ಅತ್ತೆಗೆ ಸೊಸೆಯ ಮೇಲೆ ಮೋಹ!; ಅಸಹಜ ಲೈಂಗಿಕ ಕ್ರಿಯೆಗೆ ನಿರಂತರ ಒತ್ತಡ!
ಇತ್ತೀಚೆಗೆ ಸಲಿಂಗಕಾಮ, ಸಲಿಂಗ ಪ್ರೇಮ ಪ್ರಕರಣಗಳು ಹೆಚ್ಚಾಗುತ್ತಿವೆ.. ಇಂತಹದೇ ಕಾರಣಕ್ಕಾಗಿ ಮಾಜಿ ಸಚಿವ ರೇವಣ್ಣ ಅವರ ಹಿರಿಯ ಪುತ್ರ ಸೂರಜ್ ರೇವಣ್ಣ ಅವರು ಜೈಲುಪಾಲಾಗಿದ್ದಾರೆ.. ಆದ್ರೆ ನಾವು ಹೇಳ್ತಾ ಇರೋದು ಸೂರಜ್ ಸ್ಟೋರಿಯಲ್ಲ.. ಇಲ್ಲಿ ಅತ್ತೆಯೊಬ್ಬಳು ತನ್ನ ಸೊಸೆ ಮೇಲೆ ಮೋಹಗೊಂಡಿದ್ದಾಳೆ.. ಸೊಸೆಯೊಂದಿಗೆ ಅಸಹಜ ಲೈಂಗಿಕ ಕ್ರಿಯೆ ನಡೆಸೋದು ಆಕೆಗೆ ಇಷ್ಟವಂತೆ.. ಇದಕ್ಕಾಗಿ ನಿರಂತರವಾಗಿ ಕಿರುಕುಳ ನಡೆದಿದೆ.. ಇದಕ್ಕೆ ಸೊಸೆ ಒಪ್ಪದೇ ಇದ್ದುದಕ್ಕೆ ಅತ್ತೆ ಎರಡು ತಿಂಗಳ ಕಾಲ ಸೊಸೆಯನ್ನು ಮನೆಯಲ್ಲಿ ಕೂಡಿ ಹಾಕಿ ಚಿತ್ರಹಿಂಸೆ ನೀಡಿದ್ದಾಳೆ.. ಹೇಗೋ ತಪ್ಪಿಸಿಕೊಂಡು ಬಂದ ಸೊಸೆ ಪೊಲೀಸರಿಗೆ ದೂರು ನೀಡಿದ್ದಾಳೆ.
ಉತ್ತರ ಪ್ರದೇಶದ ಆಗ್ರಾದಲ್ಲಿ ಇಂತಹದ್ದೊಂದು ವಿಚಿತ್ರ ಘಟನೆ ನಡೆದಿದೆ. ಸೊಸೆ ಈಗ ಜಗದೀಶ್‌ಪುರ ಪೊಲೀಸ್ ಠಾಣೆಯಲ್ಲಿ ಅತ್ತೆಯ ವಿರುದ್ಧ ದೂರು ಕೊಟ್ಟಿದ್ದಾಳೆ.. ನನ್ನ ಜೊತೆ ಅತ್ತೆ ಶಾರೀರಿಕ ಸಂಬಂಧ ಬೆಳೆಸುವಂತೆ ಪೀಡಿಸುತ್ತಿದ್ದಾಳೆ.. ಒಪ್ಪದಿದ್ದಕ್ಕೆ ನನಗೆ ಹಿಂಸೆ ನೀಡಿದ್ದಾಳೆ ಎಂದು ಸೊಸೆ ಆರೋಪ ಮಾಡಿದ್ದಾಳೆ..
ಸಂತ್ರಸ್ತ ಮಹಿಳೆಗೆ ಎರಡು ವರ್ಷದ ಹಿಂದೆ ಮದುವೆಯಾಗಿತ್ತು.. ಉತ್ತರ ಪ್ರದೇಶದ ಗಾಜಿಪುರದಲ್ಲಿ ಮದುವೆ ನಡೆದಿದ್ದು, ಮೊದಲಿಗೆ ಸಂಸಾರ ಸರಿಯಾಗಿಯೇ ಇತ್ತು.. ಅನಂತರ ಅತ್ತೆ ನಾನಾ ತೊಂದರೆ ನೀಡಲು ಶುರು ಮಾಡಿದ್ದಾಳೆ.. ಸಾಲದೆಂಬಂತೆ ಅಸಹಜ ಲೈಂಗಿಕ ಕ್ರಿಯೆ ಒತ್ತಾಯ ಮಾಡಿದ್ದಾಳೆ ಎಂದು ಆರೋಪ ಮಾಡಲಾಗಿದೆ.. ಇದಕ್ಕೆ ಒಪ್ಪದಿದ್ದಕ್ಕೆ ಬ್ಲೇಡ್‌ನಿಂದ ಕುಯ್ದಿದ್ದಾಳೆ ಎಂದು ಸೊಸೆ ಆರೋಪ ಮಾಡಿದ್ದಾರೆ..