Lifestyle

ನಿರ್ಜಲ ಏಕಾದಶಿಯ ಮಹತ್ವವೇನು..?; ಈ ದಿನ ಯಾಕಿಷ್ಟು ವಿಶೇಷ..?

ಏಕಾದಶಿಯಂದು ಹಲವಾರು ಜನ ಉಪವಾಸ ವ್ರತ ಆಚರಣೆ ಮಾಡುತ್ತಾರೆ.. ಎಲ್ಲಾ ದೇಗುಲಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆಯುತ್ತವೆ.. ಹೀಗಾಗಿ ಹಿಂದೂ ಧರ್ಮದಲ್ಲಿ ಏಕಾದಶಿಗೆ ವಿಶೇಷ ಮಹತ್ವವಿದೆ.. ವರ್ಷದಲ್ಲಿ ತಿಂಗಳಿಗೆ ಎರಡರಂತೆ ಒಟ್ಟು 24 ಏಕಾದಶಿಗಳು ಬರುತ್ತವೆ.. ಅದರಲ್ಲಿ ಅತ್ಯಂತ ಶ್ರೇಷ್ಠ ಹಾಗೂ ಮಹತ್ವವಾದದ್ದು ನಿರ್ಜಲ ಏಕಾದಶಿ.. ಒಂದೊಂದು ಏಕಾದಶಿಗೂ ಒಂದೊಂದು ಹೆಸರಿದೆ.. ಅದೇ ರೀತಿ ಜ್ಯೇಷ್ಠ ಮಾಸದ ಶುಕ್ಲಪಕ್ಷದ ಏಕಾದಶಿಯನ್ನು ನಿರ್ಜಲ ಏಕಾದಶಿ ಅಂತ ಕರೆಯುತ್ತಾರೆ..

ಈ ಏಕಾದಶಿಯಂದು ಯಾವುದೇ ಆಹಾರ, ಅದ್ರಲ್ಲೂ ಒಂದು ಹನಿ ನೀರನ್ನೂ ಕುಡಿಯದೇ ವ್ರತಾಚರಣೆ ಮಾಡುತ್ತಾರೆ.. ಹೀಗಾಗಿ ಇದಕ್ಕೆ ನಿರ್ಜಲ ಏಕಾದಶಿ ಎಂದು ಕರೆಯುತ್ತಾರೆ.. ಹೀಗಾಗಿಯೇ ಈ ವ್ರತ ಅತ್ಯಂತ ಶಕ್ತಿಶಾಲಿ ಎಂಬ ನಂಬಿಕೆ ಇದೆ.. ಇದು ಅತ್ಯಂತ ಮಂಗಳಕರವಾಗಿದ್ದು, ಇದೊಂದು ವ್ರತಾಚರಣೆ ಮಾಡುವುದರಿಂದ ಇಡೀ ವರ್ಷದ 24 ಏಕದಾಶಿಗಳಲ್ಲಿ ಸಿಗುವ ಪುಣ್ಯ ಇದೊಂದರಿಂದಲೇ ಸಿಗಲಿದೆ ಎಂದು ನಂಬಲಾಗುತ್ತದೆ..

ಈ ನಿರ್ಜಲ ಏಕಾದಶಿ ವೇಳೆ ವಿಷ್ಣು ಹಾಗೂ ಲಕ್ಷ್ಮೀ ಇಬ್ಬರನ್ನೂ ಪೂಜಿಸಲಾಗುತ್ತದೆ.. ಈ ವ್ರತವನ್ನು ವಿಧಿವತ್ತಾಗಿ ಮಾಡುವುದರಿಂದ ನಿಮ್ಮ ಪಾಪಗಳು ತೊಳೆದುಹೋಗುತ್ತವೆ.. ನಿಮಗೆ ಯಾವುದೇ ತೊಂದರೆಗಳು ಇದ್ದರೂ ಅವು ನಿವಾರಣೆಯಾಗುತ್ತವೆ.. ಈ ದಿನ ಮಾಡುವ ಉಪವಾಸ ವರ್ಷವಿಡೀ ಮಾಡುವ ಉಪವಾಸಕ್ಕೆ ಸಮ ಎಂದು ಹೇಳಲಾಗುತ್ತದೆ.. ನಾಳೆ ಅಂದರೆ ಜೂನ್‌ 8 ರಂದು ಈ ನಿರ್ಜಲ ಏಕಾದಶಿ ಆಚರಿಸಲಾಗುತ್ತಿದೆ..

ನಿರ್ಜಲ ಏಕಾದಶಿ ದಿನದಂದು ಉಪವಾಸದ ಜೊತೆಗೆ ‘ಓಂ ಅಹ ಅನಿರುದ್ಧಾಯ ನಮಃ’ ಎಂಬ ಮಂತ್ರವನ್ನು 108 ಬಾರಿ ಜಪಿಸಬೇಕು. ಹೀಗೆ ಮಾಡುವುದರಿಂದ ಜೀವನದಲ್ಲಿ ಸುಖ, ಸಮೃದ್ಧಿ ಸಿಗುತ್ತದೆ ಎಂಬ ನಂಬಿಕೆ ಇದೆ.. ಇದರ ಜೊತೆಗೆ ವಿಷ್ಣು ಮತ್ತು ಲಕ್ಷ್ಮಿಯನ್ನು ಪೂಜಿಸುವಾಗ ‘ಓಂ ನಮೋ ವಾಸುದೇವಾಯ ನಮಃ’ ಎಂಬ ಮಂತ್ರವನ್ನು ಪಠಿಸಬೇಕು. ಹೀಗೆ ಮಾಡುವುದರಿಂದ ನಿಮ್ಮ ಯಾವುದೇ ಬೇಡಿಕೆಯನ್ನು ದೇವರು ಈಡೇರಿಸುತ್ತಾರೆ..

 

Share Post