CrimeDistricts

ಗುಟ್ಕಾ ತಂದುಕೊಡದಿದ್ದಕ್ಕೆ ಬಾಲಕಿಯನ್ನು ಕೊಂದೇ ಬಿಟ್ಟ; ಆರೋಪಿ ಸಿಕ್ಕಿಬಿದ್ದ ಕಥೆಯೇ ಕುತೂಹಲ!

ಆ ತಾತನಿಗೆ ಗುಟ್ಕಾ ಚಟ.. ಆದ್ರೆ ವಯಸ್ಸಾಗಿದ್ದರಿಂದ ಎದ್ದು ಹೋಗಿ ಖರೀದಿ ಮಾಡಿ ತರೋದಕ್ಕೆ ಆಲಸ್ಯ.. ಹೀಗಾಗಿ ಅಲ್ಲೇ ಆಟ ಆಡುತ್ತಿದ್ದ ಏಳು ವರ್ಷದ ಬಾಲಕಿಗೆ ಗುಟ್ಕಾ ತಂದುಕೊಡುವಂತೆ ಕೇಳಿದ್ದಾನೆ.. ಆಕೆ ಒಲ್ಲೆ ಎಂದಿದ್ದಾಳೆ.. ಇಷ್ಟಲ್ಲೇ ಕೋಪಗೊಂಡ ಆ ವೃದ್ಧ ಊರುಗೋಲಿನಿಂದ ಆ ಬಾಲಕಿಗೆ ನಾಲ್ಕು ಬಾರಿಸಿದ್ದಾನೆ.. ಕೊಟ್ಟ ಏಟಿಗೆ ಆ ಬಾಲಕಿ ಅಲ್ಲಿಯೇ ಸಾವನ್ನಪ್ಪಿದ್ದಾಳೆ.. ಆ ವೃದ್ಧ ಏನು ಮಾಡುವುದು ಎಂದು ಗೊತ್ತಾಗದೇ ಚಾಲವೊಂದಕ್ಕೆ ಮೃತದೇಹವನ್ನು ತುಂಬಿಸಿ ಪಕ್ಕದ ಪಾಳುಬಿದ್ದ ಮನೆಯಲ್ಲಿ ಎಸೆದು ಹೋಗಿದ್ದಾನೆ..

ಈ ಘಟನೆ ನಡೆದು ಅರವತ್ತು ದಿನಗಳಾದರೂ ಆರೋಪಿಯ ಸುಳಿವು ಸಿಕ್ಕಿರಲಿಲ್ಲ.. ಕೊನೆಗೂ ಪೊಲೀಸರು ಆರೋಪಿಯನ್ನು ಹಿಡಿದಿದ್ದಾರೆ.. ಆತ ಕೊಟ್ಟ ಮೇಲಿನ ಕಾರಣ ಕೇಳಿ ಪೊಲೀಸರೇ ದಂಗಾಗಿದ್ದಾರೆ.. ಒಂದು ಗುಟ್ಕಾಗಾಗಿ ಒಂದು ಜೀವ ಹೋಗಿರುವುದು ಕೇಳಿ ಪೊಲೀಸರೇ ಮರುಕ ಪಟ್ಟಿದ್ದಾರೆ..

ಈ ಘಟನೆ ನಡೆದಿರೋದು ಕೊಪ್ಪಳ ಜಿಲ್ಲೆಯ ಕಿನ್ನಾಳ ಗ್ರಾಮದಲ್ಲಿ.. ಏಪ್ರಿಲ್‌ 18ರಂದು ಇದೇ ಗ್ರಾಮದಲ್ಲಿ ಏಳು ವರ್ಷದ ಬಾಲಕಿ ಅನುಶ್ರೀ ನಾಪತ್ತೆಯಾಗಿದ್ದಳು.. ಏಪ್ರಿಲ್‌ 20ರಂದು ಆಕೆಯ ತಂದೆ ರಾಘವೇಂದ್ರ ಕೊಪ್ಪ ಮಹಿಳಾ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು.. ಏಪ್ರಿಲ್‌ 21 ರಂದು ಮೃತ ಅನುಶ್ರೀಯ ದೇಹ ಅವರದೇ ಮನೆಯ ಸಮೀಪದ ಹಳೆದ ಮನೆಯಲ್ಲಿ ಚೀಲವೊಂದರಲ್ಲಿ ಪತ್ತೆಯಾಗಿತ್ತು.. ಪೊಲೀಸರು ಯಾರು ಕೊಲೆ ಮಾಡಿದ್ದಾರೆಂದು ಪತ್ತೆ ಹಚ್ಚಲು ಸಾಕಷ್ಟು ತಲೆ ಕೆಡಿಸಿಕೊಂಡಿದ್ದರು.. ಕೊನೆಗೆ ಅರವತ್ತು ದಿನಗಳ ತನಿಖೆಯ ನಂತರ ಸಿದ್ದಲಿಂಗಯ್ಯ ಎಂಬ ವೃದ್ಧನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಾನೇ ಕೊಲೆ ಮಾಡಿದ್ದಾಗಿ ಬಾಯ್ಬಿಟ್ಟಿದ್ದಾರೆ.. ಅದಕ್ಕೆ ಕಾರಣ ಗುಟ್ಕಾ ಅನ್ನೋ ವಿಚಾರ ಹೇಳಿದ್ದಾರೆ..

ಸಾವನ್ನಪ್ಪಿದ ಬಾಲಕಿ ಅನುಶ್ರೀ ತಂದೆ ರಾಘವೇಂದ್ರಗ ಆರೋಪಿ ಪರಿಚಿತ.. ಪರಿಚಿತನೇ ಈ ಕೃತ್ಯ ಎಸಗಿದ್ದರಿಂದ ಮೊದಲಿಗೆ ಯಾರಿಗೂ ಅನುಮಾನ ಬಂದಿರಲಿಲ್ಲ.. ಆದ್ರೆ ಎಲ್ಲಾ ಕೋನಗಳಿಂದ ತನಿಖೆ ಮಾಡಿದ ಪೊಲೀಸರಿಗೆ ಆರೋಪಿ ಸಿದ್ದಲಿಂಗಯ್ಯ ಮಾತುಗಳ ಬಗ್ಗೆ ಅನುಮಾನ ಮೂಡಿತ್ತು.. ಕೊನೆಗೆ ವಿಚಾರಣೆ ನಡೆಸಿದಾಗ ನಿಜ ಬಯಲಾಗಿದೆ..

 

Share Post