ತಾಯಿ, ಮಗಳು, ಮೊಮ್ಮಗ ಒಟ್ಟಿಗೆ ಸಾವು!; ಅಲ್ಲಿ ನಡೆದಿದ್ದಾದರೂ ಏನು..?
ಕೊಪ್ಪಳ; ರಾಜ್ಯದಲ್ಲಿ ನಿಗೂಢ ಸಾವುಗಳ ಸಂಖ್ಯೆ ಹೆಚ್ಚುತ್ತಲೇ ಇವೆ.. ಮನೆ ಮಂದಿಯೆಲ್ಲಾ ಸಾವನ್ನಪ್ಪುವ ಪ್ರಕರಣಗಳೂ ಹೆಚ್ಚು.. ಇದೇ ರೀತಿಯ ಘಟನೆಯೊಂದು ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ.. ಒಂದೇ ಮನೆಯಲ್ಲಿ ತಾಯಿ, ಮಗಳ ಹಾಗೂ ಮೊಮ್ಮಗನ ಶವ ಪತ್ತೆಯಾಗಿದೆ.. ಮೂವರೂ ಕೂಡಾ ನಿಗೂಢವಾಗಿ ಸಾವನ್ನಪ್ಪಿದ್ದಾರೆ.. ಇದು ಹತ್ಯೆಯೋ, ಆತ್ಮಹತ್ಯೆಯೋ ಗೊತ್ತಾಗುತ್ತಿಲ್ಲ..
ಕೊಪ್ಪಳದ ಹೊಸಲಿಂಗಾಪುರದ ಮನೆಯಲ್ಲಿ ಮೂವರ ಮೃತದೇಹಗಳು ಸಿಕ್ಕಿವೆ.. ಇಂದು ಬೆಳಗಿನ ಜಾವ ಈ ಮೂವರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.. ಮೃತರನ್ನು ರಾಮೇಶ್ವರಿ (50), ಆಕೆಯ ಮಗಳು ವಸಂತ (32) ಹಾಗೂ ಮೊಮ್ಮನ ಸಾಯಿಧರ್ಮ ತೇಜ (5) ಮೃತಪಟ್ಟವರು ಎಂದು ತಿಳಿದುಬಂದಿದೆ..
ಇವರು ಗ್ರಾಮದ ಯಾದವ ಕುಟುಂಬಕ್ಕೆ ಸೇರಿದವರು ಎಂದು ತಿಳಿದುಬಂದಿದೆ.. ಕೊಪ್ಪಳದ ಮುನಿರಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.. ಘಟನೆಗೆ ನಿಖರವಾದ ಕಾರಣ ಗೊತ್ತಾಗಿಲ್ಲ.. ಪೊಲೀಸರು ತನಿಖೆ ನಡೆಸುತ್ತಿದ್ದಾರೆ..