ಬಂಧನದ ಭೀತಿಯಿಂದ ಅಜ್ಞಾತ ಸ್ಥಳಕ್ಕೆ ತೆರಳಿದರಾ ಭವಾನಿ ರೇವಣ್ಣ..?
ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ಆರೋಪ ಪ್ರಕರಣದಲ್ಲಿ ಸಂತ್ರಸ್ತೆ ಎನ್ನಲಾದ ಕೆಆರ್ ನಗರದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಪ್ರಜ್ವಲ್ ತಾಯಿ ಭವಾನಿ ರೇವಣ್ಣ ಹೆಸರು ಕೂಡಾ ಕೇಳಿಬಂದಿದೆ.. ಈಗಾಗಲೇ ಎಸ್ಐಟಿ ಎರಡು ಬಾರಿ ನೋಟಿಸ್ ನೀಡಿದ್ದು, ವಿಚಾರಣೆಗೆ ಬರುವಂತೆ ಸೂಚನೆ ಕೊಟ್ಟಿದೆ.. ಎರಡನೇ ನೋಟಿಸ್ನಂತೆ ಅವರು ನಾಳೆ ಎಸ್ಐಟಿ ವಿಚಾರಣೆಗೆ ಹಾಜರಾಗಬೇಕಿದೆ.. ಆದ್ರೆ, ನೋಟಿಸ್ ಬೆನ್ನಲ್ಲೇ ಭವಾನಿ ರೇವಣ್ಣ ಅವರು ಎಲ್ಲಿದ್ದಾರೆ ಎಂಬುದೇ ಗೊತ್ತಾಗುತ್ತಿಲ್ಲ.. ನಿರೀಕ್ಷಣಾ ಜಾಮೀನಿಗಾಗಿ ಕೋರ್ಟ್ ಮೊರೆ ಹೋಗಿರುವ ಭವಾನಿ ರೇವಣ್ಣ ಅವರು ಅಜ್ಞಾತ ಸ್ಥಳಕ್ಕೆ ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ..
ಎಸ್ಐಟಿ ಅಧಿಕಾರಿಗಳು ಮೊದಲು ಒಂದು ನೋಟಿಸ್ ನೀಡಿದ್ದರು.. ಇದಕ್ಕೆ ಭವಾನಿ ರೇವಣ್ಣ ಉತ್ತರಿಸಿರಲಿಲ್ಲ.. ಇದೀಗ ಜೂನ್ 1ಕ್ಕೆ ವಿಚಾರಣೆಗೆ ಬರುವಂತೆ ಮತ್ತೊಂದು ನೋಟಿಸ್ ಜಾರಿ ಮಾಡಿದ್ದಾರೆ.. ಈ ಹಿನ್ನೆಲೆಯಲ್ಲಿ ಎಸ್ಐಟಿಗೆ ಪತ್ರ ಬರೆದಿರುವ ಭವಾನಿ ರೇವಣ್ಣ ಅವರು, ಅವಶ್ಯವಿದ್ದರೆ ತನಿಖೆಗೆ ತಮ್ಮ ಚೆನ್ನಾಂಬಿಕಾ ಮನೆಯಲ್ಲಿ ಲಭ್ಯವಿರುವುದಾಗಿ ತಿಳಿಸಿದ್ದರು.. ಆದ್ರೆ ಭವಾನಿ ರೇವಣ್ಣ ಅವರು ಈಗ ಎಲ್ಲೂ ಕಾಣಿಸುತ್ತಿಲ್ಲ.. ಹೀಗಾಗಿ ಬಂಧನದ ಭೀತಿಯಿಂದ ಅಜ್ಞಾತ ಸ್ಥಳಕ್ಕೆ ಹೋದರಾ ಎಂಬ ಅನುಮಾನ ಮೂಡಿದೆ..
ಪ್ರಕರಣ ಬೆಳಕಿಗೆ ಬಂದಾಗ ಭವಾನಿ ರೇವಣ್ಣ ಅವರು ಹೊಳೆನರಸೀಪುರದ ಮನೆಯಲ್ಲೇ ಇದ್ದರು.. ಆದ್ರೆ ಈಗ ಹಾಸನದಲ್ಲೂ ಇಲ್ಲ, ತವರು ಮನೆ ಸಾಲಿಗ್ರಾಮದಲ್ಲೂ ಇಲ್ಲ.. ಸಾಲಿಗ್ರಾಮದ ಮನೆಗೂ ಬೀಗ ಹಾಕಲಾಗಿದೆ.. ಹಾಸನ ಮನೆಯಲ್ಲೂ ಯಾರೂ ಇಲ್ಲ.. ಸಾಲಿಗ್ರಾಮದ ಮನೆಯಿಂದ ಭವಾನಿ ರೇವಣ್ಣ ಬೇರೆ ಕಡೆ ಹೋಗಿದ್ದಾರೆ ಎನ್ನಲಾಗುತ್ತಿದೆ.. ಒಂದು ವಾರಕ್ಕೆ ಮುಂಚೆ ಸಾಲಿಗ್ರಾಮಕ್ಕೆ ಬಂದಿದ್ದ ಭವಾನಿ ರೇವಣ್ಣ ಅವರು ಬಂಧನದ ಭೀತಿಯಿಂದ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ ಎಂದು ಹೇಳಲಾಗುತ್ತಿದೆ.. ಈ ನಡುವೆ ಭವಾನಿ ರೇವಣ್ಣ ಅವರು ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿಯ ಕತೆ ಏನು ಎಂಬುದರ ಬಗ್ಗೆ ಕುತೂಹಲ ಮೂಡಿಸಿದೆ..