ಪ್ರೇಮ ವೈಫಲ್ಯದಿಂದ ಮನನೊಂದ ಯುವಕ; ಚಲಿಸುತ್ತಿದ್ದ ಬಸ್‌ನಿಂದ ಹಾರಿ ಆತ್ಮಹತ್ಯೆ!
ತಿರುಚ್ಚಿ; ಪ್ರೇಮ ವೈಫಲ್ಯದಿಂದ ಮನನೊಂದಿದ್ದ ಯುವಕನೊಬ್ಬ ಫೋನ್‌ನಲ್ಲಿ ಮಾತನಾಡುತ್ತಲೇ ಚಲಿಸುತ್ತಿದ್ದ ಬಸ್‌ನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.. ತಮಿಳುನಾಡಿನ ತಿರುಚ್ಚಿಯಲ್ಲಿ ಈ ದುರ್ಘಟನೆ ನಡೆದಿದ್ದು, 22 ವರ್ಷದ ಬಿ.ವಿನೋದ್‌ಕುಮಾರ್ ಎಂಬಾತನೇ ಸಾವನ್ನಪ್ಪಿದ ದುರ್ದೈವಿಯಾಗಿದ್ದಾನೆ..
ತಿರುಚ್ಚಿಯ ತುರೈಯೂರ್ನಲ್ಲಿ ಮೃತ ವಿನೋದ್ ಕುಮಾರ್ ಹೂವಿನ ವ್ಯಾಪಾರ ಮಾಡುತ್ತಿದ್ದ ಎಂದು ತಿಳಿದುಬಂದಿದೆ.. ಈತ ಯುವತಿಯೊಬ್ಬಳನ್ನು ಪ್ರೀತಿ ಮಾಡುತ್ತಿದ್ದ.. ಆದ್ರೆ ಆಕೆ ಈತನ ಪ್ರೀತಿಗೆ ಒಪ್ಪದ ಹಿನ್ನೆಲೆಯಲ್ಲಿ ಮನನೊಂದಿದ್ದ ಎಂದು ತಿಳಿದುಬಂದಿದೆ..
ಈ ಕಾರಣಕ್ಕಾಗಿ ವಿನೋದ್ ಕುಮಾರ್, ಪೆರಂಬೂರಿನಿಂದ ತಿರುಚ್ಚಿಗೆ ಬರುತ್ತಿದ್ದ ಬಸ್ಸನ್ನು ಹತ್ತಿದ್ದ.. ಫೋನ್‌ನಲ್ಲಿ ಮಾತನಾಡುತ್ತಿದ್ದ ಆತ, ಬಸ್‌ನ ಪೆರಂಬೂರ್ನ ಆಲತ್ತೂರ್ ಬಳಿಕ ಅಡೈಕ್ಕಂಪಟ್ಟಿ ಬಳಿ ಬರುತ್ತಿದ್ದಂತೆ ಫುಟ್ ಬೋರ್ಡ್ ಹತ್ತಿರ ಹೋಗಿದ್ದಾನೆ.. ಫೋನ್‌ನಲ್ಲಿ ಮಾತನಾಡುತ್ತಲೇ ಹೊರಗೆ ಜಿಗಿದಿದ್ದಾನೆ..
ವಿನೋದ್ ಬಸ್ಸಿನಿಂದ ಹೊರಗೆ ಹಾರಿದ್ದನ್ನು ನೋಡುತ್ತಲೇ ಬಸ್ ಚಾಲಕ ಬಸ್ ನಿಲ್ಲಿಸಿದ್ದಾನೆ.. ತಲೆಗೆ ಗಂಭೀರವಾಗಿ ಗಾಯವಾಗಿದ್ದರಿಂದಾಗಿ ವಿನೋದ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.. ಪಡಲೂರು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದೆ..