಿಯಲ್ಲಿ ಮಲಗಿದ್ದ ದಂಪತಿಯ ವಿಡಿಯೋ ಹಾಗೂ ಫೋಟೋ ತೆಗೆದಿದ್ದಾನೆ.. ಕೆಲ ದಿನಗಳ ನಂತರ ಮನೆಯ ಯಜಮಾನನ ವಾಟ್ಸಪ್ಪ್ ನಂಬರ್ ಸಂಗ್ರಹಿಸಿ ಅವುಗಳನ್ನು ಕಳುಹಿಸಿ ಬ್ಲಾಕ್ಮೇಲ್ ಮಾಡಿದ್ದಾನೆ..
ಸಿವಿಲ್ ಪರೀಕ್ಷೆ ಬರೆದಿದ್ದ ಯುವಕನೊಬ್ಬ ಪಾಸ್ ಆಗಿರಲಿಲ್ಲ.. ಕನಸು ಈಡೇರದ ಕಾರಣ ಆತ ಕಳ್ಳತನಕ್ಕಿಳಿದಿದ್ದ.. ಅದೇ ರೀತಿ ಮನೆಯೊಂದಕ್ಕೆ ನುಗ್ಗಿದ್ದಾಗ ದಂಪತಿ ಸಂಭೋಗದಲ್ಲಿ ತೊಡಗಿದ್ದರು.. ಇದನ್ನು ಅವರಿಗೆ ಗೊತ್ತಿಲ್ಲದೇ ಕಳ್ಳ ರೆಕಾರ್ಡ್ ಮಾಡಿಕೊಂಡಿದ್ದಾನೆ.. ನಂತರ ಅದನ್ನ ದಂಪತಿಗೆ ಕಳುಹಿಸಿ 10 ಲಕ್ಷ ರುಪಾಯಿಗೆ ಬೇಡಿಕೆ ಇಟ್ಟಿದ್ದ..
ಇದರಿಂದ ಕಂಗಾಲಾದ ದಂಪತಿ ಪೊಲೀಸರಿಗೆ ದೂರು ನೀಡಿದ್ದಾರೆ.. ವಿನಯ್ ಕುಮಾರ್ ಎಂಬಾತಾನೆ ಆರೋಪಿ. ಆರೋಪಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ಮಾಡಿದಾಗ ನಿಜ ವಿಷಯ ಬಯಲಾಗಿದೆ.