ಬ್ರೆಜಿಲ್ನ ಈ ಊರ ತುಂಬಾ ಮಹಿಳೆಯರೇ ಇರೋದು!; ಪುರುಷರು ಅತಿಥಿಗಳಾಗಿ ಬರ್ತಾರೆ!
ಇಲ್ಲೊಂದು ಊರಿದೆ.. ಈ ಊರಿನಲ್ಲಿ ಬರೀ ಮಹಿಳೆಯರೇ ವಾಸವಿದ್ದಾರೆ.. ಈ ಊರಿನ ಒಟ್ಟು ಮಹಿಳೆಯರ ಸಂಖ್ಯೆ 600ಕ್ಕೂ ಹೆಚ್ಚು.. ಇದ್ರಲ್ಲಿ 20 ರಿಂದ 35 ವರ್ಷ ವಯಸ್ಸಿನ ಮಹಿಳೆಯರೇ ಹೆಚ್ಚಿದ್ದಾರೆ.. ಈ ಹಳ್ಳಿಯಲ್ಲಿ ಕೃಷಿ ಕೆಲಸ ಮಾಡೋದು, ಮನೆ ನಿರ್ವಹಣೆ ಮಾಡೋದು ಎಲ್ಲವೂ ಮಹಿಯರೇ.. ಹುಡುಕಿದರೂ ಈ ಊರಲ್ಲಿ ಒಬ್ಬೇ ಒಬ್ಬ ಪುರುಷ ಸಿಗೋದಿಲ್ಲ..!
ಅಚ್ಚರಿ ಅನಿಸಿದರೂ ನಿಜ.. ಈ ಗ್ರಾಮ ಇರೋದು ಬ್ರೇಜಿಲ್ ದೇಶದಲ್ಲಿ.. ಇದರ ಹೆಸರು ನೋಯಿವಾ ಡೊ ಕಾರ್ಡೆರೊ.. ಇಲ್ಲಿ ಕೃಷಿ ಮೂಲ ಆಧಾರ.. ಎಲ್ಲಾ ಮಹಿಳೆಯರು ಸುರ ಸುಂದರಿಯರು.. ಆದರೂ ಎಲ್ಲರೂ ಕೃಷಿ ಕೆಲಸವನ್ನೇ ಮಾಡುತ್ತಾರೆ.. ಜಪ್ಪಯ್ಯ ಅಂದ್ರೂ ಇವರು ನಗರಕ್ಕೆ ಹೋಗೋದಿಲ್ಲ.. ಅಂದಹಾಗೆ ಈ ಗ್ರಾಮದ ಬಹುತೇಕ ಮಹಿಳೆಯರು ಮದುವೆಯಾಗಿದ್ದಾರೆ, ಮಕ್ಕಳೂ ಇದ್ದಾರೆ.. ಆದ್ರೂ ಕೂಡಾ ಇಲ್ಲಿ ಗಂಡಸರ ಸುಳಿವೇ ಇರುವುದಿಲ್ಲ.. ಇದಕ್ಕೆ ಕಾರಣ ಕೂಡಾ ಇದೇ ಮಹಿಳೆಯರು..
ಇಲ್ಲಿನ ಮಹಿಳೆಯರು ತಮ್ಮ ಗಂಡಂದಿರನ್ನು ನಗರಗಳಿಗೆ ಕೆಲಸ ಮಾಡಲು ಕಳುಹಿಸುತ್ತಾರೆ.. ಅವರಿಗೆ ಗ್ರಾಮಕ್ಕೆ ಬರಲು ವಾರಂತ್ಯದಲ್ಲಿ ಮಾತ್ರ ಅನುಮತಿ ಇರುತ್ತೆ. ಗಂಡು ಮಕ್ಕಳು ಹುಟ್ಟಿದರೂ, ಅವರಿಗೆ 18 ವರ್ಷವಾಗುತ್ತಲೇ ಊರಿನಿಂದ ಆಚೆ ಓಡಿಸಲಾಗುತ್ತದೆ.. ಅವರೂ ಕೂಡಾ ನಗರಕ್ಕೆ ಹೋಗಿ ದುಡ್ಕೊಂಡು ಬರಬೇಕು.. ವಾರಕ್ಕೊಮ್ಮೆಯೋ, ತಿಂಗಳಿಗೊಮ್ಮೊಯೋ ಬರಬೇಕು.. ಆದೂ ಕೂಡಾ ರಾತ್ರಿ ಬಂದು ಬೆಳಗ್ಗೆ ಹೊರಟುಬಿಡಬೇಕು.. ಒಂದು ರೀತಿಯಲ್ಲಿ ಸ್ವಂತ ಗಂಡಂದಿರು, ಮಕ್ಕಳೇ ಇವರಿಗೆ ಅತಿಥಿಗಳು..!!
ಈ ಗ್ರಾಮದಲ್ಲಿನ ಮಹಿಳೆಯರು ಎಂದಿಗೂ ಕೂಡಾ ನಗರದಲ್ಲಿ ವಾಸಿಸಲು ಇಷ್ಟಪಡುವುದಿಲ್ಲ.. ಹೀಗಾಗಿ ತನ್ನ ಗಂಡಂದಿರ ಜೊತೆ ನಗರಕ್ಕೆ ಹೋಗೋದಿಲ್ಲ.. ಬದಲಾಗಿ, ಗ್ರಾಮದಲ್ಲೇ ಮಹಿಳೆಯರಿದ್ದು, ಗಂಡಂದಿರನ್ನು ಮಾತ್ರ ಕಡ್ಡಾಯವಾಗಿ ನಗರಕ್ಕೆ ಕಳುಹಿಸಲಾಗುತ್ತದೆ.. ಮಹಿಳೆಯರು ಗ್ರಾಮೀಣ ಪರಿಸರವನ್ನು ಸವಿಯುತ್ತಾ, ಎಲ್ಲರೂ ಒಟ್ಟಾಗಿ ಕೃಷಿ ಮಾಡುತ್ತಾ ಜೀವನ ಮಾಡುತ್ತಾರೆ..
ಇನ್ನು ಈ ಮಹಿಳೆಯರಲ್ಲಿ ತುಂಬಾ ಒಗ್ಗಟ್ಟಿದೆ.. ಯಾರೂ ಕೂಡಾ ಇದು ನನ್ನದು, ಅದು ನಿನ್ನದು ಎಂದು ಹೇಳೋದಿಲ್ಲ.. ಎಲ್ಲರೂ ಬೆಳೆದಿದ್ದನ್ನು ಹಂಚಿಕೊಂಡು ತಿನ್ನುತ್ತಾರೆ.. ಹಂಚಿಕೊಂಡು ಕೆಲಸ ಮಾಡುತ್ತಾರೆ.. ಇದರಿಂದಾಗಿ ಮಹಿಳೆಯರೆಲ್ಲಾ ಇಲ್ಲಿ ಒಗ್ಗಟ್ಟಾಗಿದ್ದಾರೆ.. ಗ್ರಾಮೀಣ ಪರಿಸರದಲ್ಲಿ ಸುಂದರ ಜೀವನ ಸಾಗಿಸುತ್ತಿದ್ದಾರೆ..