ತಿರುಪತಿಯಲ್ಲಿ ಭಕ್ತರ ಅನ್ನಪ್ರಸಾದಕ್ಕೆ ಖರ್ಚಾಗೋ ಹಣವೆಷ್ಟು..?
ಸರ್ಕಾರ ಬದಲಾದ ಮೇಲೆ ತಿರುಮಲದಲ್ಲಿ ಚಟುವಟಿಕೆಗಳು ಮತ್ತಷ್ಟು ಚುರುಕುಗೊಂಡಿವೆ.. ಭಕ್ತರಿಗೆ ನೀಡುವ ಅನ್ನ ಪ್ರಸಾದದ ವ್ಯವಸ್ಥೆ ಸೇರಿದಂತೆ ಎಲ್ಲದರಲ್ಲೂ ಗುಣಮಟ್ಟ ಕಾಪಾಡಿಕೊಳ್ಳಲು ಅಲ್ಲಿನ ಆಡಳಿತ ಮಂಡಳಿ ಕಾರ್ಯನಿರತವಾಗಿದೆ.. ಅಂದಹಾಗೆ ತಿರುಪತಿಗೆ ದಿನವೂ ಲಕ್ಷಾಂತರ ಭಕ್ತರು ಬರುತ್ತಾರೆ.. ಅವರಿಗಾಗಿ ಅನ್ನ ಪ್ರಸಾದ ನೀಡಲಾಗುತ್ತದೆ.. ಹಾಗಾದ್ರೆ ದಿನವೂ ಇಲ್ಲಿ ಎಷ್ಟು ಜನ ಊಟ ಮಾಡುತ್ತಾರೆ.. ದಿನಕ್ಕೆ ಅನ್ನಪ್ರಸಾದಕ್ಕೆ ಎಷ್ಟು ಖರ್ಚಾಗುತ್ತೆ ಅನ್ನೋದನ್ನು ನೋಡೋಣ..
ಮಾತೃಶ್ರೀ ತಾರಿಗೊಂಡ ವೆಂಗಮಾಂಬ ಅನ್ನಪ್ರಸಾದ ಕಾಂಪ್ಲೆಕ್ಸ್ (ಎಂಟಿವಿಎಸಿ), ವಿಕ್ಯೂಸಿಯಲ್ಲಿ ಅಕ್ಷಯ ಕಿಚನ್, ಪಿಎಸಿ 2 ಜೊತೆಗೆ ನೌಕರರ ಕ್ಯಾಂಟೀನ್ ಮತ್ತು ಪದ್ಮಾವತಿ ಅತಿಥಿ ಗೃಹ ಸೇರಿದಂತೆ ತಿರುಮಲದಲ್ಲಿ ಹಲವು ಅನ್ನಪ್ರಸಾದ ತಯಾರಿಸುವ ಸ್ಥಳಗಳಿವೆ.. ಇದರ ಜೊತೆಗೆ ಪಾಂಚಜನ್ಯಂ ಅಡುಗೆ ಮನೆಯನ್ನು ಕಾಮಗಾರಿ ಕೂಡಾ ಶೀಘ್ರಗತಿಯಲ್ಲಿ ಪೂರ್ಣಗೊಳಿಸಲು ತಯಾರಿ ನಡೆಸಲಾಗುತ್ತಿದೆ..
ಟಿಟಿಡಿ ಮಾಹಿತಿಯ ಪ್ರಕಾರ ತಿರುಮಲ ಮತ್ತು ತಿರುಪತಿ ಸೇರಿ ದಿನಕ್ಕೆ ಸರಾಸರಿ 1.92 ಲಕ್ಷ ಮಂದಿ ಅನ್ನಪ್ರಸಾದ ಸ್ವೀಕರಿಸುತ್ತಿದ್ದಾರೆ. ಈ ಪೈಕಿ ತಿರುಮಲದಲ್ಲಿ ಅನ್ನ ಪ್ರಸಾದ ಸ್ವೀಕರಿಸುವವರ ಸಂಖ್ಯೆ ಸುಮಾರು 1.75 ಲಕ್ಷ ಇದ್ದರೆ, ತಿರುಪತಿಯಲ್ಲಿ 17 ಸಾವಿರ ಮಂದಿ ಇದ್ದಾರೆ. ತಿರುಮಲದಲ್ಲಿ 1.95 ಲಕ್ಷ ಮತ್ತು ತಿರುಪತಿಯಲ್ಲಿ 19 ಸಾವಿರ ಸೇರಿದಂತೆ ವಾರಾಂತ್ಯದಲ್ಲಿ ಸುಮಾರು 2.14 ಲಕ್ಷ ಜನರು ಅನ್ನಪ್ರಸಾದ ಸ್ವೀಕರಿಸುತ್ತಿದ್ದಾರೆ.. ಇದಕ್ಕೆ ಅಂದರೆ ಒಂದು ದಿನದಲ್ಲಿ ಅನ್ನಪ್ರಸಾದದ ವೆಚ್ಚ ಸುಮಾರು 38 ಲಕ್ಷ ರೂಪಾಯಿ ಆಗುತ್ತಿದೆ.