NationalPolitics

INDIA ಒಕ್ಕೂಟದ ನಾಯಕನ ಜೊತೆ ವಿಮಾನವೇರಿದ ನಿತೀಶ್‌ ಕುಮಾರ್;‌ ಶುರುವಾಯ್ತು ಢವಢವ!

ನವದೆಹಲಿ; ಲೋಕಸಭೆಯಲ್ಲಿ ಎನ್‌ಡಿಎ ಸರಳ ಬಹುಮತ ಪಡೆದುಕೊಂಡಿದೆ.. ಬಿಜೆಪಿ ಒಂದೇ ಪಾರ್ಟಿ ಬಹುಮತ ಪಡೆಯದ ಕಾರಣ, ಜೆಡಿಯು ಹಾಗೂ ಟಿಡಿಪಿ ಬೆಂಬಲ ಇಲ್ಲದೆ ಸರ್ಕಾರ ರಚನೆ ಮಾಡೋದಕ್ಕೆ ಆಗೋದಿಲ್ಲ.. ಹೀಗಿರುವಾಗಲೇ ಇಂಡಿಯಾ ಮೈತ್ರಿಕೂಡಾ ಜೆಡಿಯುವ ನಿತೀಶ್‌ ಕುಮಾರ್‌ ಹಾಗೂ ಟಿಡಿಪಿಯ ಚಂದ್ರಬಾಬು ನಾಯ್ಡುಗೆ ಗಾಳ ಹಾಕಿವೆ.. ಅದ್ರಲ್ಲೂ ಜೆಡಿಯುವ ನಿತೀಶ್‌ ಕುಮಾರ್‌ಗೆ ಇಂಡಿಯಾ ಒಕ್ಕೂಟ ಉಪಪ್ರಧಾನಿ ಹುದ್ದೆ ನೀಡುವ ಆಫರ್‌ ನೀಡಿದೆ.. ಹೀಗಿರುವಾಗಲೇ ನಿತೀಶ್‌ ಕುಮಾರ್‌ ಅವರ ನಡೆ ಕುತೂಹಲ ಕೆರಳಿಸಿದೆ..

ಇಂದು ದೆಹಲಿಯಲ್ಲಿ ಇಂಡಿಯಾ ಒಕ್ಕೂಟ ಹಾಗೂ ಎನ್‌ಡಿಎನ ಸಭೆಗಳು ನಡೆಯುತ್ತಿವೆ.. ಈ ಸಭೆಗಳಲ್ಲಿ ಪಾಲ್ಗೊಳ್ಳಲು ಎರಡೂ ಕಡೆಯ ನಾಯಕರು ದೆಹಲಿಗೆ ಆಗಮಿಸುತ್ತಿದ್ದಾರೆ.. ಇತ್ತ ನಿತೀಶ್‌ ಕುಮಾರ್‌ ಕೂಡಾ ಪಾಟ್ನಾದಿಂದ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ.. ಕುತೂಹಲದ ವಿಚಾರ ಏನು ಅಂದ್ರೆ ಇಂಡಿಯಾ ಒಕ್ಕೂಟದ ನಾಯಕ ಹಾಗೂ ಆರ್‌ಜೆಡಿ ಪಕ್ಷ ನಾಉಕ ತೇಜಸ್ವಿ ಯಾದವ್‌ ಜೊತೆಯೇ ಅವರು ವಿಶೇಷ ವಿಮಾನದಲ್ಲಿ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ.. ಹೀಗಾಗಿ ನಿತೀಶ್‌ ಕುಮಾರ್‌ ಇಂಡಿಯಾ ಒಕ್ಕೂಟದ ಸಭೆಯಲ್ಲಿ ಪಾಲ್ಗೊಳ್ಳುತ್ತಾರಾ ಅಥವಾ ಎನ್‌ಡಿಎ ಸಭೆಗೇ ಹಾಜರಾಗುತ್ತಾರಾ ಎಂಬುದರ ಬಗ್ಗೆ ಕುತೂಹಲ ಶುರುವಾಗಿದೆ..

ಇಬ್ಬರೂ ನಾಯಕರು ಪಾಟ್ನಾದಿಂದ ವಿಸ್ತಾರ ಯುಕೆ-718ನಲ್ಲಿ ದೆಹಲಿಗೆ ತೆರಳಿದ್ದಾರೆ..   ಬಿಹಾರದಲ್ಲಿ 40 ಲೋಕಸಭಾ ಕ್ಷೇತ್ರಗಳಿದ್ದು, 30 ಸ್ಥಾನಗಳನ್ನು ಎನ್​ಡಿಎ ಗೆದ್ದಿದೆ. ಇದ್ರಲ್ಲಿ ನಿತೀಶ್ ಕುಮಾರ್ ಅವರ ಜೆಡಿಯು ಪಾರ್ಟಿ 12 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.. ಹೀಗಾಗಿ ಇವರ ಬೆಂಬಲ ಎನ್‌ಡಿಎಗೆ ಬೇಕೇಬೇಕಾಗಿದೆ.. ಆದ್ರೆ ಇವರು ಇಂಡಿಯಾ ಒಕ್ಕೂಟ ಸೇರಿಬಿಟ್ಟರೆ ಹೇಗೆ ಎಂಬ ಆತಂಕ ಕೂಡಾ ಎನ್‌ಡಿಎ ನಾಯಕರಲ್ಲಿ ಶುರುವಾಗಿದೆ..

 

Share Post