ಅಖಾಡದಲ್ಲಿದ್ದ ಸಚಿವರ ಮಕ್ಕಳು, ಸಂಬಂಧಿಗಳಲ್ಲಿ ಗೆದ್ದವರು ಯಾರು, ಸೋತವರು ಯಾರು..?
ಬೆಂಗಳೂರು; ಈ ಬಾರಿ ಕಾಂಗ್ರೆಸ್ ಪಕ್ಷ ಸಚಿವರ ಮಕ್ಕಳು, ಸಂಬಂಧಿಕರಿಗೆ ಮಣೆ ಹಾಕಿತ್ತು.. ಎಂಟಕ್ಕೂ ಹೆಚ್ಚು ಕಡೆ ಸಚಿವರ ಮಕ್ಕಳು, ಸಂಬಂಧಿಕರಿಗೆ ಟಿಕೆಟ್ ನೀಡಲಾಗಿತ್ತು.. ಇದರಲ್ಲಿ ಹೆಚ್ಚಿನವರು ಗೆದ್ದಿದ್ದಾರೆ.. ಕೆಲವರು ಮಾತ್ರ ಮುಗ್ಗರಿಸಿದ್ದಾರೆ.. ಸಚಿವರು ತಮ್ಮ ಸ್ಥಾನಗಳನ್ನೇ ಪಣಕ್ಕಿಟ್ಟು ಗೆಲುವಿಗಾಗಿ ಹೋರಾಟ ಮಾಡಿದ್ದರು.. ಆದ್ರೆ, ಕೆಲವರು ಇದರಲ್ಲಿ ಮುಗ್ಗರಿಸಿದ್ದಾರೆ.. ಹಾಗಾದರೆ ಸೋತಿದ್ದು ಯಾರು, ಗೆದ್ದಿದ್ದು ಯಾರು ಅನ್ನೋದನ್ನು ನೋಡೋಣ..
ಚಾಮರಾಜನಗರದಲ್ಲಿ ಸಚಿವ ಮಹಾದೇವಪ್ಪ ಪುತ್ರ ಸುನಿಲ್ ಬೋಸ್ ಅವರನ್ನು ಕಣಕ್ಕಿಳಿಸಲಾಗಿತ್ತು.. ಸುನಿಲ್ ಸುಮಾರು ಒಂದು ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.. ಇನ್ನು ಚಿಕ್ಕೋಡಿಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ ಜಾರಕಿಹೊಳಿಯನ್ನು ಕಣಕ್ಕಿಳಿಸಲಾಗಿತ್ತು.. ಇಲ್ಲೂ ಕೂಡಾ ತಮ್ಮ ಮಗಳನ್ನು ಗೆಲ್ಲಿಸಿಕೊಂಡು ಬರುವಲ್ಲಿ ಸತೀಶ್ ಜಾರಕಿಹೊಳಿ ಯಶಸ್ವಿಯಾಗಿದ್ದಾರೆ… ಇನ್ನೊಂದೆಡೆ ಬೀದರ್‌ನಲ್ಲಿ ಸಚಿವ ಈಶ್ವರ ಖಂಡ್ರೆ ಅವರ ಮಗ ಸಾಗರ್ ಖಂಡ್ರೆ ಅವರನ್ನು ಅಖಾಡಕ್ಕಿಳಿಸಲಾಗಿತ್ತು.. ಅಲ್ಲೂ ಕೂಡಾ ಕಾಂಗ್ರೆಸ್‌ಗೆ ಗೆಲುವು ದಕ್ಕಿದೆ.. ಇನ್ನು ದಾವಣಗೆರೆಯಲ್ಲಿ ಸಚಿವ ಮಲ್ಲಿಕಾರ್ಜುನ್ ಪತ್ನಿ ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿತ್ತು.. ಇಲ್ಲೂ ಕೂಡಾ ಕಾಂಗ್ರೆಸ್ ಗೆದ್ದಿದೆ..
ಇನ್ನು ಬಾಗಲಕೋಟೆಯಲ್ಲಿ ಸಚಿವ ಶಿವಾನಂದ ಪಾಟೀಲ್ ಪುತ್ರಿ ಸಂಯುಕ್ತಾ ಪಾಟೀಲ್ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು.. ತುಂಬಾ ಉತ್ಸಾಹದಿಂದ ಪ್ರಚಾರ ಮಾಡಿದ್ದರು.. ಆದ್ರೆ, ಗೆಲುವು ದಕ್ಕಲಿಲ್ಲ.. ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಹೆಬ್ಬಾಳ್ಕರ್ ಕಣದಲ್ಲಿದ್ದರು. ಅವರೂ ಕೂಡಾ ಸೋಲೊಪ್ಪಿಕೊಂಡರು.. ಇನ್ನು ಬೆಂಗಳೂರು ದಕ್ಷಿಣದಲ್ಲಿ ಸಚಿವ ರಾಮಲಿಂಗಾರೆಡ್ಡಿ ಪುತ್ರಿ ಸೌಮ್ಯಾರೆಡ್ಡಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು.. ಆದ್ರೆ ಸೌಮ್ಯಾರೆಡ್ಡಿ ಹೀನಾಯವಾಗಿ ಸೋತಿದ್ದಾರೆ.. ಇನ್ನೊಂದೆಡೆಸಚಿವ ಮಧು ಬಂಗಾರಪ್ಪ ಅವರು ತಮ್ಮ ಸಹೋದರಿ ಗೀತಾ ಶಿವರಾಜ್‌ಕುಮಾರ್ ಅವರನ್ನು ಶಿವಮೊಗ್ಗ ಕ್ಷೇತ್ರದಿಂದ ಕಣಕ್ಕಿಳಿಸಿದ್ದರು.. ಅವರೂ ಕೂಡಾ ಹೀನಾಯವಾಗಿ ಸೋಲನುಭವಿಸಿದ್ದಾರೆ..