CrimeDistricts

ಬೆಳ್ಳಂಬೆಳಗ್ಗೆ ಕಾರ್ಯಾಚರಣೆ; ಎಸ್‌ಡಿಪಿಐ, ಪಿಎಫ್‌ಐನ 7 ಮುಖಂಡರ ಅರೆಸ್ಟ್‌

ಬೆಳಗಾವಿ; ಇಂದು ಬೆಳಗ್ಗೆ ಬೆಳಗಾವಿಯ ಮಾರ್ಕೆಟ್‌ ಠಾಣೆ ಪೊಲೀಸರು ಪಿಎಫ್‌ಐ ಹಾಗೂ ಎಸ್‌ಡಿಪಿಐನ ಏಳು ಮುಖಂಡರನ್ನು ಬಂಧಿಸಿದ್ದಾರೆ. ಆಜಂ ನಗರದ ನಿವಾಸಿ ಪಿಎಫ್‌ಐ ಸಂಘಟನೆಯ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಝಕೀವುಲ್ಲಾ ಫೈಜಿ, ಅಸಾದ್‌ಖಾನ್ ಬಡಾವಣೆ ನಿವಾಸಿ ಎಸ್‌ಡಿಪಿಐ ಜಿಲ್ಲಾ ಘಟಕದ ಅಧ್ಯಕ್ಷ ಅಬೀದ್ ಖಾನ್ ಕಡೋಲಿ, ಬದ್ರುದ್ದೀನ್ ಪಟೇಲ್, ಶಿವಾಜಿ ನಗರ ನಿವಾಸಿ ಸಲಾವುದ್ದೀನ್ ಖಿಲೆವಾಲೆ, ಅಮನ್ ನಗರ ನಿವಾಸಿ ಸಮೀವುಲ್ಲಾ ಪೀರ್ಜಾದೆ, ಬಾಕ್ಸೈಟ್ ರೋಡ್ ಪ್ರದೇಶದ ನಿವಾಸಿ ಜಹೀರ್ ಘೀವಾಲೆ, ವಿದ್ಯಾಗಿರಿ ನಿವಾಸಿ ರೆಹಾನ್ ಅಜೀಜ್(25) ಬಂಧಿತರು.

ಸಿಆರ್‌ಪಿಸಿ 110 ಸೆಕ್ಷನ್ ಅಡಿ ಪ್ರಕರಣ ದಾಖಲಿಸಿ, ಏಳೂ ಮಂದಿಯನ್ನು ಬಂಧಿಸಲಾಗಿದೆ. ಇಂದು ಬೆಳಗಿನ ಜಾವ 4 ಗಂಟೆ ಸುಮಾರಿಗೆ ಡಿಸಿಸಿ ರವೀಂದ್ರ ಗಡಾದಿ ನೇತೃತ್ವದಲ್ಲಿ ದಾಳಿ ಮಾಡಿ, ವಶಕ್ಕೆ ಪಡೆಯಲಾಗಿದೆ. ವೈದ್ಯಕೀಯ ತಪಾಸಣೆ ಬಳಿಕ ಹಿಂಡಲಗಾ ‌ಜೈಲಿಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Share Post