ಹಾಸ್ಟೆಲ್ ಊಟದಲ್ಲಿ ಸತ್ತ ಹಾವು ಪತ್ತೆ; ಹಲವರು ಅಸ್ವಸ್ಥ, ವಿದ್ಯಾರ್ಥಿಗಳು ಶಾಕ್!
ಊಟದಲ್ಲಿ ಹಲ್ಲಿ, ಇಲಿ ಬೀಳೋದನ್ನು ನೋಡಿದ್ದೇವೆ.. ಇಲ್ಲಿ ಊಟದಲ್ಲಿ ಹಾವೊಂದು ಬಿದ್ದಿದೆ.. ಇದನ್ನು ತಿಂದ ಹತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದಾರೆ.. ಹಾಸ್ಟೆಲ್ನ ಅರ್ಧದಷ್ಟು ವಿದ್ಯಾರ್ಥಿಗಳು ಊಟ ಮಾಡಿದ ಮೇಲೆ ಆಹಾರದಲ್ಲಿ ಸತ್ತ ಹಾವು ಬಿದ್ದಿರುವುದು ಪತ್ತೆಯಾಗಿದ್ದು, ಎಲ್ಲರಲ್ಲೂ ಆತಂಕ ಮನೆ ಮಾಡಿದೆ..
ಬಿಹಾರದ ಬಂಕಾದ ಲಾಡಿಕೋಲಾದಲ್ಲಿರುವ ಎಂಜಿನಿಯರಿಂಗ್ ಕಾಲೇಜಿನ ಹಾಸ್ಟೆಲ್ ನಲ್ಲಿ ಈ ಘಟನೆ ನಡೆದಿದೆ.. ಅಡುಗೆ ಮಾಡುವಾಗ ಹಾವು ಅದರೊಳಗೆ ಬಿದ್ದಿದ್ದು, ಆಹಾರದಲ್ಲೇ ಸತ್ತುಹೋಗಿದೆ.. ಇದನ್ನು ನೋಡದೇ ಬಹುತೇಕರು ಊಟ ಮಾಡಿದ್ದಾರೆ.. ಊಟ ಮಾಡಿದ ಮೇಲೆ ಹಲವರಿಗೆ ಹೊಟ್ಟೆನೋವು ಕಾಣಿಸಿಕೊಂಡಿದೆ.. ನಂತರ ಪರೀಕ್ಷೆ ಮಾಡಿದಾಗ ಆಹಾರದಲ್ಲಿ ಸತ್ತ ಹಾವು ಇದ್ದಿದ್ದು ಪತ್ತೆಯಾಗಿದೆ.. ಕೂಡಲೇ ವಿದ್ಯಾರ್ಥಿಗಳನ್ನು ಆಸ್ಪತೆಗೆ ದಾಖಲಿಸಲಾಗಿದೆ..
ಗಣೇಶ್ ಪ್ರಸಾದ್, ಮಹೇಶ್ ಕುಮಾರ್, ಸುನ್ನಿ ಕುಮಾರ್, ಸರೋಜ್ ಕುಮಾರ್, ಅಭಿನವ್ ಕುಮಾರ್, ರೂಪೇಶ್ ಕುಮಾರ್, ಜೇಮಿ, ಅಮಿತ್ ರಾಜ್, ಅಮನ್ ಕುಮಾರ್ ಮತ್ತು ಅಶ್ವಿನಿ ಕುಮಾರ್ ಮುಂತಾದ ವಿದ್ಯಾರ್ಥಿಗಳು ತೀವ್ರ ಅಸ್ವಸ್ಥರಾಗಿದ್ದಾರೆ.. ಬಂಕಾ ಸದರ್ ಆಸ್ಪತ್ರೆಗೆ ಆಸ್ಪತ್ರೆಗೆ ದಾಖಲಿಸಿ ಅವರಿಗೆ ಚಿಕಿತ್ಸೆ ಕೊಡಿಸಲಾಗಿದೆ..
ಆಹಾರದಲ್ಲಿ ಹಾವು ಬಿದ್ದಿದ್ದರ ಬಗ್ಗೆ ಕಾಲೇಜು ಆಡಳಿತ ಮಂಡಳಿಗೆ ತಿಳಿಸಿದರೂ ಯಾವುದೇ ತಲೆ ಕೆಡಿಸಿಕೊಳ್ಳಲಿಲ್ಲ ಎಂದು ಆರೋಪಿಸಿ ವಿದ್ಯಾರ್ಥಿಗಳು ಕಾಲೇಜು ಗೇಟ್ ಬಳಿ ಪ್ರತಿಭಟನೆ ಮಾಡಿ ಆಕ್ರೋಶ ಹೊರಹಾಕಿದರು..