CrimeDistricts

ಹಾವೇರಿ ಬಳಿ ಭೀಕರ ಅಪಘಾತ; 13 ಮಂದಿ ದುರ್ಮರಣ!

ಹಾವೇರಿ; ಹಾವೇರಿ ಬಳಿ ಭೀಕರ ಅಪಘಾತ ಸಂಭವಿಸಿದೆ.. ಲಾರಿಗೆ ಹಿಂಬದಿಯಿಂದ ಟಿಟಿ ವಾಹನ ಡಿಕ್ಕಿ ಹೊಡೆದಿದ್ದು, ಘಟನೆಯಲ್ಲಿ 13 ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ.

  ಹಾವೇರಿ ಜಿಲ್ಲೆ ಬ್ಯಾಡಗಿ ತಾಲ್ಲೂಕಿನ ಗುಂಡೆನಹಳ್ಳಿ ಕ್ರಾಸ್ ನಲ್ಲಿ ಈ ದುರಂತ ನಡೆದಿದೆ.

  ಟಿಟಿ ವಾಹನದಲ್ಲಿದ್ದವರು ಶಿವಮೊಗ್ಗ ಮೂಲದ ನಿವಾಸಿಗಳಗಿದ್ದಾರೆ. ಎಲ್ಲರು ಸವದತ್ತಿ ಯಲ್ಲಮ್ಮ ಕ್ಷೇತ್ರಕ್ಕೆ ಭೇಟಿ ನೀಡಿ ವಾಪಾಸ್ಸಾಗುತ್ತಿದ್ದರು. ಬೆಳಗಿನಜಾವ 4 ಗಂಟೆ ಸುಮಾರಿಗೆ ಈ ದುರಂತ ನಡೆದಿದೆ.. ಘಟನೆಯಲ್ಲಿ ಒಬ್ಬ ಬಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ..

  ಪರಶುರರಾಮ್ (45), ಭಾಗ್ಯ (40), ನಾಗೇಶ್ (50 l), ವಿಶಾಲಾಕ್ಷಿ (40), ಅರ್ಪಿತಾ (18), ಸುಭದ್ರಾಬಾಯಿ (65), ಪುಣ್ಯ (50), ಮಂಜುಳುಬಾಯಿ (62), ಆದರ್ಶ (23), ಮಾನಸ (24), ರೂಪಾ (40), ಮಂಜುಳಾ (50) ಮೃತಪಟ್ಟವರು..

 

Share Post