CrimeNational

ನೇಹಾ ಹಿರೇಮಠ್‌ ಮಾದರಿಯಲ್ಲೇ ಮತ್ತೊಂದು ಯುವತಿಯ ಭೀಕರ ಹತ್ಯೆ!; Video ಇದೆ!

ಅಮರಾವತಿ; ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ್‌ ಕೊಲೆ ಮಾಡಿದ ರೀತಿಯಲ್ಲೇ ಮತ್ತೊಬ್ಬ ಯುವತಿಯ ಭೀಕರ ಕೊಲೆ ನಡೆದಿದೆ.. ಆಂಧ್ರಪ್ರದೇಶದ ಏಲೂರು ಜಿಲ್ಲೆಯಲ್ಲಿ ಇಂತಹದ್ದೊಂದು ದಾರುಣ ಘಟನೆ ನಡೆದಿದೆ.. ಪಾಗಲ್‌ ಪ್ರೇಮಿಯೊಬ್ಬ ಹಾಡಹಗಲೇ ಎಲ್ಲರ ಮುಂದೆಯೇ ಮಚ್ಚಿನಿಂದ ಕೊಚ್ಚಿ ಯುವತಿಯನ್ನು ಕೊಲೆ ಮಾಡಿದ್ದಾನೆ..

22 ವರ್ಷದ ಜಕ್ಕು ರತ್ನ ಗ್ರೇಸ್‌ ಎಂಬಾಕೆಯೇ ದಾರುಣವಾಗಿ ಕೊಲೆಯಾದ ಯುವತಿ.. 23 ವರ್ಷದ ಏಸುರತ್ನಂ ಎಂಬಾತ ಈ ಕೊಲೆ ಮಾಡಿದ್ದಾರೆ.. ಮುಚ್ಚಿನಿಂದ ಹೊಡೆದು ಬರ್ಬರವಾಗಿ ಯುವತಿಯ ಹತ್ಯೆ ಮಾಡಲಾಗಿದೆ.. ಇಬ್ಬರೂ ಸ್ನೇಹಿತರಾಗಿದ್ದರು.. ಆದ್ರೆ ಆರೋಪಿ ಏಸುರತ್ನಂ ಹಲವು ದಿನಗಳಿಂದ ಪ್ರೀತಿಸುವಂತೆ ಜಕ್ಕು ರತ್ನ ಗ್ರೇಸ್‌ ಹಿಂದೆ ಬಿದ್ದಿದ್ದನಂತೆ.. ಆದ್ರೆ ಪ್ರೀತಿಗೆ ನಿರಾಕರಿಸಿದ್ದಕ್ಕೆ ಆರೋಪಿ ಮುಚ್ಚಿನಿಂದ ದಾಳಿ ಮಾಡಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ ಎಂದು ತಿಳಿದುಬಂದಿದೆ..

ಮಚ್ಚಿನಿಂದ ದಾಳಿ ಮಾಡಿರುವ ಆರೋಪಿ ಏಸು ರತ್ನಂ ಯುವತಿ ಕೆಳಗೆ ಬೀಳುತ್ತಿದ್ದಂತೆ ಕತ್ತು ಸೀಳಿ ಕೊಲೆ ಮಾಡಿದ್ದಾನೆ.. ಅನಂತರ ತಾನೂ ಆತ್ಮಹತ್ಯೆಗೆ ಯತ್ನ ಮಾಡಿದ್ದಾನೆ.. ಇದೇ ವೇಳೆ ಸ್ಥಳೀಯರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ.. ಆರೋಪಿಯ ಸ್ಥಿತಿ ಕೂಡಾ ಚಿಂತಾಜನಕವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.. ಆರೋಪಿ ದಾಳಿ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ..

 

Share Post