Politics

ಚಿಕ್ಕಬಳ್ಳಾಪುರದಲ್ಲಿ ಸುಧಾಕರ್‌ಗೆ ಭಾರಿ ಲೀಡ್‌; ರಾಜೀನಾಮೆ ಕೊಡ್ತಾರಾ ಪ್ರದೀಪ್‌ ಈಶ್ವರ್‌..?

ಚಿಕ್ಕಬಳ್ಳಾಪುರ; ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಶಾಸಕ ಪ್ರದೀಪ್‌ ಈಶ್ವರ್‌ ತಮ್ಮ ಶಾಸಕ ಸ್ಥಾನವನ್ನು ಪಣಕ್ಕಿಟ್ಟಿದ್ದರು.. ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಚಿವ ಡಾ.ಕೆ.ಸುಧಾಕರ್‌ ಅವರು ಒಂದು ವೋಟ್‌ ಲೀಡ್‌ ಪಡೆದರೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಹೇಳಿದ್ದರು.. ಈಗ ಸುಧಾಕರ್‌ ಗೆದ್ದಿದ್ದಾರೆ.. ಅಷ್ಟೇ ಅಲ್ಲ, ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಬರೋಬ್ಬರು 20 ಸಾವಿರಕ್ಕೂ ಅಧಿಕ ಮತಗಳ ಲೀಡ್‌ ಪಡೆದಿದ್ದಾರೆ.. ಇದು ಶಾಸಕ ಪ್ರದೀಪ್‌ ಈಶ್ವರ್‌ಗೆ ಭಾರಿ ಮುಖಭಂಗವನ್ನು ತಂದೊಡ್ಡಿದೆ.. ಈಗ ಶಾಸಕ ಪ್ರದೀಪ್‌ ಈಶ್ವರ್‌ ಆಡಿದ ಮಾತನ್ನು ಉಳಿಸಿಕೊಳ್ಳುತ್ತಾರಾ..? ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರಾ..? ಎಂಬ ಪ್ರಶ್ನೆ ಮೂಡಿದೆ..

ಪ್ರದೀಪ್‌ ಈಶ್ವರ್‌ ಅವರು ವಿಧಾನಸಭಾ ಚುನಾವಣೆಯಲ್ಲಿ ಸುಧಾಕರ್‌ ಅವರನ್ನು ಸೋಲಿಸಿದ್ದರು.. ಅದೇ ಉತ್ಸಾಹದಲ್ಲಿ ಲೋಕಸಭಾ ಚುನಾವಣೆಯಲ್ಲೂ ಸುಧಾಕರ್‌ ಅವರನ್ನು ಸೋಲಿಸುತ್ತೇನೆ ಎಂದು ಪ್ರದೀಪ್‌ ಈಶ್ವರ್‌ ಹೇಳಿದ್ದರು.. ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸುಧಾಕರ್‌ ಒಂದು ವೋಟ್‌ ಲೀಡ್‌ ಪಡೆದರೂ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಹೇಳಿದ್ದರು.. ಚುನಾವಣೆ ಮುಗಿದ ಮೇಲೂ ಕೆಪಿಸಿಸಿ ಕಚೇರಿಯಲ್ಲಿ ಕುಳಿತು ಸ್ಪಷ್ಟವಾಗಿ ಇದೇ ಮಾತನ್ನು ಹೇಳಿದ್ದರು.. ಈಗ ಸುಧಾಕರ್‌ ಅವರು ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ 20 ಸಾವಿರಕ್ಕೂ ಅಧಿಕ ಲೀಡ್‌ನಲ್ಲಿ ಗೆದ್ದಿದ್ದಾರೆ.. ಹೀಗಾಗಿ ಪ್ರದೀಪ್‌ ಈಶ್ವರ್‌ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಬಿಜೆಪಿಯವರು ಹಾಗೂ ನೂತನ ಸಂಸದ ಸುಧಾಕರ್‌ ಆಗ್ರಹ ಮಾಡಲಿದ್ದಾರೆ.. ಇದಕ್ಕೆ ಪ್ರದೀಪ್‌ ಈಶ್ವರ್‌ ಸ್ಪಂದಿಸುತ್ತಾರಾ..? ಇಲ್ಲವೇ ಮಾತು ತಪ್ಪುತ್ತಾರಾ ಅನ್ನೋದರ ಬಗ್ಗೆ ಕುತೂಹಲ ಉಂಟಾಗಿದೆ..

 

Share Post